Diabetes Wound Care : ಮಧುಮೇಹ ರೋಗಿಗಳು ಸಾಮಾನ್ಯವಾಗಿ ಪಾದದ ಹುಣ್ಣುಗಳು, ಸೋಂಕು ಅಥವಾ ಇತರ ಸಮಸ್ಯೆಗಳ ಅಪಾಯವನ್ನು ಎದುರಿಸುತ್ತಾರೆ.ಮಧುಮೇಹದಿಂದ ಕಾಲುಗಳಲ್ಲಿ ಹುಣ್ಣುಗಳು ಅಥವಾ ಗಾಯಗಳಾದಾಗ ರೋಗಿಗಳು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.ಕೆಲವು ಸಂದರ್ಭಗಳಲ್ಲಿ,ಗಾಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಧುಮೇಹದಿಂದ ಉಂಟಾಗುವ ಗಾಯಗಳು  ಉಲ್ಬಣ ಗೊಳ್ಳದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.ನೀವು ಮಧುಮೇಹ ಹೊಂದಿದ್ದರೆ ಅಥವಾ ಕೆಲವು ಕಾರಣಗಳಿಂದ ಗಾಯಗೊಂಡಿದ್ದರೆ ಗಾಯವನ್ನು ನಿರ್ಲಕ್ಷಿಸುವ ಬದಲು, ಅದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ. 


COMMERCIAL BREAK
SCROLL TO CONTINUE READING

ಮಧುಮೇಹದಿಂದ ಉಂಟಾಗುವ ಗಾಯಗಳು ತುಂಬಾ ಆಳವಾಗಿರುತ್ತವೆ.  ದೇಹದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾದಾಗ,ಸಣ್ಣ ಗಾಯ ಅಥವಾ ಸ್ಕ್ರಾಚ್ ಸಂಭವಿಸಿದಾಗಲೂ ಅದು ಗಂಭೀರವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ,ಅದರ ಆರೈಕೆ ಬಹಳ ಮುಖ್ಯ.ಮಧುಮೇಹದಲ್ಲಿ ಗಾಯಗಳನ್ನು ಹೇಗೆ ಕಾಳಜಿ ವಹಿಸಬೇಕು  ಎನ್ನುವುದನ್ನು ಇಲ್ಲಿ ನೋಡೋಣ. 


ಇದನ್ನೂ ಓದಿ :ಮಧುಮೇಹಿಗಳು ಬೆಳಿಗ್ಗೆ ಎದ್ದ ಕೂಡಲೇ ಇದನ್ನು ತಿನ್ನಿ! ದಿನವಿಡೀ ನಾರ್ಮಲ್ ಆಗಿರುವುದು ಬ್ಲಡ್ ಶುಗರ್


ಮೊದಲು ಗಾಯವನ್ನು ಚೆನ್ನಾಗಿ ಸ್ವಚ್ಛಗೊಳಿಸಿ : 
ಮಧುಮೇಹ ರೋಗಿಗಳಿಗೆ ಯಾವುದೇ ರೀತಿಯ ಗಾಯವಾದರೂ ಮೊದಲು ಗಾಯವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.ಗಾಯವನ್ನು ಸ್ವಚ್ಛಗೊಳಿಸುವ ಮೊದಲು ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆದುಕೊಲ್ಲುವುದನ್ನ್ನು ಮರೆಯಬೇಡಿ. ಇದರಿಂದ ಯಾವುದೇ ಸೋಂಕು ಹರಡುವುದಿಲ್ಲ.ನಂತರ, ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಗಾಯವನ್ನು ಸ್ವಚ್ಛಗೊಳಿಸಿ.


ಗಾಯದ ಮೇಲೆ ಒತ್ತಡ ಹೇರಬೇಡಿ : 
ಕೆಲವರು ಗಾಯಗೊಂಡ ನಂತರ ಗಾಯವನ್ನು ಹೆಚ್ಚು ಒತ್ತಲು ಶುರು ಮಾಡುತ್ತಾರೆ. ಹೀಗಾದಾಗ ಅದು ಇನ್ನಷ್ಟು ಉಲ್ಬಣಗೊಳ್ಳುವ ಅಪಾಯ ಇರುತ್ತದೆ. ಗಾಯವು ಸಾಕಷ್ಟು ಆಳವಾಗಿದ್ದರೆ, ಅದನ್ನು ಹತ್ತಿ ಬಟ್ಟೆಯಿಂದ ಲಘುವಾಗಿ ಬ್ಯಾಂಡೇಜ್ ಮಾಡಿ.ಇದರಿಂದ ರಕ್ತಸ್ರಾವ ನಿಲ್ಲುತ್ತದೆ. ಹೀಗೆ ಬ್ಯಾಂಡೇಜ್ ಮಾಡುವಾಗ ತುಂಬಾ ಗಟ್ಟಿಯಾಗಿಯೂ ಕಟ್ಟಲು ಹೋಗಬೇಡಿ. ಇದು ರಕ್ತ ಪರಿಚಲನೆಯನ್ನು ನಿಲ್ಲಿಸಬಹುದು.


ಇದನ್ನೂ ಓದಿ :ರಾತ್ರಿ ಮಲಗುವ ಮುನ್ನ ಇದನ್ನು ಸೇವಿಸಿ! ಬೆಳಗ್ಗೆ ಮೂತ್ರದ ಮೂಲಕವೇ ಹೊರಹೋಗುತ್ತದೆ ಯೂರಿಕ್ ಆಸಿಡ್ !


ಗಾಯದ ಮೇಲೆ  ಆಂಟಿಬಯೋಟಿಕ್ ಕ್ರೀಂ  ಹಚ್ಚಿ : 
ಗಾಯವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ,ಅದರ ಮೇಲೆ ಆಂಟಿಬಯೋಟಿಕ್ ಕ್ರೀಮ್ ಅನ್ನು ಹಚ್ಚಿ. ಆಂಟಿಬಯೋಟಿಕ್ ಕ್ರೀಮ್ ಹಚ್ಚುವ ಮುನ್ನ ವೈದ್ಯರನ್ನು ಸಂಪರ್ಕಿಸಿ.ಇದರಿಂದ ಕ್ರೀಂ ಗಾಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಕ್ರೀಂನಿಂದ ಗಾಯ ಬೇಗನೆ  ವಾಸಿಯಾಗಬಹುದು. 


ಕಾಲಕಾಲಕ್ಕೆ ಸಕ್ಕರೆ ಮಟ್ಟವನ್ನು ಪರೀಕ್ಷಿಸುತ್ತಿರಿ : 
ನಿಮ್ಮ ಗಾಯವು ಬೇಗನೆ ಗುಣವಾಗದಿದ್ದರೆ,ಸಕ್ಕರೆ ಮಟ್ಟ ಹೆಚ್ಚಾಗಿರುವ   ಸಾಧ್ಯತೆಯಿದೆ. ಹಾಗಾಗಿ ಆಗಾಗ ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸುತ್ರಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರುಪೇರು ಕಂಡುಬಂದರೆ,ತಕ್ಷಣವೇ ಚಿಕಿತ್ಸೆ ನೀಡಬೇಕು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.