ಬೆಂಗಳೂರು: ಮೊರಿಂಗಾ ಅಥವಾ ಡ್ರಮ್ ಸ್ಟಿಕ್ ಎಂಬುದು ಜನರು ತಮ್ಮ ಆಹಾರದಲ್ಲಿ ರುಚಿಯನ್ನು ಹೆಚ್ಚಿಸಲು ಹೆಚ್ಚಾಗಿ ಸೇರಿಸುವ ಗಿಡಮೂಲಿಕೆಯಾಗಿದೆ. ಇದಲ್ಲದೇ ಹಲವು ರೋಗಗಳಿಗೆ ನುಗ್ಗೆಕಾಯಿ ರಾಮಬಾಣವಾಗಿ ಕೆಲಸ ಮಾಡುತ್ತದೆ. ಆದಾಗ್ಯೂ, ಮೊರಿಂಗಾವನ್ನು ವಿವಿಧ ರೋಗಗಳಿಗೆ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಇದೆ ಸಂಚಿಕೆಯಲ್ಲಿ ಇಂದು ನಾವು ನಿಮಗೆ ನುಗ್ಗೆಸೊಪ್ಪಿನ ಎಲೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಮಧುಮೇಹ, ಅಧಿಕ ರಕ್ತದೊತ್ತಡ, ಅಸ್ತಮಾದಂತಹ ಮಾಕ ಕಾಯಿಲೆಗಳೂ ಕೂಡ ಇದರಿಂದ ನಿಯಂತ್ರಣಕ್ಕೆ ಬರುತ್ತವೆ. ನುಗ್ಗೆಸೊಪ್ಪು ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ ಮತ್ತು ಆರೋಗ್ಯಕರ ಉತ್ಕರ್ಷಣ ನಿರೋಧಕಗಳು ಮತ್ತು ಜೈವಿಕ ಸಕ್ರಿಯ ಸಸ್ಯ ಸಂಯುಕ್ತಗಳು ಇದರಲ್ಲಿ ಕಂಡುಬರುತ್ತವೆ. ಅಷ್ಟೇ ಅಲ್ಲ, ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ರಂಜಕ ಸಂಧಿವಾತ ಮತ್ತು ಕೀಲು ನೋವಿನಿಂದ ಬಳಲುತ್ತಿರುವವರಿಗೂ ಪರಿಹಾರವನ್ನು ನೀಡುತ್ತವೆ. ತೂಕ ಇಳಿಕೆಗೆ ಈ ಸೊಪ್ಪಿನ ಪುಡಿ ಎಷ್ಟೊಂದು ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, .


COMMERCIAL BREAK
SCROLL TO CONTINUE READING

ಮನೆಯಲ್ಲಿಯೇ ಸುಗ್ಗೆಸೊಪ್ಪಿನ ಪುಡಿಯನ್ನು ಈ ರೀತಿ ತಯಾರಿಸಿ
ಮನೆಯಲ್ಲಿ ನುಗ್ಗೆಸೊಪ್ಪಿನ ಪುಡಿಯನ್ನು ತಯಾರಿಸಲು, ಮೊದಲು ಅದರ ಎಲೆಗಳನ್ನು ಒಣಗಿಸಿ. ಇದರ ನಂತರ, ಅದರ ಪುಡಿಯನ್ನು ತಯಾರಿಸಿ. ಹಾಗೆ ನೋಡಿದರೆ ನುಗ್ಗೆಗಿಡದ ಎಲ್ಲಾ ಭಾಗಗಳು ಪ್ರಯೋಜನಕಾರಿಯಾಗಿವೆ. ನುಗ್ಗೆಕಾಯಿಯ ಸೂಪ್ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಅದರ ಪುಡಿಯನ್ನು ತಯಾರಿಸಬಹುದು ಮತ್ತು ಅದನ್ನು ಮನೆಯಲ್ಲಿ ಸಂಗ್ರಹಿಸಬಹುದು.


ನುಗ್ಗೆಸೊಪ್ಪಿನ ಪ್ರಯೋಜನಗಳು
ನೀವು ತೂಕ ಇಳಿಕೆಗೆ ನುಗ್ಗೆಸೊಪ್ಪನ್ನು ಹಲವು ವಿಧಗಳಲ್ಲಿ ಬಳಸಬಹುದು, ಇದಕ್ಕಾಗಿ ನೀವು ಅದರ ಪುಡಿಯನ್ನು ಉಗುರು ಬೆಚ್ಚಗಿನ ನೀರಿಗೆ ಸೇರಿಸಿ ಕುಡಿಯಬಹುದು ಅಥವಾ ನೀರಿನಲ್ಲಿ ಕುದಿಸಿ ಫಿಲ್ಟರ್ ಮಾಡಿ ಚಹಾ ರೂಪದಲ್ಲಿಯೂ ಕೂಡ ಅದನ್ನು ಕುಡಿಯಬಹುದು. ಬೆಳಗ್ಗೆ ಇದನ್ನು ಸೇವಿಸುವುದರಿಂದ ತೂಕವು ತ್ವರಿತವಾಗಿ ಇಳಿಕೆಯಾಗುತ್ತದೆ. ಮೊರಿಂಗಾ ಎಲೆಗಳು ಕೂಡ ತೂಕ ಇಳಿಕೆಗೆ ಪರಿಣಾಮಕಾರಿಯಾಗಿದೆ.  ಇದರ ಸೇವನೆಯು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬನ್ನು ಸುಡುತ್ತದೆ.


ಇದನ್ನೂ ಓದಿ-ಏನಿದು ಬೆಲ್ಲ ಕಡಲೆಬೇಳೆ ಕಾಂಬಿನೇಷನ್, ಇವುಗಳನ್ನು ಒಟ್ಟಿಗೆ ಸೇವಿಸಲು ಏಕೆ ಸಲಹೆ ನೀಡಲಾಗುತ್ತದೆ?


ಈ ರೀತಿ ಸೇವಿಸಿ
ಇದಲ್ಲದೇ ದೇಹದಲ್ಲಿ ವಿಟಮಿನ್ ಮತ್ತು ಮಿನರಲ್ ಕೊರತೆ ಇರುವವರು ಕೂಡ ನುಗ್ಗೆಸೊಪ್ಪಿನ ಪುಡಿಯನ್ನು ಸೇವಿಸಬಹುದು. ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರಿನಲ್ಲಿ ಈ ಪುಡಿಯನ್ನು ತೆಗೆದುಕೊಳ್ಳುವುದು ಅಥವಾ ಅದರಿಂದ ಚಹಾವನ್ನು ತಯಾರಿಸಿ ಕುಡಿಯುವುದರಿಂದ ತೂಕ ಇಳಿಕೆಗೆ ಹೆಚ್ಚು ಪ್ರಯೋಜನಕಾರಿ ಎಂದು ಇದು ಸಾಬೀತಾಗುತ್ತದೆ. ಆದಾಗ್ಯೂ, ನೀವು ಅದರ ಪುಡಿಯನ್ನು ಆಹಾರ ಪದಾರ್ಥಗಳಲ್ಲಿ ಕೂಡ ಬೆರೆಸಬಹುದು. ಇದಕ್ಕಾಗಿ, ನೀವು 1 ಚಮಚ ನುಗ್ಗೆ ಸೊಪ್ಪಿನ ಪುಡಿಯನ್ನು ಸ್ಮೂಥಿ, ದಾಲ್‌ ಇತ್ಯಾದಿಗಳಲ್ಲಿ ಬೆರೆಸಿ ಸೇವಿಸಬಹುದು.


ಇದನ್ನೂ ಓದಿ-ದೇಸಿ ತುಪ್ಪ ಸೇವಿಸುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆಯಾ? ಇಂದೇ ತಿಳಿದುಕೊಳ್ಳಿ ಈ ನಿಜಾಂಶ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.