Sesame Oil Good For Diabetes: ಹೆಚ್ಚು ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿಂದ ಅನೇಕ ಜನರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದರೆ ಕೆಲವರಿಗೆ ಇದರಿಂದ ತೂಕ ಹೆಚ್ಚಾದರೆ ಇನ್ನು ಕೆಲವರಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ಆದ್ದರಿಂದ ಮಧುಮೇಹದಿಂದ ಬಳಲುತ್ತಿರುವವರು ಹಲವಾರು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಇದಲ್ಲದೆ, ಜೀವನಶೈಲಿಯನ್ನು ಬದಲಾಯಿಸುವ ಅವಶ್ಯಕತೆಯಿದೆ, ಇಲ್ಲದಿದ್ದರೆ ಅನಾರೋಗ್ಯದಿಂದ ಬಳಲಬೇಕಾಗುತ್ತದೆ. ಆದರೆ ಡಯಾಬಿಟಿಸ್ ಇರುವ ಅನೇಕರು ಮಾರುಕಟ್ಟೆಯಲ್ಲಿ ಸಿಗುವ ಕೆಟ್ಟ ಕೊಲೆಸ್ಟ್ರಾಲ್ ಇರುವ ಎಣ್ಣೆಯನ್ನು ಹೆಚ್ಚು ಸೇವಿಸುತ್ತಿದ್ದಾರೆ. ಇದರಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ಮಾತ್ರವಲ್ಲದೆ ತೂಕ ಸಹ ಏಕಾಏಕಿ ಹೆಚ್ಚಾಗುತ್ತಿದೆ. ಹಾಗಾಗಿ ಈ ಕಾಯಿಲೆಯಿಂದ ಬಳಲುತ್ತಿರುವವರು ಎಳ್ಳೆಣ್ಣೆ ಸೇವನೆಯಿಂದ ಉತ್ತಮ ಲಾಭ ಪಡೆಯುತ್ತಾರೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆಹಾರ ತಯಾರಿಕೆಯಲ್ಲಿ ಎಳ್ಳಿನ ಎಣ್ಣೆಯನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. 


COMMERCIAL BREAK
SCROLL TO CONTINUE READING

ಎಳ್ಳಿನ ಎಣ್ಣೆಯನ್ನು ಬಳಸುವುದರಿಂದ ಆಗುವ ಪ್ರಯೋಜನಗಳು:


ಹೃದಯಕ್ಕೆ ಆರೋಗ್ಯಕರ: ಎಳ್ಳಿನ ಎಣ್ಣೆಯು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಈ ಎಣ್ಣೆಯಿಂದ ಮಾಡಿದ ಆಹಾರ ಸೇವನೆಯಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಎಳ್ಳಿನ ಎಣ್ಣೆಯಲ್ಲಿ ಒಮೆಗಾ-3 ಮತ್ತು ಒಮೆಗಾ-9 ಪೋಷಕಾಂಶಗಳಿವೆ. ಹಾಗಾಗಿ ಆರೋಗ್ಯ ಸಮಸ್ಯೆಗಳಿಂದ ಹೃದಯವನ್ನು ರಕ್ಷಿಸುವಲ್ಲಿ ಅವು ಪ್ರಮುಖ ಪಾತ್ರವಹಿಸುತ್ತವೆ.


ಇದನ್ನೂ ಓದಿ : BP-Sugar-Cholesterol-Cancer-Obesity ಯಂತಹ ಮಾರಕ ಕಾಯಿಲೆಗಳಿಗೆ ವರದಾನ ಈ ಬೇಸಿಗೆ ಹಣ್ಣು!


ಬೆನ್ನು ನೋವು ನಿವಾರಣೆ : ಊತ, ಬೆನ್ನುನೋವು ಮತ್ತು ಇತರ ನೋವಿನಿಂದ ಬಳಲುತ್ತಿರುವವರು ಎಳ್ಳೆಣ್ಣೆಯಿಂದ ಪೀಡಿತ ಪ್ರದೇಶಗಳಿಗೆ ಮಸಾಜ್ ಮಾಡುವುದರಿಂದ ಸುಲಭವಾಗಿ ಪರಿಹಾರವನ್ನು ಪಡೆಯಬಹುದು. ಹಾಗಾಗಿ ಆಗಾಗ್ಗೆ ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರು ಈ ಸಲಹೆಯನ್ನು ಬಳಸುವುದರಿಂದ ನೈಸರ್ಗಿಕ ಪರಿಹಾರವನ್ನು ಪಡೆಯುತ್ತಾರೆ. ಊತದ ಸಮಸ್ಯೆಯಿಂದ ಬಳಲುತ್ತಿರುವವರು ಈ ಎಣ್ಣೆಯನ್ನು ಊದಿಕೊಂಡ ಜಾಗಕ್ಕೆ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.


ಮಧುಮೇಹ ನಿಯಂತ್ರಣ : ಮಧುಮೇಹವು ತುಂಬಾ ಅಪಾಯಕಾರಿ ಕಾಯಿಲೆಯಾಗಿದ್ದು, ಒಮ್ಮೆ ಬಂದರೆ ಜೀವನದುದ್ದಕ್ಕೂ ಬೆಂಬಿಡದೆ ಕಾಡುತ್ತದೆ. ಮಧುಮೇಹದಿಂದಲೂ ಅನೇಕ ಜನರು ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಎಳ್ಳೆಣ್ಣೆಯಿಂದ ಮಾಡಿದ ಆಹಾರವನ್ನು ಮಾತ್ರ ಸೇವಿಸಬೇಕು.


ಇದನ್ನೂ ಓದಿ : ಶರೀರದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರಹಾಕುತ್ತೆ ಈ ಡ್ರಿಂಕ್!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.