Cold Water Side Effects: ಬಿಸಿಲಿನಲ್ಲಿ ಹೆಚ್ಚು ಕಾಲ ನಿಂತರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನವರು ತಣ್ಣೀರು ಕುಡಿಯಲು ಇಷ್ಟಪಡುತ್ತಾರೆ. ಇದು ನಿಮ್ಮನ್ನು ಕೆಲವು ಕ್ಷಣಗಳವರೆಗೆ ತಂಪಾಗಿರುವಂತೆ ಮಾಡುತ್ತದೆ. ಆದರೆ ಹೊರಗಿನಿಂದ ಬಂದ ತಕ್ಷಣ ತಣ್ಣೀರು ಕುಡಿಯುವುದರಿಂದ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬಟ್ಟೆ ಹಾಕದೆ ಬೆತ್ತಲೆ ಮಲಗಿದರೆ ಇಳಿಕೆಯಾಗುತ್ತೆ ಹೆಚ್ಚುವರಿ ತೂಕ: ಬ್ಲಡ್ ಶುಗರ್ ನಿಯಂತ್ರಣಕ್ಕೂ ಇದು ವರದಾನ!


ಹೊರಗಿನ ಶಾಖದಿಂದ ಹೊರಬಂದ ತಕ್ಷಣ ತಣ್ಣೀರು ಕುಡಿಯುವ ಅಭ್ಯಾಸವು ದೇಹಕ್ಕೆ ರೋಗಗಳನ್ನು ಆಹ್ವಾನಿಸಿದಂತೆ. ಆದ್ದರಿಂದ, ಸಾಮಾನ್ಯ ತಾಪಮಾನದ ನೀರನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾಗಿದೆ. ಮನೆಗೆ ಬಂದ ನಂತರ ಫ್ರಿಡ್ಜ್’ನಿಂದ ತಣ್ಣೀರು ಕುಡಿದರೆ ಅದರಿಂದಾಗುವ ಹಾನಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.


ಜೀರ್ಣಕಾರಿ ಸಮಸ್ಯೆಗಳು: ಬೇಸಿಗೆಯಲ್ಲಿ ತಣ್ಣೀರು ಕುಡಿಯುವುದು ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹೊಟ್ಟೆ ನೋವು, ಅಜೀರ್ಣ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.


ಗಂಟಲಿನ ಸಮಸ್ಯೆಗಳು: ತಣ್ಣೀರು ಕುಡಿಯುವುದರಿಂದ ಶೀತ ಅಥವಾ ಗಂಟಲು ನೋವು ಉಂಟಾಗುತ್ತದೆ. ವಿಶೇಷವಾಗಿ ದೇಹವು ಈಗಾಗಲೇ ಬಿಸಿಯಾಗಿದ್ದರೆ, ಅದರ ಪರಿಣಾಮವು ಹೆಚ್ಚಾಗಿರುತ್ತದೆ.


ಶೀತ ಮತ್ತು ಕೆಮ್ಮು: ತಣ್ಣೀರು ಕುಡಿಯುವುದರಿಂದ ದೇಹದ ಉಷ್ಣತೆಯು ಹಠಾತ್ತನೆ ಕಡಿಮೆಯಾಗುತ್ತದೆ. ಇದು ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.


ಹೃದಯಕ್ಕೆ ಅಪಾಯ: ಹಠಾತ್ತನೆ ತಣ್ಣೀರು ಕುಡಿಯುವುದರಿಂದ ಹೃದಯದ ಮೇಲೆ ಪರಿಣಾಮ ಬೀರಬಹುದು. ಸ್ವಲ್ಪ ಸಮಯದವರೆಗೆ ಅನಿಯಮಿತ ಹೃದಯ ಬಡಿತ ಉಂಟಾಗುತ್ತದೆ. ದೇಹದ ಉಷ್ಣಾಂಶದಲ್ಲಿನ ಹಠಾತ್ ಬದಲಾವಣೆಯಿಂದಾಗಿ ಇದು ಸಂಭವಿಸುತ್ತದೆ.


ಹಲ್ಲಿನ ಸಮಸ್ಯೆಗಳು: ತುಂಬಾ ತಣ್ಣನೆಯ ನೀರನ್ನು ಕುಡಿಯುವುದು ಹಲ್ಲಿನ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ಹಲ್ಲುನೋವಿಗೆ ಕಾರಣವಾಗಬಹುದು. ಸೂಕ್ಷ್ಮ ಹಲ್ಲುಗಳನ್ನು ಹೊಂದಿರುವ ಜನರು ಯಾವುದೇ ತಣ್ಣನೆಯ ಆಹಾರವನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ಎದುರಿಸಬಹುದು.


ಇದನ್ನೂ ಓದಿ: ಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿ: 10 ನಿಮಿಷದಲ್ಲಿ ಬಿಳಿ ಕೂದಲು ಮರಳಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ!


ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ