Cold Water Side Effects : ತಣ್ಣೀರು ಕುಡಿಯುವುದು ದೇಹಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ ಇದು ಕೆಲವರಲ್ಲಿ ಹೃದಯದ ತೊಂದರೆಗಳನ್ನು ಉಂಟುಮಾಡಬಹುದು. ಬೇಸಿಗೆ ಮತ್ತು ಬಿಸಿ ವಾತಾವರಣದಲ್ಲಿ ಜನರು ಹೆಚ್ಚಾಗಿ ತಣ್ಣೀರು ಕುಡಿಯುತ್ತಾರೆ. ಆದರೆ ಅತಿಯಾದ ಕೂಲ್ಡ್‌ ವಾಟರ್‌ ಸೇವನೆ ದೇಹದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತದೆ.


COMMERCIAL BREAK
SCROLL TO CONTINUE READING

ಹೆಚ್ಚು ತಣ್ಣೀರು ಕುಡಿಯುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಅದರಲ್ಲೂ ಹೃದ್ರೋಗಿಗಳು ಹೆಚ್ಚು ತಣ್ಣೀರು ಕುಡಿಯಬಾರದು. ಏಕೆಂದರೆ ಹೆಚ್ಚಿನ ಪ್ರಮಾಣದಲ್ಲಿ ತಣ್ಣೀರು ಕುಡಿಯುವುದು ಹೃದಯ ಬಡಿತವನ್ನು ಪ್ರಚೋದಿಸುತ್ತದೆ. ಕೆಲವೊಮ್ಮೆ ಹೃದಯಾಘಾತಕ್ಕೆ ಕಾರಣವಾಗಬಹುದು.


ಇದನ್ನೂ ಓದಿ: ಪ್ರತಿನಿತ್ಯ 2 ಎಲೆಗಳನ್ನು ಜಗಿಯಿರಿ ಸಾಕು.. ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ ಬ್ಲಡ್‌ ಶುಗರ್‌ ! 


ರೂಮ್‌ ಟೆಂಪ್ರೆಚರ್‌ನಲ್ಲಿರುವ ನೀರು ಕುಡಿಯುವುದು ಯಾವಾಗಲೂ ಉತ್ತಮ ಎಂದು ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ. ಊಟದ ನಂತರ ಉಗುರು ಬೆಚ್ಚಗಿನ ನೀರನ್ನು ಕುಡಿಯಲು ಸೂಚಿಸಲಾಗುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.


ಬೇಸಿಗೆಯಲ್ಲಿ ಹೈಡ್ರೇಟೆಡ್ ಆಗಿರುವುದು ಸಹ ಬಹಳ ಮುಖ್ಯ. ಬಾಯಾರಿಕೆಯಾಗುವವರೆಗೆ ಕಾಯುವುದಕ್ಕಿಂತ ಹೆಚ್ಚಾಗಿ ನೀರು ಕುಡಿಯುವುದು ಉತ್ತಮ. ನೀರಿನಂಶವಿರುವ ಹಣ್ಣುಗಳನ್ನು ತಿನ್ನುವುದು ಸಹ ಒಳ್ಳೆಯದು.


ಇದನ್ನೂ ಓದಿ: ಬೇಸಿಗೆಯಲ್ಲಿ ಸಿಗುವ ತಾಳೆ ಹಣ್ಣಿನಲ್ಲಿದೆ ಮಲಬದ್ಧತೆಗೆ ಮದ್ದು! ಹೀಗೆ ಸೇವಿಸಿದರೆ ಕ್ಷಣಾರ್ಧದಲ್ಲಿ ಸಿಗುವುದು ಪರಿಹಾರ 


ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.