ದನದ ಹಾಲಲ್ಲ, ಈ ಪ್ರಾಣಿಯ ಹಾಲು ಕುಡಿದ ತಕ್ಷಣ ಕಡಿಮೆಯಾಗುತ್ತೆ ಡೆಂಘೀ ಜ್ವರ! ಪ್ಲೇಟ್ಲೆಟ್ಸ್ ಸಂಖ್ಯೆ ಹೆಚ್ಚಾಗಲು ಇದು ವರದಾನ
Goat Milk for dengue: ಡೆಂಗ್ಯೂ ಸೋಂಕಿಗೆ ಒಳಗಾಗಿದ್ದರೆ, ಚೇತರಿಸಿಕೊಳ್ಳುವವರೆಗೆ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಜೀವಕ್ಕೆ ಅಪಾಯವಿದೆ. ಡೆಂಗ್ಯೂ ಪೀಡಿತರು ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಬೇಕು.
Goat Milk for dengue: ಹವಾಮಾನ ಬದಲಾವಣೆಯಿಂದ ರೋಗಗಳು ಹರಡುತ್ತಿವೆ. ಅದರಲ್ಲೂ ಚಿಕೂನ್ ಗುನ್ಯಾ, ಮಲೇರಿಯಾ, ಡೆಂಗ್ಯೂ ಮತ್ತು ವೈರಲ್ ಜ್ವರಗಳು ಹೆಚ್ಚಾಗಿವೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ ಡೆಂಗ್ಯೂ ಅಪಾಯಕಾರಿ. ಡೆಂಗ್ಯೂ ವೈರಸ್ ಸೋಂಕಿತ ಈಡಿಸ್ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ ಜ್ವರ ಬರುತ್ತದೆ.
ನೀವು ಡೆಂಗ್ಯೂ ಸೋಂಕಿಗೆ ಒಳಗಾಗಿದ್ದರೆ, ಚೇತರಿಸಿಕೊಳ್ಳುವವರೆಗೆ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಜೀವಕ್ಕೆ ಅಪಾಯವಿದೆ. ಡೆಂಗ್ಯೂ ಪೀಡಿತರು ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಬೇಕು.
ಇದನ್ನೂ ಓದಿ: ಪತ್ನಿ ಅನುಷ್ಕಾಗೆ ವಿಡಿಯೋ ಕಾಲ್ ಮಾಡಿ ಚಂಡಮಾರುತ ತೋರಿಸಿದ ವಿರಾಟ್ ಕೊಹ್ಲಿ
ಪಪ್ಪಾಯಿ ಹಣ್ಣು, ಪಪ್ಪಾಯಿ ಎಲೆಯ ರಸ, ಗಂಜಿ, ರಾಗಿ, ಕ್ಯಾರೆಟ್ ಜ್ಯೂಸ್, ದಾಳಿಂಬೆ, ನಿಂಬೆ ರಸ, ತೆಂಗಿನ ನೀರು, ಹರ್ಬಲ್ ಟೀ ಇತ್ಯಾದಿಗಳು ತುಂಬಾ ಒಳ್ಳೆಯದು. ಇವುಗಳ ಸಹಾಯದಿಂದ ನೀವು ಪ್ಲೇಟ್ಲೆಟ್’ಗಳು ಕಡಿಮೆಯಾಗದಂತೆ ನೋಡಿಕೊಳ್ಳಬಹುದು. ಒಂದು ವೇಳೆ ಕಡಿಮೆಯಾದರೆ, ಮೇಕೆ ಹಾಲು ಕುಡಿಯಿರಿ. ಇದು ಪ್ಲೇಟ್ಲೆಟ್ ಸಂಖ್ಯೆ ಹೆಚ್ಚಾಗುವಂತೆ ಮಾಡುತ್ತದೆ, ಜೊತೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.
ಮೇಕೆ ಹಾಲು ಡೆಂಗ್ಯೂ ಪೀಡಿತರಿಗೂ ತುಂಬಾ ಪ್ರಯೋಜನಕಾರಿ. ಮೇಕೆ ಹಾಲಿನಲ್ಲಿ ಸೆಲೆನಿಯಮ್ ಸಮೃದ್ಧವಾಗಿದೆ. ಪ್ರತಿರಕ್ಷಣಾ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಸೆಲೆನಿಯಮ್ ಪ್ರಮುಖ ಪಾತ್ರ ವಹಿಸುತ್ತದೆ. ಸೆಲೆನಿಯಮ್ ದೇಹದಲ್ಲಿ ವೈರಸ್’ಗಳ ಬೆಳವಣಿಗೆಯನ್ನು ತಡೆಯಲು ಸಹ ಸಹಾಯ ಮಾಡುತ್ತದೆ. ಹಾಗಾಗಿ ಡೆಂಗ್ಯೂ ರೋಗಿಗಳು ಬೇಗ ಚೇತರಿಸಿಕೊಳ್ಳಲು ಮೇಕೆ ಹಾಲು ಕುಡಿಯುವುದು ಬಹಳ ಮುಖ್ಯ.
ಪಪ್ಪಾಯಿ ಎಲೆಗಳ ರಸವು ಸಹ ಡೆಂಗ್ಯೂ ಚಿಕಿತ್ಸೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್ಲೆಟ್ ಕೌಂಟ್ ಸುಧಾರಿಸುತ್ತದೆ. ಹಾಗೆಯೇ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಡೆಂಗ್ಯೂ ರೋಗಿಗಳು ದಿನಕ್ಕೆ ಎರಡರಿಂದ ಮೂರು ಬಾರಿ ಈ ಎಲೆಗಳ ರಸವನ್ನು ನೀರಿನಲ್ಲಿ ಬೆರೆಸಿ ಸೇವಿಸಬೇಕು.
ಇದನ್ನೂ ಓದಿ: “ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್’ರನ್ನು ಮದುವೆಯಾಗಲಿದ್ದೇನೆ”- ಡಿವೋರ್ಸ್ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಹೇಳಿಕೆ
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ