ಬೆಂಗಳೂರು : ಸ್ನಾಯು ಸೆಳೆತವು ತುಂಬಾ ಸಾಮಾನ್ಯವಾದದ್ದು. ಈ ಸಮಸ್ಯೆಯು ಹೆಚ್ಚಾಗಿ 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ.ರಾತ್ರಿ ವೇಳೆಯಲ್ಲಿ ಈ ಸಮಸ್ಯೆ ಕಾಡುವುದು ಹೆಚ್ಚು. ಈ ಸಮಯದಲ್ಲಿ ಹಿಂಬದಿ ಕಾಲು ಮತ್ತು ಪಾದಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ತೊಡೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ನೋವು ಕೆಲವೊಮ್ಮೆ ಕೆಲ ನಿಮಿಷಗಳಲ್ಲಿಯೇ ಸರಿಯಾಗುತ್ತದೆ. ಇನ್ನು ಕೆಲವೊಮ್ಮೆ ಇಡೀ ರಾತ್ರಿ ಈ ನೋವು ಬಾಧಿಸುತ್ತದೆ. 


COMMERCIAL BREAK
SCROLL TO CONTINUE READING

ಕಾಲಿನ ಸೆಳೆತವನ್ನು  ಗುಣಪಡಿಸುವುದು ಹೇಗೆ ? :
೧.ಸ್ನಾಯುಗಳನ್ನು ನಿಧಾನವಾಗಿ ಹಿಗ್ಗಿಸಿ.
೨.ನಿಮ್ಮ ಕೈಗಳಿಂದ ಆ ಜಾಗವನ್ನು ಮಸಾಜ್ ಮಾಡಿ.
೩. ಮಸಾಜ್ ಮಾಡಲು ನೀವು ಫೋಮ್ ರೋಲರ್ ಅನ್ನು ಬಳಸಬಹುದು.
೪. ಕಾಲುಗಳನ್ನು ಬಗ್ಗಿಸಿ ಮತ್ತು ತೆರೆಯಿರಿ, ಇದು ಸ್ನಾಯುಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ.
೫. ನಿಮ್ಮ ಸ್ನಾಯುಗಳ ಮೇಲೆ ಬಿಸಿ ಶಾಖ ಕೊಟ್ಟರೂ ಪರಿಣಾಮ ಬೀರುತ್ತದೆ. 


ಇದನ್ನೂ ಓದಿ : ಪ್ರತಿನಿತ್ಯ ಈ ಹಣ್ಣುಗಳನ್ನು ಸೇವಿಸಿ.. ದೇಹದಲ್ಲಿರುವ ಯೂರಿಕ್‌ ಆಸಿಡ್‌ ತಾನಾಗೆ ಕರಗಿ ನೀರಾಗುತ್ತೆ


ಕಾಲಿನ ಸೆಳೆತದ ಹಿಂದಿನ ಕಾರಣ :  
ದೇಹದಲ್ಲಿ ನೀರಿನ ಕೊರತೆ ಉಂಟಾದರೆ ಹೀಗಾಗುತ್ತದೆ. 
ಬೇಸಿಗೆ ಅಥವಾ ಚಳಿಗಾಲವಾಗಿರಲಿ, ದೇಹವನ್ನು ಸಮರ್ಪಕವಾಗಿ ಹೈಡ್ರೀಕರಿಸಲು ನೀರು ಮತ್ತು ಇತರ ದ್ರವಗಳನ್ನು ಕುಡಿಯಬೇಕು. ಏಕೆಂದರೆ ನೀರಿನ ಕೊರತೆಯಿಂದಾಗಿ ಸ್ನಾಯುಗಳಲ್ಲಿ, ವಿಶೇಷವಾಗಿ ಕಾಲುಗಳ ಸ್ನಾಯುಗಳಲ್ಲಿ ನೋವು ಪ್ರಾರಂಭವಾಗುತ್ತದೆ. ಸ್ನಾಯುಗಳು ತಮ್ಮ ಕೆಲಸವನ್ನು ಚೆನ್ನಾಗಿ ಮಾಡಬೇಕಾದರೆ ನಾವು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಇದು ಸೆಳೆತವನ್ನು ತಡೆಯಲು ಸಹಾಯ ಮಾಡುತ್ತದೆ.


ತಪ್ಪು ಗಾತ್ರದ ಬೂಟು : 
ತಪ್ಪು ಗಾತ್ರದ ಬೂಟುಗಳು ಕಾಲಿನ ಸೆಳೆತಕ್ಕೆ ಕಾರಣವಾಗಬಹುದು.ತಾವು ನಿತ್ಯ ಧರಿಸುವ ಶೂ ಬದಲಾಯಿಸಿದ ಮೇಲೆ ಕಾಲಿನ ಸೆಳೆತಕ್ಕೂ ಪರಿಹಾರಸಿಕ್ಕಿದೆ ಎನ್ನುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. 


ಇದನ್ನೂ ಓದಿ : ಯಾವುದೇ ಪಥ್ಯ ಬೇಡ! ಬರೀ ತುಪ್ಪ ತಿಂದ್ರೆ ಸಾಕು ಶುಗರ್ ಹೆಚ್ಚಾಗಲ್ಲ, ಯಾಕ್ ಗೊತ್ತಾ?


ಸ್ನಾಯುವಿನ ಆಯಾಸ :
ಅಧ್ಯಯನಗಳ ಪ್ರಕಾರ, ಹೆಚ್ಚು ವ್ಯಾಯಾಮ ಮಾಡಿದಾಗ ಸ್ನಾಯುಗಳು ಸುಸ್ತಾಗುತ್ತವೆ ಮತ್ತು ಸೆಳೆತ ಕಾಣಿಸಿಕೊಳ್ಳುತ್ತವೆ. 


ನಿಷ್ಕ್ರಿಯತೆ :
ರಾತ್ರಿ ಕಾಣಿಸಿಕೊಳ್ಳುವ ಸೆಳೆತಕ್ಕೆ ಮತ್ತೊಂದು ಕಾರಣವೆಂದರೆ ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿ ಕುಳಿತುಕೊಳ್ಳುವುದು. ಒಬ್ಬ ವ್ಯಕ್ತಿಯು ತಮ್ಮ ಸ್ನಾಯುಗಳನ್ನು ಸ್ವಲ್ಪ ವಿಸ್ತರಿಸದೇ ಬಹಳ ಹೊತ್ತು ಒಂದೇ ರೀತಿ ಕುಳಿತಿದ್ದಾಗ ದೈಹಿಕ ನಿಷ್ಕ್ರಿಯತೆ ಉಂಟಾಗುತ್ತದೆ. ಇದು ಸೆಳೆತದ ಅಪಾಯವನ್ನು ಹೆಚ್ಚಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.