Diabetes Facts: ಟೈಪ್ 2 ಡಯಾಬಿಟಿಸ್ ಇಂದಿನ ಕಾಲದಲ್ಲಿ ಅಪಾಯಕಾರಿ ಕಾಯಿಲೆಗಳಲ್ಲಿ ಒಂದಾಗಿದೆ, ಇದರಿಂದಾಗಿ ಅನೇಕ ಇತರ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಈ ರೋಗದ ಬಗ್ಗೆ ಅತ್ಯಂತ ಭಯಾನಕ ಸಂಗತಿ ಎಂದರೆ ಅದರ ಆರಂಭಿಕ ಲಕ್ಷಣಗಳು ತಿಳಿದುಬರುವುದಿಲ್ಲ ಮತ್ತು ರೋಗಲಕ್ಷಣಗಳನ್ನು ಅರ್ಥಮಾಡಿಕೊಳ್ಳುವ ಹೊತ್ತಿಗೆ ಪರಿಸ್ಥಿತಿಯು ನಿಯಂತ್ರಣ ತಪ್ಪಿರುತ್ತದೆ.


COMMERCIAL BREAK
SCROLL TO CONTINUE READING

ಮತ್ತೊಂದೆಡೆ, ಟೈಪ್ 2 ಮಧುಮೇಹದ ಲಕ್ಷಣಗಳನ್ನು ಆರಂಭದಲ್ಲಿ ಗುರುತಿಸಿದರೆ, ನೀವು ಅದನ್ನು ನೀವು ನಿಲ್ಲಿಸಬಹುದು ಅಥವಾ ಅದನ್ನು ಸಂಪೂರ್ಣವಾಗಿ ತಪ್ಪಿಸಬಹುದು. ನೀವೂ ಕೂಡ ಒಂದು ವೇಳೆ ಟೈಪ್ 2 ಮಧುಮೇಹದಿಂದ ಬಳಲುತ್ತಿದ್ದರೆ, ಬಾತ್ರೂಮ್ಗೆ ಹೋಗುವುದು ಮತ್ತು ಅದಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಈ ರೋಗದ ಆರಂಭಿಕ ಲಕ್ಷಣಗಳಾಗಿರಬಹುದು. ಆದರೆ ಆಹಾರ ಸೇವಿಸಿದ ನಂತರ ಮೂತ್ರ ವಿಸರ್ಜನೆ ಮಾಡುವುದರಿಂದ ಮಧುಮೇಹದಂತಹ ಕಾಯಿಲೆಗಳು ಬರುವುದಿಲ್ಲ ಎಂದು ಕೆಲವರು ಹೇಳುವುದನ್ನು ನೀವು ಕೇಳಿರಬಹುದು. ಆದರೆ ಇದು ನಿಜವೇ? ಈ ಕುರಿತು ಆರೋಗ್ಯ ತಜ್ಞರು ಏನು ಹೇಳಿದ್ದಾರೆ ತಿಳಿದುಕೊಳ್ಳೋಣ ಬನ್ನಿ,


ಆಹಾರ ಸೇವನೆಯ ಬಳಿಕ ಮಧುಮೇಹ ಬರುವುದಿಲ್ಲವೇ?
ಈ ಕುರಿತು ಖಾಸಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಆರೋಗ್ಯ ತಜ್ಞರೊಬ್ಬರು ಆಹಾರ ಸೇವಿಸಿದ ನಂತರ ಮೂತ್ರ ವಿಸರ್ಜನೆಯಿಂದ ಮಧುಮೇಹ ಬರುವುದಿಲ್ಲ ಎಂಬುದು ಒಂದು ಸಂಪೂರ್ಣ ತಪ್ಪು ಪರಿಕಲ್ಪನೆಯಾಗಿದೆ. ದೇಹದಲ್ಲಿ ಇನ್ಸುಲಿನ್ ಕೊರತೆ ಅಥವಾ ಇನ್ಸುಲಿನ್ ಪ್ರತಿರೋಧದಿಂದಾಗಿ ಮಧುಮೇಹ ಸಂಭವಿಸುತ್ತದೆ.

ನೀವು ಹೆಚ್ಚು ಆಹಾರವನ್ನು ಸೇವಿಸಿದರೆ ಮತ್ತು ಇನ್ಸುಲಿನ್ ನಿಮ್ಮ ದೇಹದಲ್ಲಿ ಆಹಾರಕ್ಕೆ ಅನುಗುಣವಾಗಿ ಉತ್ಪತ್ತಿಯಾಗದಿದ್ದರೆ, ನೀವು ಮಧುಮೇಹವನ್ನು ಹೊಂದುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ನೀವು ಆಹಾರ ಸೇವಿಸಿದ ತಕ್ಷಣ ಮೂತ್ರ ವಿಸರ್ಜನೆ ಮಾಡಿದರೆ ಅಥವಾ ಮೋಶನ್ ಮಾಡಿದರೆ ಮಧುಮೇಹದ ಅಪಾಯವನ್ನು ತಪ್ಪಿಸಬಹುದು ಎಂದು ನೀವೂ ಕೂಡ ಭಾವಿಸುತ್ತಿದ್ದರೆ, ಅದು ಸಾಧ್ಯವೇ ಇಲ್ಲ ಎಂದು ತಜ್ಞರು ಹೇಳುತ್ತಾರೆ.


ಇದನ್ನೂ ಓದಿ-ತೂಕ ಇಳಿಕೆಯ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳಲ್ಲಿ ಪರಿಣಾಮಕಾರಿ ಈ ಚಹಾ ಸೇವನೆ!


ಮಧುಮೇಹವನ್ನು ನಿಯನ್ರಿಸುವುದು ಹೇಗೆ?
ಮಧುಮೇಹ ನಿಯಂತ್ರಣಕ್ಕೆ ಆಹಾರದ ಪ್ರಮಾಣ ಅತ್ಯಂತ ಸಮತೋಲನದಲ್ಲಿರಬೇಕು ಎಂದು ತಜ್ಞರ ಅಭಿಮತ. ಇದಕ್ಕಾಗಿ, ಆಹಾರದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವುದು, ಹೆಚ್ಚಿನ ಫೈಬರ್ ಆಹಾರವನ್ನು ಸೇವಿಸುವುದು ಮತ್ತು ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಕಡಿಮೆ ಮಾಡುವುದು ಮಧುಮೇಹ ರೋಗಿಗಳಿಗೆ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಹೊರತಾಗಿ, ಆಹಾರದಲ್ಲಿ ಪ್ರೋಟೀನ್ ಪ್ರಮಾಣವು ಅಧಿಕವಾಗಿರಬೇಕು, ಏರೋಬಿಕ್ ವ್ಯಾಯಾಮ ಮಾಡಿ, ಆಹಾರ ಸೇವಿಸಿದ ನಂತರ ವಾಕ್ ಮಾಡಿ ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮರೆಯಬೇಡಿ. ಇದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಮತ್ತೊಂದೆಡೆ, ಕುಟುಂಬದಲ್ಲಿ ಇಬ್ಬರು ಪೋಷಕರಿಗೆ ಮಧುಮೇಹ ಇದ್ದರೆ, ನೀವು ಸಹ ಮಧುಮೇಹವನ್ನು ಹೊಂದುವ ಸಾಧ್ಯತೆ ಇರುತ್ತದೆ.


ಇದನ್ನೂ ಓದಿ-Bad Cholesterol: ಕೇವಲ 2 ರೂ.ಗಳಲ್ಲಿ ರಕ್ತದಿಂದ ಕೆಟ್ಟ ಕೊಲೆಸ್ಟ್ರಾಲ್ ಹೊರಹಾಕಿ! ಹೊಸ ಉಪಾಯ ಕಂಡುಹಿಡಿದ ಹಾರ್ವರ್ಡ್


ರಕ್ತದಲ್ಲಿನ ಸಕ್ಕರೆ ಹೆಚ್ಚಾದಾಗ ಎಷ್ಟು ಬಾರಿ ಮೂತ್ರ ವಿಸರ್ಜನೆ ಬರುತ್ತದೆ
ಸಾಮಾನ್ಯವಾಗಿ ಪದೇ ಪದೇ ಮೂತ್ರ ವಿಸರ್ಜನೆ ಸಂಭವಿಸುತ್ತಿದ್ದರೆ ಅದು ಮಧುಮೇಹದ ಸ್ಥಿತಿಯು ಉದ್ಭವಿಸಿದೆ ಎಂಬುದರ ಸಂಕೇತವಾಗಿದೆ. ನೀವು 24 ಗಂಟೆಗಳಲ್ಲಿ 7-8 ಬಾರಿ ಮೂತ್ರ ವಿಸರ್ಜನೆ ಮಾಡಿದರೆ ಅದನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ ಆದರೆ ನೀವು ಅದಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ನೀವು ಮಧುಮೇಹ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಮತ್ತು ಆದಷ್ಟು ಬೇಗ ನಿಮ್ಮ ಮನೆ ವೈದ್ಯರನ್ನು ಸಂಪರ್ಕಿಸಬೇಕು.


ಇದನ್ನೂ ಓದಿ-ಆಲೂಗಡ್ಡೆ ಹಾಲಿನಿಂದಾಗುವ ಈ ಆರೋಗ್ಯ ಲಾಭಗಳು ನಿಮಗೆಷ್ಟು ಗೊತ್ತು?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ )


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.