Soybean health benefits : ಸಸ್ಯಹಾರಿಗಳು ಪ್ರೋಟೀಸ್‌ಗಾಗಿ ಇಷ್ಟವಿಲ್ಲದಿದ್ದರೂ ಕಷ್ಟ ಪಟ್ಟು ಮಾಂಸ ತಿನ್ನುವ ಅಗತ್ಯವಿಲ್ಲ. ಸೋಯಾಬೀನ್ ಮಾಂಸಕ್ಕಿಂತಲೂ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಸೋಯಾಬೀನ್‌ನೊಂದಿಗೆ ಅಡುಗೆ ಮಾಡುವುದು ಆಹಾರದ ರುಚಿಯನ್ನು ಬದಲಾಯಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದು. 


COMMERCIAL BREAK
SCROLL TO CONTINUE READING

ಸೋಯಾಬೀನ್ ನಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಇ, ಪ್ರೊಟೀನ್, ರೈಬೋಫ್ಲಾವಿನ್, ಕ್ಯಾಲ್ಸಿಯಂ, ಫೈಬರ್, ಥಯಾಮಿನ್, ಅಮೈನೋ ಆಸಿಡ್, ಫೋಲಿಕ್ ಆಸಿಡ್ ಮೊದಲಾದ ಪೋಷಕಾಂಶಗಳು ಹೇರಳವಾಗಿವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರಿಂದ ರಕ್ತದೊತ್ತಡವನ್ನು ಸ್ಥಿರವಾಗಿಡಲು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಸೋಯಾಬೀನ್ ತಿನ್ನುವ ಇತರ ಕೆಲವು ಪ್ರಯೋಜನಗಳು ಇಲ್ಲಿವೆ.


ಇದನ್ನೂ ಓದಿ:ಮೊಣಗಂಟಿವರೆಗೆ ಗಾಢ ಕಪ್ಪು, ರೇಷ್ಮೆಯಂಥಹ ಕೂದಲು ಬೇಕಾದರೆ ಆಲೋವಿರಾ ಜೆಲ್ ಗೆ ಇದನ್ನು ಬೆರೆಸಿ ಹಚ್ಚಿ !ಒಂದೇ ತಿಂಗಳಲ್ಲಿ ಖಂಡಿತಾ ತಿಳಿಯುವುದು ವ್ಯತ್ಯಾಸ !


ಮೂಳೆ ಆರೋಗ್ಯ : ಸೋಯಾಬೀನ್ ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದು ಮೂಳೆಗಳು ಮತ್ತು ಹಲ್ಲುಗಳ ರಚನೆಯನ್ನು ಬಲಪಡಿಸುತ್ತದೆ. ಆದ್ದರಿಂದ ಈ ಆಹಾರವು ಮಹಿಳೆಯರಿಗೆ ವಿಶೇಷವಾಗಿ ಮುಖ್ಯವಾಗಿದೆ. ಏಕೆಂದರೆ 30 ವರ್ಷಗಳ ನಂತರ ಮಹಿಳೆಯರು ಮೂಳೆ ನಷ್ಟದಂತಹ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ.. ಅಂತಹವರು ಸೋಯಾಬೀನ್ ತಿನ್ನುವುದು ಉತ್ತಮ.


ರಕ್ತದೊತ್ತಡವನ್ನು ನಿಯಂತ್ರಣ : ಸೋಯಾಬೀನ್ ರಕ್ತದೊತ್ತಡವನ್ನು ನಿಯಂತ್ರಿಸಲು ತುಂಬಾ ಉಪಯುಕ್ತವಾಗಿದೆ. ಸೋಯಾಬೀನ್ ಹಾಲು ಸಹ ಪ್ರಯೋಜನಕಾರಿಯಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಒತ್ತಡ ಹೆಚ್ಚಿದ್ದರೆ ಪ್ರೊಟೀನ್ ಆಹಾರ ಸೇವಿಸಿ ಎನ್ನುತ್ತಾರೆ ತಜ್ಞರು. ಹೆಚ್ಚಿನ ಪ್ರೋಟೀನ್ ಒತ್ತಡವನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗಾಗಿ ಸೋಯಾಬೀನ್ ತಿನ್ನುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.


ತೂಕ ನಷ್ಟ : ಸೋಯಾಬೀನ್ ಅನೇಕ ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ. ಇದು ಸುಲಭವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಮಾಂಸಾಹಾರಿಗಳು ಸೋಯಾಬೀನ್ ಬಳಸಿ ಕಟ್ಲೆಟ್ ಮತ್ತು ಕಬಾಬ್ ತಯಾರಿಸಬಹುದು. ಬ್ರೌನ್ ರೈಸ್ ಮತ್ತು ಬಿರಿಯಾನಿಯಂತಹ ಭಕ್ಷ್ಯಗಳನ್ನು ಸಹ ಸೋಯಾಬೀನ್‌ನೊಂದಿಗೆ ಮಾಡಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.