ಮೊಟ್ಟೆ ಸೇವನೆಯ ಅನುಕೂಲ- ಅನಾನುಕೂಲಗಳು: ತೂಕ ನಷ್ಟದ ಬಗ್ಗೆ ಯೋಚಿಸುವವರು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಪ್ರೋಟೀನ್ ಹೊಂದಿರುವ ಆಹಾರಗಳ ಬಗ್ಗೆ ಒಲವು ಹೊಡ್ನಿರುತ್ತಾರೆ. ಅಂತಹವರಿಗೆ ಮೊಟ್ಟೆ ಉತ್ತಮ ಆಯ್ಕೆ ಎಂದು ಹೇಳಲಾಗುತ್ತದೆ. ಏಕೆಂದರೆ, ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಮೊಟ್ಟೆಯಲ್ಲಿ ಕಡಿಮೆ ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್ಗಳ ಜೊತೆಗೆ ಉತ್ತಮ ಪ್ರಮಾಣದ ಪ್ರೋಟೀನ್ ಕಂಡು ಬರುತ್ತದೆ. ಪೌಷ್ಠಿಕ ತಜ್ಞರ ಪ್ರಕಾರ, ಮೊಟ್ಟೆ ಡಯಟ್ ತೂಕ ಕಳೆದುಕೊಳ್ಳಲು ಮಾತ್ರವಲ್ಲ ಉತ್ತಮ ಆರೋಗ್ಯಕ್ಕೂ ಉತ್ತಮ ಎಂದು ಹೇಳಲಾಗುತ್ತದೆ. ಆದರೆ, ಮೊಟ್ಟೆ ಡಯಟ್ ಆರೋಗ್ಯಕ್ಕೆ ನಿಜವಾಗಿಯೂ ಉತ್ತಮವೇ? ಇದರ ಅನುಕೂಲಗಳು ಮತ್ತು ಅನಾನುಕೂಲಗಳನ್ನು ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೊಟ್ಟೆ ಡಯಟ್ ಅನುಕೂಲಗಳು: 
ಮೊಟ್ಟೆ ಡಯಟ್ ಅನ್ನು  ಫ್ಯಾಡ್ ಡಯೆಟ್ ಎಂದೂ ಕರೆಯುತ್ತಾರೆ. ತ್ವರಿತ ತೂಕ ನಷ್ಟಕ್ಕೆ ನೀವು ಇದನ್ನು ಅನುಸರಿಸಲು ಯೋಜಿಸುತ್ತಿದ್ದರೆ, ನೀವು ಪ್ರತಿದಿನ ಕನಿಷ್ಠ 6 ಮೊಟ್ಟೆಗಳನ್ನು ಸೇವಿಸಬೇಕು ಎಂದು ಹೇಳಾಗುತ್ತದೆ. ಇದರೊಂದಿಗೆ, ಕ್ಯಾಲೋರಿ ಅಥವಾ ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿರುವ ಅಂತಹ ಯಾವುದೇ ಆಹಾರವನ್ನು ನೀವು ಸೇವಿಸಬಾರದು. ಇಲ್ಲದಿದ್ದರೆ ಮೊಟ್ಟೆಯ ಡಯಟ್ ಯಾವುದೇ ಪರಿಣಾಮ ಬೀರುವುದಿಲ್ಲ. 


ಇದನ್ನೂ ಓದಿ- Eating Banana: ಈ ರೀತಿ ಹಣ್ಣಾದ ಬಾಳೆಹಣ್ಣು ಆರೋಗ್ಯಕ್ಕೆ ಹಾನಿಕಾರಕ, ಖರೀದಿಸುವ ಮುನ್ನ ಎಚ್ಚರ!


ಪ್ಯಾಕ್ ಮಾಡಿದ ಮತ್ತು ಕೃತಕ ಆಹಾರವನ್ನು ಸೇವಿಸುವ ಬದಲು ಮೊಟ್ಟೆಯ ಆಹಾರವನ್ನು ತೆಗೆದುಕೊಳ್ಳುವುದು ಒಳ್ಳೆಯದು. ಈ ಕೆಳಗಿನ ಕಾರಣಗಳಿಗಾಗಿ ಅನೇಕ ಜನರು ಮೊಟ್ಟೆಯ ಆಹಾರವನ್ನು ಅವಲಂಬಿಸುತ್ತಾರೆ.
* ಮೊಟ್ಟೆಯಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ವಿಟಮಿನ್, ಫಾಸ್ಫರಸ್, ಫೋಲೇಟ್ ಮೊದಲಾದ ಪೋಷಕಾಂಶಗಳು ಹೇರಳವಾಗಿವೆ.
* ಮೊಟ್ಟೆಗಳು ಅಗ್ಗದ ದರದಲ್ಲಿ ಲಭ್ಯವಿರುವ ಆಹಾರ ಪದಾರ್ಥ 
* ಮೊಟ್ಟೆಗಳು ಸುಲಭವಾಗಿ ಲಭ್ಯವಿರುವ ಆಹಾರವಾಗಿದೆ.
* ಮೊಟ್ಟೆ ಪ್ರೋಟೀನ್‌ನ ಮುಖ್ಯ ಮೂಲವಾಗಿದೆ.
* ಮೊಟ್ಟೆಯು ರುಚಿಕರವಾದ ಆಹಾರವಾಗಿದೆ ಮತ್ತು ಇದರ ಖಾದ್ಯಗಳನ್ನು ತಯಾರಿಸುವುದು ಕೂಡ ತುಂಬಾ ಸುಲಭ.


ಇದನ್ನೂ ಓದಿ- Health Tips: ಭುಜ ಮತ್ತು ಕುತ್ತಿಗೆ ನೋವಿನ ಬಗ್ಗೆ ಚಿಂತೆಯೇ? ಇಲ್ಲಿದೆ ಸುಲಭ ಪರಿಹಾರ


ಮೊಟ್ಟೆ ಡಯಟ್ ಅನಾನುಕೂಲಗಳು:
ಪ್ರತಿದಿನ 1-2 ಮೊಟ್ಟೆಗಳನ್ನು ತಿನ್ನಬಹುದು. ಇದು ದೇಹದ ಮೇಲೆ ಯಾವುದೇ ಅಡ್ಡಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಆದರೆ, ಅತಿಯಾದರೆ ಮಾತ್ರ ಅನಾನುಕೂಲ ತಪ್ಪಿದ್ದಲ್ಲ. ಮೊಟ್ಟೆಯ ಆಹಾರವು ತೂಕ ನಷ್ಟಕ್ಕೆ ಖಂಡಿತವಾಗಿಯೂ ಪರಿಣಾಮಕಾರಿಯಾಗಿದೆ. ಆದರೆ, ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸಿದರೆ ಮಾತ್ರ ಇದರ ಪ್ರಯೋಜನ ಲಭ್ಯವಾಗಲಿದೆ. ಒಬ್ಬ ವ್ಯಕ್ತಿಯು ದೇಹಕ್ಕೆ ಅಗತ್ಯಕ್ಕಿಂತ ಕಡಿಮೆ ಕ್ಯಾಲೊರಿಗಳನ್ನು ಸೇವಿಸಿದಾಗ, ಅವನ ತೂಕವು ಕಡಿಮೆಯಾಗುತ್ತದೆ ಎಂಬ ರೀತಿಯಲ್ಲಿ ಈ ಆಹಾರವು ಕಾರ್ಯನಿರ್ವಹಿಸುತ್ತದೆ. ಆದರೆ ಈ ಆಹಾರ ಪದ್ಧತಿಯನ್ನು ನಿಲ್ಲಿಸಿದ ತಕ್ಷಣ ಮತ್ತೆ ಅವರ ತೂಕ ಹೆಚ್ಚಳವಾಗಬಹುದು. 


ಮೊಟ್ಟೆಯಲ್ಲಿ ಬ್ಯಾಕ್ಟೀರಿಯಂ ಕಂಡುಬರುತ್ತದೆ ಇದನ್ನು ಸಾಲ್ಮೊನೆಲ್ಲಾ ಎಂದು ಕರೆಯಲಾಗುತ್ತದೆ. ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ತಿನ್ನದಿದ್ದರೆ, ಈ ಸೂಕ್ಷ್ಮಾಣು ದೇಹವನ್ನು ಪ್ರವೇಶಿಸಬಹುದು. 


ಹೆಚ್ಚು ಮೊಟ್ಟೆ ತಿನ್ನುವುದರಿಂದ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮೊಟ್ಟೆಗಳಲ್ಲಿ ಪ್ರೋಟೀನ್ ತುಂಬಾ ಹೆಚ್ಚು. ಆದ್ದರಿಂದ, ಹೆಚ್ಚು ಮೊಟ್ಟೆ ತಿನ್ನುವುದು ಮೂತ್ರಪಿಂಡದ ಮೇಲೂ ಪರಿಣಾಮ ಬೀರುತ್ತದೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.