Vitamin D Deficiency: ದೇಹದಲ್ಲಿ ಯಾವುದೇ ಒಂದು ನಿರ್ದಿಷ್ಟ ಪೋಷಕಾಂಶದ ಕೊರತೆಯಾದಾಗ ಅದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿಟಮಿನ್ ಡಿ ದೇಹಕ್ಕೆ ಅತ್ಯಗತ್ಯ ಪೋಷಕಾಂಶವಾಗಿದೆ. ಈ ಲೇಖನದಲ್ಲಿ ವಿಟಮಿನ್ ಡಿ ಕೊರತೆಯ ಲಕ್ಷಣಗಳೇನು? ಇದರಿಂದ ಉಂಟಾಗುವ ಅನಾನುಕೂಲಗಳೇನು? ಇದನ್ನು ನಿವಾರಿಸಲು ಸುಲಭ ಪರಿಹಾರಗಳೇನು ಎಂಬ ಬಗ್ಗೆ ತಿಳಿಯೋಣ... 


COMMERCIAL BREAK
SCROLL TO CONTINUE READING

ದೇಹದಲ್ಲಿ ವಿಟಮಿನ್ ಡಿ ಕೊರತೆಯು ರೋಗನಿರೋಧಕ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.  ಅಷ್ಟೇ ಅಲ್ಲ ಇದು ಮೂಳೆಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದರಿಂದ ಮೂಳೆಗಳು ದುರ್ಬಳಗೊಂಡು, ಮೂಳೆ ಮುರಿತದ ಅಪಾಯವೂ ಹೆಚ್ಚಾಗಬಹುದು. 


ವಿಟಮಿನ್ ಡಿ ಕೊರತೆಯ ಲಕ್ಷಣಗಳು: 
ದೇಹದಲ್ಲಿ ವಿಟಮಿನ್ ಡಿ ಕೊರತೆ ಇದ್ದಾಗ ಅತಿಯಾದ ಆಲಸ್ಯ, ಸುಸ್ತು, ಕೀಲು ನೋವು, ಖಿನ್ನತೆ, ಸ್ನಾಯು ಸೆಳೆತದಂತಹ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. 


ಇದನ್ನೂ ಓದಿ- ಡೆಂಗ್ಯೂ ಜ್ವರದ ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ..!


ವಿಟಮಿನ್ ಡಿ ಕೊರತೆಗೆ ಪ್ರಮುಖ ಕಾರಣಗಳು: 
ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗಲು ಹಲವು ಕಾರಣಗಳಿವೆ. ಅದರಲ್ಲಿ ಬಹುಮುಖ್ಯ ಕಾರಣ ಮನೆಯೊಳಗೇ ಇರುವುದು. ತುಂಬಾ ಹೊತ್ತು ಎಸಿ ಕೋಣೆಯಲ್ಲಿ ಕುಳಿತಿರುವುದು. ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದು. 


ವಿಟಮಿನ್ ಡಿ ನಿವಾರಿಸಲು ಸುಲಭ ಪರಿಹಾರ:
ಸೂರ್ಯನ ಕಿರಣಗಳು ವಿಟಮಿನ್ ಡಿಯ ಅತ್ಯುತ್ತಮ ಮೂಲವಾಗಿದ್ದು,  ಪ್ರತಿದಿನ ಕನಿಷ್ಠ ಅರ್ಧ ಗಂಟೆ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ನಮ್ಮ ದೇಹದಲ್ಲಿನ ಈ ವಿಶೇಷ ಪೋಷಕಾಂಶದ ಕೊರತೆಯನ್ನು ಪೂರೈಸುತ್ತದೆ. ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಮಾತ್ರವಲ್ಲದೆ ಕೆಲವು ಆಹಾರಗಳ ಸಹಾಯದಿಂದಲೂ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು. ಅಂತಹ ಆಹಾರಗಳೆಂದರೆ... 


ವಿಟಮಿನ್ ಡಿ ಸಮೃದ್ಧ ಸಸ್ಯಾಹಾರಗಳು: 
ನೀವು ಸಸ್ಯಾಹಾರಿಗಳಾಗಿದ್ದರೆ,  ಹಸುವಿನ ಹಾಲು, ಕಿತ್ತಳೆ ರಸ, ಧಾನ್ಯಗಳು ಮತ್ತು ಮಶ್ರೂಮ್ ಸಲಾಡ್ ಸೇವನೆಯಿಂದ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು. ಸಸ್ಯಾಹಾರಿಗಳು ಬಾದಾಮಿ ಹಾಲು, ಸೋಯಾ ಹಾಲಿನ ಸೇವನೆಯಿಂದಲೂ ವಿಟಮಿನ್ ಡಿ ಪಡೆಯಬಹುದಾಗಿದೆ. 


ಇದನ್ನೂ ಓದಿ- ಗರ್ಭಿಣಿಯರು ಪೇರಲ ಹಣ್ಣನ್ನು ತಿನ್ನಬಹುದಾ..? ಗರ್ಭಪಾತದ ಅಪಾಯ ಇರುವುದಿಲ್ಲವೇ..? ಇಲ್ಲಿದೆ ಉತ್ತರ


ವಿಟಮಿನ್ ಡಿ ಸಮೃದ್ಧ ಮಾಂಸಾಹಾರಗಳು: 
ನೀವು ಮಾಂಸಾಹಾರಿಗಳಾಗಿದ್ದರೆ ಮೊಟ್ಟೆಯ ಹಳದಿ ಲೋಳೆ, ಸಾಲ್ಮನ್ ಮತ್ತು ಟ್ಯೂನ ಮೀನುಗಳನ್ನು ಸೇವಿಸುವುದರಿಂದ ವಿಟಮಿನ್ ಡಿ ಸಮಸ್ಯೆಗೆ ಪರಿಹಾರ ಪಡೆಯಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.