ಮೊಳಕೆ ಕಾಳುಗಳಿಂದಾಗುವ ಪ್ರಯೋಜನಗಳೇನು ಗೊತ್ತಾ..?
Benifits of Sprouted Seeds : ಕಾಳುಗಳನ್ನು ನೆನೆಸಿ ಅದರಿಂದ ತಿಳಿ ಮೊಳಕೆ ಬಂದರೆ ಅದನ್ನು ಮೊಳಕೆಯೊಡೆದ ಎನ್ನುತ್ತಾರೆ. ಈ ಮೊಳಕೆ ಕಾಳುಗಳಿಂದ ದೇಹಕ್ಕೆ ಸಾಕಷ್ಟು ಅನುಕೂಲತೆಗಳಿವೆ. ಅವುಗಳ ಸೇವನೆಯು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
Health Tips : ಮೊಳಕೆಗಳು ಫೈಬರ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಕಬ್ಬಿಣ, ಖನಿಜಗಳು ಮತ್ತು ವಿಟಮಿನ್‌ಗಳನ್ನು ಒಳಗೊಂಡಿರುವ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ವಿಶೇಷವಾಗಿ ಸಸ್ಯಾಹಾರಿಗಳಿಗೆ ಮೊಳಕೆಕಾಳುಗಳು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅವುಗಳನ್ನು ಸೇವಿಸುವುದು ಪ್ರಯೋಜನಕಾರಿ ಎನ್ನಲಾಗುತ್ತದೆ.
ಹಾಗಾದರೆ ಈ ಮೊಳಕೆ ಕಾಳುಗಳ ಸೇವನೆಯಿಂದ ದೇಹಕ್ಕಾಗುವ ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದೆ ಓದಿ....
ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ
ಮೊಳಕೆ ಕಾಳು ತಿನ್ನುವುದರಿಂದ ಶಕ್ತಿಯನ್ನು ಹೆಚ್ಚಿಸಬಹುದು. ಈ ಮೊಳಕೆಕಾಲೂಗಳನ್ನು ಖನಿಜಗಳು ಮತ್ತು ವಿಟಮಿನ್‌ಗಳ ಉತ್ತಮ ಮೂಲವೆಂದು ಹೇಳಲಾಗುತ್ತದೆ. ಇದು ದೇಹದ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಹೃದಯಕ್ಕೆ ಪ್ರಯೋಜನಕಾರಿ
ಮೊಳಕೆ ಕಾಳುಗಳು ಉತ್ಕರ್ಷಣ ನಿರೋಧಕಗಳಾಗಿವೆ. ಇದರ ನಿಯಮಿತ ಸೇವನೆಯು ರಕ್ತನಾಳಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ-Weight Loss Tips: ಕೆಲವೇ ವಾರಗಳಲ್ಲಿ ಸ್ಲಿಮ್ ಆಗಬೇಕೆ? ನಿತ್ಯ 20ನಿಮಿಷ ಈ ಕೆಲಸ ಮಾಡಿ
ಜೀರ್ಣಕ್ರಿಯೆಗೆ ಪ್ರಯೋಜನಕಾರಿ
ಮೊಳಕೆಯೊಡೆದ ಕಾಳು ಮಲಬದ್ಧತೆ ಮತ್ತು ಜೀರ್ಣಕ್ರಿಯೆಗೆ ಉತ್ತಮವೆಂದು ಹೇಳಲಾಗುತ್ತದೆ. ಇದರಲ್ಲಿ ನಾರಿನಂಶವು ಅಧಿಕವಾಗಿದೆ. ಇದು ಹೊಟ್ಟೆಯನ್ನು ಸ್ವಚ್ಛವಾಗಿಡಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯಕವಾಗುತ್ತದೆ.
ರಕ್ತಹೀನತೆಯನ್ನು ಸುಧಾರಿಸುತ್ತದೆ
ಮೊಳಕೆಗಳಲ್ಲಿ ಕಬ್ಬಿಣ ಮತ್ತು ರಂಜಕವಿದೆ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತಹೀನತೆ ಇರುವವರು ಮೊಳಕೆ ಕಾಳುಗಳನ್ನು ಪ್ರತಿದಿನ ಸೇವಿಸಬೇಕು.
ತ್ವಚೆಗೆ ಪ್ರಯೋಜನಕಾರಿ
ಮೊಳಕೆ ಕಾಳನ್ನು ಪ್ರತಿನಿತ್ಯ ಸೇವಿಸುವುದರಿಂದ ತ್ವಚೆಯನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. ಇದರಲ್ಲಿ ಕಂಡುಬರುವ ಪೋಷಕಾಂಶಗಳು ಚರ್ಮವನ್ನು ತುರಿಕೆ ಮತ್ತು ಇತರ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ-Monsoon Makeup Tips: ಮಳೆಗಾಲದಲ್ಲಿ ಮೇಕಪ್ ಹಾಳಾಗದಿರಲು ಇಲ್ಲಿವೆ ಸಿಂಪಲ್ ಸಲಹೆಗಳು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=38l6m8543Vk
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.