Can eating eggs make your mind sharp?: ಯೋಚಿಸುವ, ಅರ್ಥಮಾಡಿಕೊಳ್ಳುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಅರಿವಿನ ಶಕ್ತಿ ಎಂದು ಕರೆಯಲಾಗುತ್ತದೆ. ವಯಸ್ಸಾದಂತೆ ಅರಿವಿನ ಸಾಮರ್ಥ್ಯ ಮತ್ತು ಮನಸ್ಸಿನ ತೀಕ್ಷ್ಣತೆ ಕುಂದಲು ಪ್ರಾರಂಭಿಸುತ್ತದೆ. ಇದು ಹೆಚ್ಚಿನ ಜನರಲ್ಲಿ ಕಂಡುಬರುತ್ತದೆ. ಜ್ಞಾಪಕಶಕ್ತಿಯಲ್ಲಿ ತೊಂದರೆ ಅಥವಾ ಗೊಂದಲ ಇವು ವಯಸ್ಸಾಗುವಿಕೆಯ ಸಾಮಾನ್ಯ ಪರಿಣಾಮಗಳಾಗಿವೆ. ಆದರೆ ಹೊಸ ಅಧ್ಯಯನವು ಮೊಟ್ಟೆಗಳನ್ನು ತಿನ್ನುವುದರಿಂದ ನಿಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ ಎಂದು ಹೇಳಿದೆ. ವಯಸ್ಸಾದ ಮಹಿಳೆಯರಲ್ಲಿ ಅರಿವಿನ ಕುಸಿತವನ್ನು ಮೊಟ್ಟೆಗಳು ತಡೆಯಬಹುದು ಅಂತಾ ಅದು ಹೇಳುತ್ತದೆ. ಇದು ನಿಮ್ಮ ಸ್ಮರಣೆಯನ್ನು ಸುಧಾರಿಸಲು ಮತ್ತು ಮೆದುಳಿನ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದಂತೆ. ಉದಾಹರಣೆಗೆ ಸ್ವಯಂ ನಿಯಂತ್ರಣ, ನಮ್ಯತೆ ಮತ್ತು ಕೌಶಲ್ಯಗಳ ಬಳಕೆ. ಆದರೆ ಮೆದುಳಿನ ಆರೋಗ್ಯವನ್ನು ಸುಧಾರಿಸುವ ಮೊಟ್ಟೆಗಳ ಬಗ್ಗೆ ಅಧ್ಯಯನವು ಯಾವುದೇ ರೀತಿ ದೃಢಪಡಿಸಿಲ್ಲ.  


COMMERCIAL BREAK
SCROLL TO CONTINUE READING

ಅಧ್ಯಯನ ಏನು ಹೇಳುತ್ತದೆ? 


ನ್ಯೂಟ್ರಿಯೆಂಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಮೊಟ್ಟೆಯ ಸೇವನೆಯು ನಿಮ್ಮ ಅರಿವಿನ ಕುಸಿತವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಮೊಟ್ಟೆಗಳನ್ನು ತಿನ್ನುವುದರಿಂದ ನಿಮ್ಮ ಮೆದುಳನ್ನು ಚುರುಕುಗೊಳಿಸಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ. ಅಧ್ಯಯನದ ಮೂಲಕ, ಮೊಟ್ಟೆಯ ಸೇವನೆಯು ವಯಸ್ಸಿನೊಂದಿಗೆ ಉತ್ತಮ ಅರಿವಿನ ಕಾರ್ಯಕ್ಷಮತೆಗೆ ಕಾರಣವಾಗುತ್ತದೆ ಎಂದು ಗಮನಿಸಲಾಗಿದೆ. 


ಇದನ್ನೂ ಓದಿ: ಎಚ್ಚರಿಕೆ..! ಮಳೆಗಾಲದಲ್ಲಿ ನೆಗಡಿ-ಕೆಮ್ಮು ಮಾತ್ರವಲ್ಲ, ಈ ರೋಗಗಳು ಬರುತ್ತವೆ..!


ಅಧ್ಯಯನವು 357 ಪುರುಷರು ಮತ್ತು 533 ಮಹಿಳೆಯರು ಸೇರಿದಂತೆ 55 ವರ್ಷಕ್ಕಿಂತ ಮೇಲ್ಪಟ್ಟ 890 ವಯಸ್ಕರನ್ನು ಒಳಗೊಂಡಿತ್ತು. ಈ ಸಮಯದಲ್ಲಿ ಅವರ ಭಾಷೆ, ದೃಷ್ಟಿಕೋನ, ಗಮನ, ಸ್ಮರಣೆ, ​​ಕಾರ್ಯನಿರ್ವಾಹಕ ಕಾರ್ಯಗಳು, ಮಾನಸಿಕ ನಮ್ಯತೆಯನ್ನು ಪರೀಕ್ಷಿಸಲಾಯಿತು. ಪ್ರತಿದಿನ ಮೊಟ್ಟೆಗಳನ್ನು ಸೇವಿಸುವವರಿಗಿಂತ ಆ ಭಾಗವಹಿಸುವವರ ಅರಿವಿನ ಸಾಮರ್ಥ್ಯವು ಉತ್ತಮವಾಗಿದೆ ಎಂದು ಅಧ್ಯಯನವು ಕಂಡುಹಿಡಿದಿದೆ. 


ಮೊಟ್ಟೆಯ ಇತರ ಪ್ರಯೋಜನಗಳು 


ಮೊಟ್ಟೆಗಳು ಪ್ರೋಟೀನ್‌ನ ಸಮೃದ್ಧ ಮೂಲವಾಗಿದ್ದು, ಇವು ನಿಮ್ಮ ದೈನಂದಿನ ಅಗತ್ಯವನ್ನು ಸುಲಭವಾಗಿ ಪೂರೈಸಲು ಸಹಾಯ ಮಾಡುತ್ತದೆ. ಇವು ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ. ಪ್ರೋಟೀನ್ ಜೊತೆಗೆ ಇದು ನಿಮ್ಮ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ಏಕೆಂದರೆ ಮೊಟ್ಟೆಗಳಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಇದ್ದು, ಇದು ಕಣ್ಣಿನ ರೆಟಿನಾದ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ ತೂಕ ನಷ್ಟಕ್ಕೆ ಮೊಟ್ಟೆಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ. 


ಒಂದು ದಿನದಲ್ಲಿ ಎಷ್ಟು ಮೊಟ್ಟೆ ತಿನ್ನಬಹುದು?


ಒಂದು ದಿನದಲ್ಲಿ ನೀವು ಒಂದು ಅಥವಾ ಎರಡು ಮೊಟ್ಟೆಗಳನ್ನು ತಿನ್ನಬಹುದು. ಅಂದರೆ ಒಂದು ವಾರದಲ್ಲಿ ನೀವು 7 ಮೊಟ್ಟೆಗಳನ್ನು ತಿನ್ನಬಹುದು. ಆದಾಗ್ಯೂ ಇದರೊಂದಿಗೆ ನೀವು ಸಮತೋಲಿತ ಆಹಾರವನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಟ್ಟೆಯಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಇರುತ್ತದೆ. ಒಂದು ಮೊಟ್ಟೆಯಲ್ಲಿ 200ರಷ್ಟು ಕೊಲೆಸ್ಟ್ರಾಲ್ ಇದೆ, ಆದ್ದರಿಂದ ಇದನ್ನು ತಿನ್ನುವ ಮೊದಲು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕೊಲೆಸ್ಟ್ರಾಲ್ ಅನ್ನು ತಪ್ಪಿಸಲು ನೀವು ಬಿಳಿ ಭಾಗವನ್ನು ಮಾತ್ರ ತಿನ್ನಬಹುದು. ಮೊಟ್ಟೆಯ ಬಿಳಿ ಭಾಗವು ಪ್ರೋಟೀನ್ ಮತ್ತು ಶೂನ್ಯ ಕೊಬ್ಬನ್ನು ಹೊಂದಿರುತ್ತದೆ. ಇದರ ಹಳದಿ ಭಾಗವು ಕೊಲೆಸ್ಟ್ರಾಲ್ ಮತ್ತು ಕೊಬ್ಬನ್ನು ಹೊಂದಿರುತ್ತದೆ. 


ಇದನ್ನೂ ಓದಿ: ಯೂರಿಕ್ ಆಸಿಡ್ ನಿಂದ ಬಳಲುತ್ತಿರುವವರು ಈ ಬೇಳೆ ಕಾಳುಗಳನ್ನು ತಪ್ಪಿಯೂ ಸೇವಿಸಬಾರದು! ಕಿಡ್ನಿ ಸ್ಟೋನ್ ಆಗುವ ಅಪಾಯ ಕಾಡುತ್ತದೆ


ನಾವು ಪ್ರತಿದಿನ ಮೊಟ್ಟೆಗಳನ್ನು ತಿನ್ನಬಹುದೇ?


ಹೌದು, ನೀವು ಪ್ರತಿದಿನ ಮೊಟ್ಟೆಗಳನ್ನು ತಿನ್ನಬಹುದು, ಆದರೆ ಹೆಚ್ಚು ಅಲ್ಲ. ನಿಮಗೆ ಕೊಲೆಸ್ಟ್ರಾಲ್ ಅಥವಾ ಹೃದಯ ಸಂಬಂಧಿ ಕಾಯಿಲೆ ಇದ್ದರೆ ನೀವು ಪ್ರತಿದಿನ ಮೊಟ್ಟೆ ತಿನ್ನುವುದನ್ನು ತಪ್ಪಿಸಬೇಕು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.