ನವದೆಹಲಿ : ಹೂಕೋಸು ತರಕಾರಿಯನ್ನು ಸೇವಿಸಿದರೆ, ಆರೋಗ್ಯಕ್ಕೆ ಅನೇಕ (Benefits of cauliflower) ಪ್ರಯೋಜನಗಳಾಗಲಿವೆ. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಅಷ್ಟೇ ಹಾನಿಯಾಗುತ್ತದೆ (Side effects of cauliflower). ಹೂಕೋಸುಗಳ ಅತಿಯಾದ ಸೇವನೆಯು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ಹೆಚ್ಚುತ್ತಿರುವ ಯೂರಿಕ್ ಆಸಿಡ್ ಮಟ್ಟವು ಸಂಧಿವಾತ ಸಮಸ್ಯೆಗೆ ಕಾರಣವಾಗಬಹುದು.


COMMERCIAL BREAK
SCROLL TO CONTINUE READING

ಯೂರಿಕ್ ಆಸಿಡ್ ಮಟ್ಟವು ಹೆಚ್ಚಾಗುತ್ತದೆ :
ಹೂಕೋಸಿನಲ್ಲಿರುವ ಕ್ಯಾಲ್ಸಿಯಂ ಯೂರಿಕ್ ಆಸಿಡ್ (Uric acid) ಮಟ್ಟವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಪೊಟ್ಯಾಸಿಯಮ್ ಪ್ರಮಾಣವೂ ಇದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ರಕ್ತವು ದಪ್ಪವಾಗಲು ಪ್ರಾರಂಭಿಸುತ್ತದೆ. 


ಇದನ್ನೂ ಓದಿ : Jaggery: ಚಳಿಗಾಲದಲ್ಲಿ ಅತಿಯಾದ ಬೆಲ್ಲ ಸೇವನೆ ಹಾನಿಕಾರಕ


ರೋಗವನ್ನು ಉಲ್ಬಣಗೊಳಿಸುತ್ತದೆ :


ಯೂರಿಕ್ ಆಮ್ಲವು ರಕ್ತದಲ್ಲಿ ಇರುವ ಒಂದು ರೀತಿಯ ರಾಸಾಯನಿಕವಾಗಿದೆ. ಇದು ದೇಹದಲ್ಲಿ ಪ್ಯೂರಿನ್ ಎಂದು ಕರೆಯಲ್ಪಡುವ ಪ್ರೋಟೀನ್‌ಗಳ ವಿಭಜನೆಯಿಂದ ರೂಪುಗೊಳ್ಳುತ್ತದೆ. ಹೂಕೋಸುಗಳಲ್ಲಿ ಪ್ಯೂರಿನ್ ಅಧಿಕವಾಗಿದೆ. ಇದರ ಅತಿಯಾದ ಸೇವನೆಯು ಸಂಧಿವಾತ ರೋಗಿಗಳಲ್ಲಿ ರೋಗವನ್ನು ಉಲ್ಬಣಗೊಳಿಸಬಹುದು.


ಕಿಡ್ನಿ ಸ್ಟೋನ್ ಗೆ ಹಾನಿಕಾರಕ :


ಮೂತ್ರಪಿಂಡದ ಕಲ್ಲಿನ ಸಮಸ್ಯೆ (Kidney stone) ಇರುವವರು ಹೂಕೋಸು ಸೇವಿಸಬಾರದು. ಹೆಚ್ಚಿನ ಪ್ರಮಾಣದಲ್ಲಿ ಹೂಕೋಸು ಸೇವನೆಯು ಕಿಡ್ನಿ ಸ್ಟೋನ್ ಸಮಸ್ಯೆಯನ್ನು (Side effects of cauliflower) ಹೆಚ್ಚಿಸುತ್ತದೆ.


ಇದನ್ನೂ ಓದಿ : Vitamin D Deficiency: ದೇಹದಲ್ಲಿ ವಿಟಮಿನ್ ಡಿ ಕೊರತೆಯ ಈ ರೋಗಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ


ಗ್ಯಾಸ್ ಸಮಸ್ಯೆ :


ಹಾಲುಣಿಸುವ ಮಹಿಳೆಯರು ಹೂಕೋಸು ಸೇವನೆಯನ್ನು ಸಹ ತಪ್ಪಿಸಬೇಕು. ಯಾಕೆಂದರೆ ಹೂಕೋಸು ಸೇವನೆಯಿಂದ ಗ್ಯಾಸ್ ಸಮಸ್ಯೆ (Acidity) ಉಂಟಾಗುತ್ತದೆ. 
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.