Drinks For Diabetics: ವಯಸ್ಸಿನ ಎಲ್ಲೆಯನ್ನೇ ಮೀರಿ ಇಂದು ಮಧುಮೇಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ವೇಗವಾಗಿ ಹೆಚ್ಚಾಗುತ್ತಿದೆ. ಈ ರೋಗವು ಹಾಳಾದ ದಿನಚರಿ, ತಪ್ಪು ಆಹಾರ ಪದ್ಧತಿ ಮತ್ತು ಅತಿಯಾದ ವಿಶ್ರಾಂತಿಯಿಂದ ಉಂಟಾಗುತ್ತದೆ. ಒಮ್ಮೆ ಮಧುಮೇಹಕ್ಕೆ ಗುರಿಯಾದರೆ, ಅದು ನಿಮ್ಮೊಂದಿಗೆ ಜೀವನದುದ್ದಕ್ಕೂ ಇರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳ ಮತ್ತು ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಹಾರ್ಮೋನ್ ಬಿಡುಗಡೆಯಾಗದ ಕಾರಣ ಮಧುಮೇಹದ ಸಮಸ್ಯೆ ಉಂಟಾಗುತ್ತದೆ. ಇದಕ್ಕಾಗಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ತುಂಭಾ ಮುಖ್ಯ. ಅಲಕ್ಷ್ಯದಿಂದಾಗಿ ಅನೇಕ ರೋಗಗಳು ಬರುತ್ತವೆ. ನೀವು ಸಹ ಮಧುಮೇಹ ರೋಗಿಗಳಾಗಿದ್ದರೆ ಮತ್ತು ಏರುತ್ತಿರುವ ಸಕ್ಕರೆಯನ್ನು ನಿಯಂತ್ರಿಸಲು ಬಯಸಿದರೆ, ನೀವು ಪ್ರತಿದಿನ ಬೆಳಗ್ಗೆ ಹಸಸಿದ ಬಾಯಿ ಈ ಪಾನೀಯಗಳನ್ನು ಸೇವಿಸಬಹುದು. ಬನ್ನಿ ವಿಸ್ತೃತವಾಗಿ ತಿಳಿದುಕೊಳ್ಳೋಣ,


COMMERCIAL BREAK
SCROLL TO CONTINUE READING

ಮಾವಿನ ಎಲೆಗಳು
ಮಾವಿನ ಎಲೆಗಳು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಸಂಶೋಧನೆಗಳು ಬಹಿರಂಗಪಡಿಸಿವೆ. ಮಾವಿನ ಎಲೆಗಳಲ್ಲಿ ಮ್ಯಾಂಗಿಫೆರಿನ್ ಕಂಡುಬರುತ್ತದೆ, ಇದು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಮಾವಿನ ಎಲೆಗಳನ್ನು ಹೊಂದಿರುವ ನೀರನ್ನು ಕುಡಿಯಿರಿ. ಮಾವಿನ ಎಲೆಗಳನ್ನು ಕುದಿಸಿ ನಂತರ ಅದರ ನೀರನ್ನು ಸೇವಿಸಬಹುದು.


ಸೀಬೆ ಗಿಡದ ಎಲೆಗಳು
ಸೀಬೆ ಹಣ್ಣಿನ ಗಿಡದ ಎಲೆಗಳು ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಸಹ ಪ್ರಯೋಜನಕಾರಿ ಸಾಬೀತಾಗುತ್ತವೆ. ಇದಕ್ಕಾಗಿ ಸೀಬೆ ಎಲೆಗಳನ್ನು ಹೊಂದಿರುವ ಪಾನೀಯವನ್ನು ಪ್ರತಿದಿನ ಸೇವಿಸಿ. ಇದಕ್ಕಾಗಿ ಎರಡು ಪೇರಲ ಎಲೆಗಳನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ಸೇವಿಸಿ. ಜೇನುತುಪ್ಪವನ್ನು ಸಿಹಿಕಾರಕವಾಗಿ ನೀವು ಬಳಸಬಹುದು.


ಕರಿಬೇವು
ಆರೋಗ್ಯ ತಜ್ಞರ ಪ್ರಕಾರ, ಕರಿಬೇವಿನ ಎಲೆಗಳಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಇದರ ಸೇವನೆಯಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಮತ್ತು ಇದು ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಕರಿಬೇವಿನ ಸೊಪ್ಪನ್ನು ಕುದಿಸಿ ಕುಡಿಯಿರಿ. ಇನ್ನೊಂದೆಡೆ, ನೀವು ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಸಹ ಸೇರಿಸಬಹುದು. ಇದು ಆಹಾರದ ರುಚಿಯ ಜೊತೆಗೆ ಸ್ವಾದವನ್ನು ಕೂಡ ಹೆಚ್ಚಿಸುತ್ತದೆ.


ಇದನ್ನೂ ಓದಿ-Cholesterol ರೋಗಿಗಳು ಮೊಟ್ಟೆಯನ್ನು ಮರೆತೂ ಸೇವಿಸಬಾರದು, ಕಾರಣ ಇಲ್ಲಿದೆ


ಸ್ಪೈರಲ್ ಫ್ಲಾಗ್ ಅಥವಾ ಇನ್ಸುಲಿಂಗ್ ಪ್ಲಾಂಟ್ ಎಲೆಗಳು
ಸ್ಪೈರಲ್ ಫ್ಲಾಗ್ ಎಲೆಗಳು ಸಕ್ಕರೆಯನ್ನು ನಿಯಂತ್ರಿಸಲು ಸಹಾಯಕವಾಗಿವೆ ಎಂದು ಅನೇಕ ಸಂಶೋಧನೆಗಳು ಹೇಳಿವೆ. ಇದರಲ್ಲಿ ಸಪೋನಿನ್, ಫ್ಲೇವನಾಯ್ಡ್, ಸ್ಟೀರಾಯ್ಡ್, ಆಲ್ಕಲಾಯ್ಡ್ ಮತ್ತು ಪ್ರೊಟೀನ್ ಗುಣಗಳಿದ್ದು, ಇವು ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಇದಕ್ಕಾಗಿ ಸ್ಪೈರಲ್ ಫ್ಲಾಗ್ ಎಲೆಗಳನ್ನು ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸಿ.


ಇದನ್ನೂ ಓದಿ-ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಬೇಕೆ? ನಿಮ್ಮ ನಿಯಮಿತ ಆಹಾರದಲ್ಲಿರಲಿ ಈ ಸಂಗತಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಯ್ಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.