ಒಂದು ಗ್ಲಾಸ್ ಬೂದು ಗುಂಬಳಕಾಯಿ ಜ್ಯೂಸ್… ದೇಹದ ಹಠಮಾರಿ ಬೊಜ್ಜು ಕರಗಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ!
Ash Gourd Juice: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳಕಾಯಿ ಜ್ಯೂಸ್ ಅನ್ನು ಕುಡಿದರೆ ದೇಹವನ್ನು ನಿರ್ವಿಷಗೊಳಿಸುತ್ತದೆ ಜೊತೆಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
Ash Gourd Juice: ಬೂದು ಗುಂಬಳಕಾಯಿ ಸಾಮಾನ್ಯವಾಗಿ ಹೆಚ್ಚು ಇಷ್ಟವಾಗದ ತರಕಾರಿಗಳಲ್ಲಿ ಒಂದು. ಆದರೆ ಇದರಲ್ಲಿರುವ ಆರೋಗ್ಯ ಪ್ರಯೋಜನ ಒಂದೆರಡಲ್ಲ. ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬೂದು ಗುಂಬಳಕಾಯಿಯು ಆರೋಗ್ಯವನ್ನು ಉತ್ತೇಜಿಸುವ ಮೂಲಕ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ.
ಇದನ್ನೂ ಓದಿ: IND vs ENG Test: ರಾಂಚಿ ಟೆಸ್ಟ್ ಗೆದ್ದರೆ ಈ ಶ್ರೇಷ್ಠ ದಾಖಲೆ ಬರೆಯಲಿದೆ ಟೀಂ ಇಂಡಿಯಾ! ಯಾವುದದು?
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳಕಾಯಿ ಜ್ಯೂಸ್ ಅನ್ನು ಕುಡಿದರೆ ದೇಹವನ್ನು ನಿರ್ವಿಷಗೊಳಿಸುತ್ತದೆ ಜೊತೆಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ಬೂದುಗುಂಬಳಕಾಯಿ ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿದೆ ಮತ್ತು ಸಾಕಷ್ಟು ನೀರಿನ ಪ್ರಮಾಣವೂ ಇದೆ. ಇದರ ಜ್ಯೂಸ್ ಕುಡಿದರೆ, ವೇಗವಾಗಿ ತೂಕ ಇಳಿಕೆ ಮಾಡಬಹುದು. ಅಲ್ಲದೆ, ಇದು ಫೈಬರ್’ನಿಂದ ಸಮೃದ್ಧವಾಗಿದೆ.
ಬೇಸಿಗೆಯಲ್ಲಿ ಬೂದುಗುಂಬಳಕಾಯಿ ಉತ್ತಮ ಆಹಾರಗಳಲ್ಲಿ ಒಂದು. ಏಕೆಂದರೆ ಇದು ದೇಹವನ್ನು ತಂಪಾಗಿಸಲು ಕೆಲಸ ಮಾಡುತ್ತದೆ. ಕ್ಷಾರೀಯ ಆಹಾರವಾಗಿರುವುದರಿಂದ, ಇದು ಹಾನಿಕಾರಕ ರಾಸಾಯನಿಕಗಳ ಪರಿಣಾಮಗಳನ್ನು ತಟಸ್ಥಗೊಳಿಸುತ್ತದೆ,
ಬೂದುಗುಂಬಳಕಾಯಿ ಜ್ಯೂಸ್ ಮ್ಯಾಜಿಕ್ ಡ್ರಿಂಕ್ ಆಗಿ ಕೆಲಸ ಮಾಡಲಿದೆ. ಇದು ದೇಹವನ್ನು ನಿರ್ವಿಷಗೊಳಿಸುವುದು ಮಾತ್ರವಲ್ಲದೆ, ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಬೂದುಗುಂಬಳಕಾಯಿ ಜ್ಯೂಸ್ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಇದು ಜೀರ್ಣಕ್ರಿಯೆ, ಮಲಬದ್ಧತೆ ಮತ್ತು ಇತರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಬೂದುಗುಂಬಳಕಾಯಿಯಲ್ಲಿ ಕ್ಯಾಲ್ಸಿಯಂ, ಸತು, ರಂಜಕ ಮತ್ತು ವಿಟಮಿನ್’ಗಳಾದ ಥಯಾಮಿನ್ ಮತ್ತು ರೈಬೋಫ್ಲಾವಿನ್ ಸಮೃದ್ಧವಾಗಿದೆ. ಇದು ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಆಯಾಸವನ್ನು ತೆಗೆದುಹಾಕುತ್ತದೆ.
ಬೂದು ಗುಂಬಳಕಾಯಿ ದೇಹವನ್ನು ತಂಪಾಗಿಸುವ ಗುಣಗಳನ್ನು ಹೊಂದಿದೆ. ಅದರಲ್ಲೂ ಜ್ಯೂಸ್ ಕುಡಿದರೆ ನಿದ್ರಾಹೀನತೆ ಮತ್ತು ಆತಂಕದಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಯುರಿಕ್ ಆಸಿಡ್ ಅನ್ನು ನಿಯಂತ್ರಣದಲ್ಲಿಡುತ್ತದೆ ಈ ಹಣ್ಣುಗಳಲ್ಲ ಅವುಗಳ ಸಿಪ್ಪೆ !
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.