Jaggery : ಪ್ರತಿಯೊಂದು ಆಚರಣೆಯಲ್ಲಿ ಸಿಹಿ ಪದಾರ್ಥ ಇಲ್ಲವಾದರೆ ಆ ಆಚರಣೆ ಅಪೂರ್ಣವೆನಿಸುತ್ತದೆ. ಅದರಲ್ಲೂ ಹಿಂದೂ ಸಂಪ್ರದಾಯಗಳಲ್ಲಿ ಸಿಹಿಗೆ ಅದರದೇ ಆದ ಮೌಲ್ಯವಿದೆ. ಸ್ವೀಟ್‌ ಹೆಚ್ಚು ಇಷ್ಟಪಡುವವರು ಬೆಲ್ಲವನ್ನು ತಿನ್ನುತ್ತಾರೆ. ಹಾಗದರೆ ಈ ಶುದ್ಧ ಬೆಲ್ಲವನ್ನು ತಿನ್ನುವುದರಿಂದಾಗುವ ಪ್ರಯೋಜನಗಳೇನು ಎಂದು ತಿಳಿಯೋಣ ಬನ್ನಿ.


COMMERCIAL BREAK
SCROLL TO CONTINUE READING

ಬೆಲ್ಲ ಹೆಚು ಉಷ್ಣ ಪದಾರ್ಥವಾಗಿದೆ. ಊಟದ ನಂತರ ನೀವು ಒಂದು ಸಣ್ಣ ತುಂಡು ಬೆಲ್ಲವನ್ನು ತಿಂದರೆ ನಿಮ್ಮ ಹೊಟ್ಟೆಯ ಸಮಸ್ಯೆಗಳಾದಂತಹ, ಅಜೀರ್ಣ, ಗ್ಯಾಸ್‌ಗಳಿಂದ ಮುಕ್ತಿ ಪಡೆಯಬಹುದು. ಈ ಗ್ಯಾಸ್‌ ಸಮಸ್ಯೆ ಪ್ರತಿಯೊಬ್ಬರಿಗೂ ಕಾಡುತ್ತಿರುವ ಸಮಸ್ಯೆಯಾಗಿದೆ ಇದರಿಂದ ಬೆಸೋತ್ತಿರುವವರು ಇದ್ದಾರೆ. ಅಂತವರಿಗೆ ಸುಲಭವಾದ ಪರಿಹಾರವೆಂದರೆ ಮಧ್ಯಾಹ್ನ ಊಟದ ನಂತರ ಒಂದು ತುಣುಕು ಬೆಲ್ಲವನ್ನು ಸೇವಿಸುವುದು.


ಇದನ್ನೂ ಓದಿ-ಕೈ ಕಾಲುಗಳೆಲ್ಲಾ ತೆಳ್ಳಗಿದ್ದು ಹೊಟ್ಟೆಯ ಭಾಗದಲ್ಲಿ ಮಾತ್ರ ಕೊಬ್ಬು ಅಡಗಿದೆಯೇ? ಹಾಗಿದ್ದರೆ ಈ ಪಾನೀಯ ಸೇವಿಸಿ


ಶೀತ, ನೆಗಡಿ ಅಥವಾ ಜ್ವರವಿದ್ದರೆ ರಾತ್ರಿ ಮಲಗುವ ಮುನ್ನ ಸಣ್ಣ ತುಣುಕು ಬೆಲ್ಲವನ್ನು ತಿಂದು ಬೆಚ್ಚಗಿನ ಹಾಲು ಕುಡಿದರೆ ಇದು ಚರ್ಮದ ಹೊಳಪನ್ನು ಕಾಪಾಡುತ್ತದೆ. ಊಟದ ಬಳಿಕ ಬೆಲ್ಲ ತಿನ್ನುವುದರಿಂದ ಯಂಗ್‌ ಆಗಿ ಕಾಣಬಹುದು. ಇದಲ್ಲದೇ ಹುರಿದ ಶೇಂಗಾ ಬೀಜದೊಂದಿಗೆ ಬೆಲ್ಲವನ್ನು ತಿನ್ನುವುದರಿಂದ ದೇಹದಲ್ಲಿ ಕೆಂಪು ರಕ್ತ ಕಣಗಳು ಹೆಚ್ಚುತ್ತವೆ ಮತ್ತು ಮೂಳೆಗಳು ಗಟ್ಟಿಯಾಗುತ್ತವೆ.


ಎನಿಮಿಯಾದಂತಹ ಕಣ್ಣಿನ ಸಮಸ್ಯೆಗೆ ಬೆಲ್ಲದ ಸೇವನೆ ಪರಿಹಾರವಾಗಿದೆ. ಹೌದು ನಿಮ್ಮ ಕಣ್ಣಿನ ದೃಷ್ಟಿ ತೀಕ್ಷ್ಣವಾಗಬೇಕೆಂದರೆ ಬೆಲ್ಲವನ್ನು ತಿನ್ನುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು, ಇಲ್ಲವಾದರೇ ತುಪ್ಪ ಮತ್ತು ಬೆಲ್ಲವನ್ನು ಬೆರೆಸಿ ದೋಸೆ, ಚಪಾತಿ ಅಥವಾ ರೊಟ್ಟಿಯ ಜೊತೆ ತಿನ್ನುವುದು ರುಯಚಿಯ ಜೊತೆಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. 


ನಿಮಗೆ ಪ್ರತಿದಿನ ಸಿಹಿ ತಿನ್ನುವ ಅಭ್ಯಾಸವಿದ್ದರೆ ನೀವು ಬೆಲ್ಲವನ್ನು ಶೇಂಗಾಬೀಜದ ಜೊತೆ ಲಾಡು ರೀತಿಯಲ್ಲಿ ಮಾಡಿ ತಿನ್ನಿ ಇದು ಚಳಿಗಾಲದಲ್ಲಿ ನಿಮ್ಮ ದೇಹದ ತಂಪು ಮತ್ತು ಉಷ್ಣತೆಯನ್ನು ಸಮವಾಗಿಡುತ್ತದೆ. 


ಇದನ್ನೂ ಓದಿ-ನೀವು ಜಿಮ್‌ಗೆ ಹೋಗ್ತೀರಾ..? ಹಾಗಿದ್ರೆ, ನಿಮಗೆ ಈ 7 ಪ್ರಮುಖ ಅಂಶಗಳು ತಿಳಿದಿರಲೇಬೇಕು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.