Does sunlight kill the coronavirus?: ಬಿಸಿಲಿನಲ್ಲಿ ಶಕ್ತಿ ಕಳೆದುಕೊಳ್ಳುತ್ತದೆಯೇ ಕೊರೊನಾ ವೈರಸ್
Does sunlight kill the coronavirus? ದೀರ್ಘಕಾಲ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಹಾಗೂ ಅದರಲ್ಲೂ ವಿಶೇಷವಾಗಿ ನೆರಳಾತೀತ ಕಿರಣಗಳಿಗೆ ಒಡ್ಡಿಕೊಳ್ಳುವುದು ಕೊವಿಡ್ - 19 ನಿಂದಾಗುವ ಕಡಿಮೆ ಸಾವಿಗೆ ಜೊತೆಗೆ ಸಂಬಂಧ ಹೊಂದಿದೆ ಎಂದು ಅಧ್ಯಯನವೊಂದು ಹೇಳಿದೆ.
Does sunlight kill the coronavirus? ದೀರ್ಘಕಾಲ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಹಾಗೂ ಅದರಲ್ಲೂ ವಿಶೇಷವಾಗಿ ನೆರಳಾತೀತ ಕಿರಣಗಳಿಗೆ ಒಡ್ಡಿಕೊಳ್ಳುವುದು ಕೊವಿಡ್ - 19 ನಿಂದಾಗುವ ಕಡಿಮೆ ಸಾವಿಗೆ ಜೊತೆಗೆ ಸಂಬಂಧ ಹೊಂದಿದೆ ಎಂದು ಅಧ್ಯಯನವೊಂದು ಹೇಳಿದೆ.
ಬ್ರಿಟನ್ ನ ಎಡಿನ್ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, ಹೆಚ್ಚಿನ ಸಂಶೋಧನೆಯು ಮರಣ ಪ್ರಮಾಣ ಕಡಿಮೆಯಾಗುವುದನ್ನು ಸೂಚಿಸಿದರೆ, ಸೂರ್ಯನ ಬೆಳಕನ್ನು ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಸಾಮಾನ್ಯ ಸಾರ್ವಜನಿಕ ಆರೋಗ್ಯಕ್ಕೆ ಸಹಾಯವಾಗುತ್ತದೆ ಎಂದಿದೆ.
ಬ್ರಿಟಿಶ್ ಜರ್ನಲ್ ಆಫ್ ಡರ್ಮಟಾಲಜಿಯಲ್ಲಿ ಪ್ರಕಟಗೊಂಡ ಈ ಅಧ್ಯಯಾನದಲ್ಲಿ ಅಮೇರಿಕಾ ಮಹಾದ್ವೀಪದಲ್ಲಿ ಜನವರಿ ಯಿಂದ ಏಪ್ರಿಲ್ 2020ರ ಅವಧಿಯಲ್ಲಿ ಉಂಟಾದ ಸಾವುಗಳ ಜೊತೆಗೆ ಆ ಅವಧಿಯಲ್ಲಿ 2474 ಕೌಂಟಿಯಲ್ಲಿ ಅಲ್ಟ್ರಾವೈಲೆಟ್ ಮಟ್ಟದ ಜೊತೆಗೆ ಹೋಲಿಕೆ ಮಾಡಲಾಗಿದೆ.
ಅಲ್ಟ್ರಾವೈಲೆಟ್ ಕಿರಣಗಳ ಉನ್ನತ ಮಟ್ಟವಿರುವ ಪ್ರದೇಶಗಳಲ್ಲಿ ವಾಸಿಸುವ ಜನರ ನಡುವೆ ಕೊವಿಡ್ -19 ಸಾವುಗಳ ಪ್ರಮಾಣ ಕಡಿಮೆ ಇತ್ತು ಎನ್ನಲಾಗಿದೆ.
ಸಂಶೋಧಕರ ಪ್ರಕಾರ ಇಂಗ್ಲನೆ ಹಾಗೂ ಇಟಲಿಯಲ್ಲಿ ಇದೆ ರೀತಿ ಅಧ್ಯಯನ ನಡೆಸಲಾಗಿದೆ. ಸಂಶೋಧಕರು ವಯಸ್ಸು, ಸಮುದಾಯ, ಸಾಮಾಜಿಕ, ಆರ್ಥಿಕ ಸ್ಥಿತಿ, ಜನಸಂಖ್ಯೆಯ ಸಾಂಧ್ರತೆ, ವಾಯುಮಾಲಿನ್ಯ, ತಾಪಮಾನ ಹಾಗೂ ಸ್ತಳೀಯ ಪ್ರದೇಶದಲ್ಲಿ ಸೋಂಕಿನ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ವೈರಸ್ ನಿಂದ ಸೋಂಕಿತರಾಗುವ ಹಾಗೂ ಸಾವಿನ ಅಪಾಯಗಳ ವಿಶ್ಲೇಷಣೆ ನಡೆಸಿದ್ದಾರೆ.
ಇದನ್ನೂ ಓದಿ- ಕೊರೊನಾ ನಿಯಂತ್ರಣಕ್ಕೆ ರಾಜ್ಯಗಳಿಗೆ ಪಂಚಸೂತ್ರವನ್ನಿತ್ತ ಪ್ರಧಾನಿ ಮೋದಿ
ಈ ಕುರಿತು ಹೇಳಿಕೆ ನೀಡಿರುವ ಸಂಶೋಧಕರು ಸೂರ್ಯನ ಬೆಳಕಿನಲ್ಲಿ ಹೆಚ್ಚು ಹೊತ್ತು ಇರುವುದರಿಂದ ನಮ್ಮ ತ್ವಚೆ ನೈಟ್ರಿಕ್ ಆಕ್ಸೈಡ್ ಅನ್ನು ಹೊರಹಾಕುತ್ತದೆ. ಇದರಿಂದ ವೈರಸ್ ಮುಂದಕ್ಕೆ ಸಾಗುವ ಕ್ಷಮತೆ ಬಹುತೇಕ ಕಳೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ- ವಿಮಾನಯಾನ ಕಂಪನಿಗಳ ಕ್ರಮಕ್ಕೆ ಸರ್ಕಾರದ ಖಂಡನೆ ; ಲಾಕ್ ಡೌನ್ ವೇಳೆ ರದ್ದಾದ ಟಿಕೆಟ್ ದರ ಮರುಪಾವತಿಗೆ ಸೂಚನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.