ಪ್ರತಿನಿತ್ಯ 100 ಗ್ರಾಂ ಕಡಲೆಬೀಜ ತಿನ್ನಿ; ಚಮತ್ಕಾರ ನೋಡಿ!
ಬಾದಾಮಿಯಲ್ಲಿ ಇರುವ ಸಾಕಷ್ಟು ಆರೋಗ್ಯವರ್ಧಕ ಅಂಶಗಳು ಕಡಲೆಕಾಯಿಯಲ್ಲಿಯೂ ಇವೆ.
ನವದೆಹಲಿ: ಬಡವರ ಬಾದಾಮಿ ಎಂದೇ ಕರೆಯಲ್ಪಡುವ ಕಡಲೇಕಾಯಿಯನ್ನು ಟೈಮ್ ಪಾಸ್ ಕಡ್ಲೇಕಾಯಿ ಅಂತಾನೂ ಕರೆಯುತ್ತಾರೆ. ಆದರೆ, ಇದನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನ ದೊರೆಯಲಿದೆ. ಬಾದಾಮಿಯಲ್ಲಿ ಇರುವ ಸಾಕಷ್ಟು ಆರೋಗ್ಯವರ್ಧಕ ಅಂಶಗಳು ಕಡಲೆಕಾಯಿಯಲ್ಲಿಯೂ ಇವೆ.
ಅಗ್ಗದ ಬಾದಾಮಿಯಾಗಿರುವ ಕಡಲೆಕಾಯಿಯನ್ನು ಜನರು ತಮ್ಮ ಅಭಿರುಚಿಗೆ ತಕ್ಕಂತೆ ವಿವಿಧ ರೀತಿಯಲ್ಲಿ ತಯಾರಿಸಿಕೊಂಡು ತಿನ್ನುತ್ತಾರೆ. ಹುರಿದ ಕಡಲೇಕಾಯಿ, ಬೇಯಿಸಿದ ಕಡಲೇಕಾಯಿ, ಉಪ್ಪುಖಾರ ಹಾಕಿ ಹುರಿದ ಕಡಲೆಬೀಜ, ಕಡಲೇಬೀಜದ ಪಲ್ಯ ಹೀಗೆ...
ಕಡಲೇಬೀಜದಲ್ಲಿ ಅತಿಹೆಚ್ಚು ಪ್ರೋಟಿನ್ ಅಂಶಗಳಿದ್ದು, ದೈಹಿಕ ಬೆಳವಣಿಗೆಗೆ ಸಹಕಾರಿ. ಒಂದು ವೇಳೆ ನೀವು ಹಾಲು ಕುಡಿಯದಿದ್ದರೆ, ಮೊಟ್ಟೆ ಸೇವಿಸದಿದ್ದರೂ ಚಿಂತೆಯಿಲ್ಲ. ಆದರೆ ಕಡಲೆಕಾಯಿಯನ್ನು ಅವಶ್ಯವಾಗಿ ಸೇವಿಸಿ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಸತು ಹೆಚ್ಚನ ಪ್ರಮಾಣದಲ್ಲಿ ಕಂಡುಬರುತ್ತದೆ. ಅಲ್ಲದೆ, ವಿಟಮಿನ್ ಇ ಮತ್ತು ವಿಟಮಿನ್ B6 ಕಡಲೆಕಾಯಿಯಲ್ಲಿ ಸಮೃದ್ಧವಾಗಿದೆ. ಹಾಗಾಗಿ ಕಡಲೆಕಾಯಿಯಲ್ಲಿರುವ ಪ್ರಯೋಜನಗಳ ಬಗ್ಗೆ ಮತ್ತಷ್ಟು ತಿಳಿಯಬೇಕೆಂದರೆ ಈ ಕೆಳಗಿನ ಅಂಶಗಳನ್ನು ಗಮನಿಸಿ...
1. ಮಲಬದ್ಧತೆ ನಿವಾರಣೆ
ನೀವೇನಾದರೂ ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಪ್ರತಿದಿನ 100ಗ್ರಾಂ ಕಡಲೇಬೀಜವನ್ನು ಒಂದು ವಾರ ಸೇವಿಸಿ. ಇದು ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನೂ ದೂರಮಾಡುತ್ತದೆ. ಹೀಗೆ ಕಡಲೆಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
2. ದೇಹದ ಶಕ್ತಿ ಹೆಚ್ಚುತ್ತದೆ
ಬಾದಾಮಿ ಮತ್ತು ಮೊಟ್ಟೆಗಳ ಸೇವನೆ ಶರೀರಕ್ಕೆ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಅದೇ ಅಂಶಗಳನ್ನು ಹೊಂದಿರುವ ಕಡಲೆಬೀಜವನ್ನು ತಿನ್ನುವುದರಿಂದಲೂ ದೇಹದ ಶಕ್ತಿ ಹೆಚ್ಚಾಗುತ್ತದೆ. ಇದು ಜೀರ್ಣಶಕ್ತಿಯನ್ನೂ ಹೆಚ್ಚಿಸುವುದರಿಂದ ಚಳಿಗಾಲದಲ್ಲಿ ಇದರ ಸೇವನೆ ಒಳ್ಳೆಯದು.
3. ಗರ್ಭಿಣಿಯರಿಗೆ ಪ್ರಯೋಜನಕಾರಿ
ಗರ್ಭಿಣಿಯರು ಕಡಲೇಬೀಜ ಸೇವಿಸುವುದರಿಂದ ಗರ್ಭದಲ್ಲಿರುವ ಮಗುವಿನ ಆರೋಗ್ಯಯುತ ಬೆಳವಣಿಗೆಗೆ ಸಹಕಾರಿ. ಅಲ್ಲದೆ, ಇದರಿಂದ ಗರ್ಭಿಣಿಯರಿಗೆ ಶಕ್ತಿಯೂ ದೊರೆಯುತ್ತದೆ.
4. ಚರ್ಮಕ್ಕೆ ಉತ್ತಮ ಮನೆಮದ್ದು
ಕಡಲೇಕಾಯಿಯಲ್ಲಿ ಒಮೆಗಾ 6 ಸಮೃದ್ಧವಾಗಿರುವುದರಿಂದ ನಿಮ್ಮ ಚರ್ಮವನ್ನು ಮೃದುವಾಗಿಯೂ ಮತ್ತು ಶುಷ್ಕವಾಗಿಯೂ ಇಡುತ್ತದೆ. ಕಡಲೆಕಾಯಿಯನ್ನು ರುಬ್ಬಿ ಪೇಸ್ಟ್ ಮಾಡಿ ಚಳಿಗಾಲದಲ್ಲಿ ಫೇಸ್'ಪ್ಯಾಕ್ ರೀತಿ ಬಳಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಮತ್ತು ಒಅರತುತನ ನಿವಾರಣೆಯಾಗುತ್ತದೆ.
5. ಹೃದ್ರೋಗದಿಂದ ದೂರವಿರಬಹುದು
ನಿಮ್ಮ ಕುಟುಂಬದಲ್ಲಿ ಹೃದಯ ರೋಗಿಗಳಿದ್ದರೆ, ಕಡಲೆಕಾಯಿ ಎಣ್ಣೆಯು ಅವರಿಗೆ ಬಹಳ ಪ್ರಯೋಜನಕಾರಿ. ಕಡಲೆಕಾಯಿ ತಿನ್ನುವ ವ್ಯಕ್ತಿಯಲ್ಲಿ ಹೃದಯ ರೋಗದ ಅಪಾಯದ ಪ್ರಮಾಣ ಕಡಿಮೆ ಆಗುತ್ತದೆ. ಅಲ್ಲದೆ, ಆಹಾರದಲ್ಲಿ ಕಡಲೆಕಾಯಿಗಳ ನಿಯಮಿತ ಬಳಕೆಯಿಂದ ರಕ್ತದ ಕೊರತೆಯೂ ನಿವಾರಣೆಯಾಗುತ್ತದೆ.
6. ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ
ವಯಸ್ಸಾದ ರೋಗಲಕ್ಷಣಗಳನ್ನು ತಡೆಗಟ್ಟುವಲ್ಲಿ ಕೂಡ ಕಡಲೆಕಾಯಿ ಪರಿಣಾಮಕಾರಿಯಾಗಿದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ಗಳು ಮುಖದ ಮೇಲಿನ ರೇಖೆಗಳು ಮತ್ತು ಸುಕ್ಕುಗಳಂತಹ ವಯಸ್ಸಾದ ಚಿಹ್ನೆಗಳ ರಚನೆಯನ್ನು ತಡೆಯುತ್ತವೆ. ಕಡಲೆಕಾಯಿಯನ್ನು ತಿನ್ನುವವರು ತಮ್ಮ ವಯಸ್ಸಿಗಿಂತ ಕಡಿಮೆ ವಯಸ್ಸಿನವರಂತೆ ಕಾಣುತ್ತಾರೆ.
7. ಮೂಳೆ ಗಟ್ಟಿಗೊಳಿಸುತ್ತದೆ
ಪ್ರತಿನಿತ್ಯ ಕಡಲೆಕಾಯಿ ಸೇವಿಸುವುದರಿಂದ ನಿಮ್ಮ ಎಲುಬುಗಳು ಹೆಚ್ಚು ಶಕ್ತಿಶಾಲಿಯಾಗುತ್ತವೆ. ಇದರಲ್ಲಿ ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವುದರಿಂದ ಮೂಳೆಗಳು ಬಲಿಷ್ಟಗೊಳ್ಳಲು ಸಹಕಾರಿ.