How We Should Get Connected With Our Own Body: ನಿಮ್ಮ ದೇಹದೊಂದಿಗೆ ನೀವೇ ಸಂಪರ್ಕ ಸಾಧಿಸುವುದು ನಿಮ್ಮ ದೈಹಿಕ, ಮಾನಸಿಕ ಮತ್ತು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವ ಒಂದು ಉತ್ತಮ ಮಾರ್ಗವಾಗಿದೆ. ನಿಮ್ಮ ದೇಹ ಮತ್ತು ಅದರ ಅಗತ್ಯಗಳಿಗೆ ನೀವು ಹೊಂದಿಕೊಳ್ಳಲು ಹಲವು ಮಾರ್ಗಗಳಿವೆ. ನಿಮ್ಮ ದೇಹವನ್ನು ಆಲಿಸುವ ಮೂಲಕ ಮತ್ತು ಪೋಷಣೆ ಮತ್ತು ಬೆಂಬಲದೊಂದಿಗೆ ಅದರ ಅಗತ್ಯಗಳಿಗೆ ಪ್ರತಿಕ್ರಿಯಿಸುವ ಮೂಲಕ, ನಿಮ್ಮೊಂದಿಗೆ ನಿಮ್ಮ ಸಂಬಂಧವನ್ನು ನೀವು ಬಲಪಡಿಸಬಹುದು ಮತ್ತು ನಿಮ್ಮ ಒಟ್ಟಾರೆ ಯೋಗಕ್ಷೇಮವನ್ನು ನೀವು ಸುಧಾರಿಸಬಹುದು.


COMMERCIAL BREAK
SCROLL TO CONTINUE READING

ಇಂತಹ  ಪರಿಸ್ಥಿತಿಯಲ್ಲಿ, ನಮ್ಮ ದೇಹವನ್ನು ನಾವು ಹೇಗೆ ಸಂಪರ್ಕಿಸಬೇಕು ಎಂಬುದನ್ನು ಕಲಿಯದೆ ಬದುಕುವುದು ಒತ್ತಡಭರಿತ ಮತ್ತು ನಿರಾಶಾದಾಯಕವಾಗಿರುತ್ತದೆ ಎಂಬುದು ಇಲ್ಲಿ ಗಮನಾರ್ಹ. ಏಕೆಂದರೆ ನಮ್ಮ ದೇಹವನ್ನು ಸಂತೋಷಪಡಿಸುವುದು ಜನರು ನಮ್ಮತ್ತ ಹೇಗೆ ನೋಡುತ್ತಾರೆ ಎಂಬುದಕ್ಕಿಂಗ ಹೆಚ್ಚು ನಾವು ನಮ್ಮನ್ನು ಹೇಗೆ ನೋಡುತ್ತೇವೆ ಎಂಬುದನ್ನು ಅವಲಂಭಿಸಿದೆ.  ನಮ್ಮ ದೇಹದ ಜೊತೆಗೆ ನಮ್ಮ ಸಂಪರ್ಕವನ್ನು ಹೇಗೆ ಬಲಪಡಿಸಬೇಕು ಎಂಬುದಕ್ಕೆ ಇಂದು ನಾವು ನಿಮಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ....


ನಿಮ್ಮ ದೇಹವನ್ನು ನೀವು ಪ್ರೀತಿಸಲು ಕಲಿಯಲು ಇತರ ಜನರ ದೇಹಗಳನ್ನು ನಿರ್ಣಯಿಸುವುದನ್ನು ಮೊದಲು ನಿಲ್ಲಿಸಿ. ನಿಮ್ಮ ದೇಹದ ಪ್ರತಿಯೊಂದು ಭಾಗ ಏನು ಹೇಳುತ್ತಿದೆ ಎಂಬುದರ ಬಗ್ಗೆ ನಾವು ಹೆಚ್ಚಿನ ಗಮನಹರಿಸಿ. ನಿಮ್ಮ ಬಗ್ಗೆ ನೀವೇ ದಯೆ ತೋರಿ ಮತ್ತು ನಿಮ್ಮ ದೇಹವನ್ನು ಪ್ರಶಂಸಿಸಿ. ಸಣ್ಣ ಸಾಧನೆಗಳು ಮತ್ತು ಯಶಸ್ಸಿಗೆ ನಿಮ್ಮನ್ನು ನೀವು ಪ್ರಶಂಸಿಸುವ ಮೂಲಕ ನಿಮ್ಮ ದೇಹದ ಸೌಂದರ್ಯವನ್ನು ಅನುಭವಿಸಿ.


ಮೈಂಡ್ ಫುಲ್ ನೆಸ್ಸ್ ಅಭ್ಯಾಸ ಮಾಡುವುದು ನಮ್ಮ ದೇಹದ ಮೇಲೆ ನಮಗೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಅದು ಯೋಗಾಸನಗಳ ಕುರಿತು ಯಾವುದೇ ಯೋಗ ತರಗತಿ ಅಥವಾ ಯೂಟ್ಯೂಬ್ ಟ್ಯುಟೋರಿಯಲ್ ಪ್ರೋಗ್ರೆಸಿವ್ ಮಸಲ್ ರೀಲ್ಯಾಕ್ಷೆಷನ್ ವ್ಯಾಯಾಮಗಳ ಮೂಲಕ ನಮಗೆ ಮಾರ್ಗದರ್ಶನ ನೀಡಬಹುದು.


ಪ್ರತಿದಿನ ನಿಮ್ಮ ದೇಹದ ಕಾಳಜಿವಹಿಸುವುದನ್ನು ರೂಢಿ ಮಾಡಿಕೊಳ್ಳಿ. ನಿಮ್ಮ ದೇಹಕ್ಕೆ ಮಸಾಜ್ ಮಾಡಲು ಅಥವಾ ಸ್ವಲ್ಪ ಚರ್ಮದ ಆರೈಕೆ ಮಾಡಲು ನೀವು ಸ್ವಲ್ಪ ಸಮಯವನ್ನು ನಿಗದಿಪಡಿಸಿ. ನಿಮ್ಮ ದೇಹಕ್ಕೆ ಪ್ರೀತಿಯನ್ನು ತೋರಿಸುವುದನ್ನು ಅಭ್ಯಾಸ ಮಾಡಿ, ಅದು ಕಾಲಾಂತರದಲ್ಲಿ ಸ್ವಾಭಾವಿಕವಾಗಿ ನಿಮಗೆ ಬರುತ್ತದೆ.


ಇದನ್ನೂ ಓದಿ-Diabetes And Cancer: ಮೊಟ್ಟೆ ಸೇವನೆಯಿಂದ ಡೈಯಾಬಿಟಿಸ್, ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆಯೇ? ಇಲ್ಲಿ ತಿಳಿದುಕೊಳ್ಳಿ!


ನಿಮ್ಮ ಉಪಸ್ಥಿತಿಯ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಿ ಹಾಗೂ ನಿಮ್ಮನ್ನು ಟೀಕಿಸಲು ಬಯಸುವ ಇತರರಿಗೆ ಪ್ರೀತಿಯನ್ನು ನೀಡಿ. ನಿಮ್ಮೊಂದಿಗಿನ ನಿಮ್ಮ ಸಂಬಂಧವನ್ನು ನೀವು ಸುಧಾರಿಸಿದಂತೆ, ನಿಮ್ಮ ಆಂತರಿಕ ವಿಶ್ವಾಸವು ಹೆಚ್ಚಾಗುತ್ತದೆ. ನೀವು ಪ್ರೀತಿಪಾತ್ರರು ಮತ್ತು ನೀವೂ ವಿಶಿಷ್ಟತೆ ಹೊಂದಿರುವಿರಿ ಮತ್ತು ಅದು ನಿಮ್ಮ ಮಹಾಶಕ್ತಿ ಎಂದು ನಿಮ್ಮನ್ನು ನೆನಪಿಸಿಕೊಳ್ಳಲು ನೀವು ದೈನಂದಿನ ಸ್ವಯಂ-ಭಾವಚಿತ್ರಗಳನ್ನು ತೆಗೆದುಕೊಳ್ಳಲು ಆರಂಭಿಸಿ.


ಇದನ್ನೂ ಓದಿ- Breast Cancer: ಮಹಿಳೆಯರಷ್ಟೇ ಅಲ್ಲ ಪುರುಷರಿಗೂ ಕಾಡುತ್ತೆ ಬ್ರೆಸ್ಟ್ ಕ್ಯಾನ್ಸರ್, ಯಾವ ವಯಸ್ಸಿನವರಿಗೆ ಹೆಚ್ಚು ಅಪಾಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.