ಎಚ್ಚರ! ಈ ಸಣ್ಣ ತಪ್ಪು ಆಸಿಡಿಟಿಗೆ ಕಾರಣವಾಗಬಹುದು..
Acidity: ಕೆಲವೊಂದು ಆಹಾರವನ್ನು ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಹೆಚ್ಚಾಗುತ್ತದೆ. ಪ್ರತಿದಿನ ಬೆಳಿಗ್ಗೆ ತಿನ್ನುವ ಆಹಾರ ಆರೋಗ್ಯದ ಮೇಲೆ ಅನೇಕ ರೀತಿಯ ಪರಿಣಾಗಳನ್ನು ಬೀರಬಹುದು. ಬೆಳಗಿನ ಹೊತ್ತು ತಿನ್ನುವ ಉಪಹಾರ ಆಸಿಡಿಟಿ ಸಮಸ್ಯೆಗೆ ಗುರಿಯಾಗಿಸಬಹುದು.
How to Cure Acidity: ಇಂದಿನ ಆಧುನಿಕ ಜೀವನಶೈಲಿಯಲ್ಲಿ ಅನೇಕ ಜನರು ಆಸಿಡಿಟಿ ಸಮಸ್ಯೆಯಿಂದ ತೊಂದರೆಗೀಡಾಗುತ್ತಾರೆ. ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಇದು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕಾಗಿ ಆರೋಗ್ಯವನ್ನು ಹಾಳುಮಾಡುವ ಮತ್ತು ಆಸಿಡಿಟಿಗೆ ದೊಡ್ಡ ಕಾರಣವಾಗುವ ಈ ಅಭ್ಯಾಸವನ್ನು ಬದಲಿಸಬೇಕಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದಂತಹ ಅನೇಕ ಆಹಾರ ಪದಾರ್ಥಗಳಿವೆ. ಇವುಗಳಲ್ಲಿ ಮಸಾಲೆಯುಕ್ತ ವಸ್ತುಗಳು, ಬಿಸಿ ಕಾಫಿ, ಎಣ್ಣೆಯುಕ್ತ ಆಹಾರ, ಚಾಕೊಲೇಟ್, ಇತ್ಯಾದಿ. ಈ ವಿಷಯಗಳಿಂದ ದೂರವಿರುವುದು ಉತ್ತಮ.
ಇದನ್ನೂ ಓದಿ: World No-Tobacco Day: ಆರೋಗ್ಯಕರ ಜೀವನಕ್ಕೆ ಧೂಮಪಾನ ತೊರೆಯಲು 7 ಸಲಹೆಗಳು
ಬೆಳಗ್ಗೆ ಎದ್ದ ಬಳಿಕ ನೀವು ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುತ್ತಿದ್ದರೆ ಮೊದಲು ಅದನ್ನು ನಿಲ್ಲಿಸಿ. ಇದೂ ಕೂಡ ಆಸಿಡಿಟಿ ಸಮಸ್ಯೆಗೆ ಕಾರಣವಾಗಬಹುದು. ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸಿದರೆ, ಪಿತ್ತರಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದಾಗಿ ಆಸಿಡಿಟಿ, ವಾಕರಿಕೆ ಸಮಸ್ಯೆಗಳು ಕಂಡುಬರುತ್ತವೆ. ಬೆಳಿಗ್ಗೆ ಚಹಾವಿಲ್ಲದೆ ಬದುಕಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಚಹಾದೊಂದಿಗೆ ಶುಂಠಿಯನ್ನು ಬೆರೆಸಿ ಕುಡಿಯಬಹುದು. ಇದು ಆಸಿಡಿಟ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಬೆಳಗಿನ ಉಪಾಹಾರದಲ್ಲಿ ಓಟ್ ಮೀಲ್ ಅನ್ನು ಸೇರಿಸಿ, ಇದು ಹೊಟ್ಟೆಯಲ್ಲಿ ಗ್ಯಾಸ್ ಉಂಟುಮಾಡುವುದಿಲ್ಲ ಮತ್ತು ಜೀರ್ಣಾಂಗ ವ್ಯವಸ್ಥೆಯು ಸಹ ಉತ್ತಮವಾಗಿರುತ್ತದೆ. ಬೆಳಗ್ಗೆ ಬೇಯಿಸಿದ ಮೊಟ್ಟೆ ತಿಂದರೆ ಹೊಟ್ಟೆಯ ಸಮಸ್ಯೆ ಇರುವುದಿಲ್ಲ. ಹಸಿರು ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು, ಆದ್ದರಿಂದ ನೀವು ಇದನ್ನು ಪ್ರತಿದಿನ ಬೆಳಿಗ್ಗೆ ಇವನ್ನು ತಿನ್ನಬಹುದು, ಆದರೂ ಆಸಿಡಿಟಿ ತಪ್ಪಿಸಲು ಇದನ್ನು ಹೆಚ್ಚು ಎಣ್ಣೆಯಲ್ಲಿ ಬೇಯಿಸಬೇಡಿ. ತಿಂದ ನಂತರ ಬೆಳಿಗ್ಗೆ ವಾಕ್ ಮಾಡಿ, ಇದು ಆಸಿಡಿಟಿ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Health Care Tips: ಹೈ ಬಿಪಿ ನಿಯಂತ್ರಿಸಲು ಈ ರೀತಿ ಇರಲಿ ನಿಮ್ಮ ದಿನಚರಿ
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.