ನವ ದೆಹಲಿ: ಜಾಗತಿಕ ತಾಪಮಾನ ಮತ್ತು ಶುಷ್ಕ ಹವಾಮಾನ ಪರಿಸ್ಥಿತಿ ಹೆಚ್ಚಳದಿಂದ, ಕೋಕೋ ಗಿಡದ ಉಳಿವು ಕಷ್ಟಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿ ಚಾಕೊಲೇಟ್ಗಳು ದೊರೆಯುವುದಿಲ್ಲ ಎಂದು ವರದಿಗಳು ತಿಳಿಸಿವೆ. 


COMMERCIAL BREAK
SCROLL TO CONTINUE READING

2050ರ ಹೊತ್ತಿಗೆ ಅಥವಾ ಅದಕ್ಕೂ ಮುಂಚೆಯೇ ಚಾಕೊಲೇಟ್ಗಳು ಕಣ್ಮರೆಯಾಗುವ ಸಾಧ್ಯತೆಯಿದೆ ಎಂದು ಹೇಳಿರುವ ವಿಜ್ಞಾನಿಗಳು ಪರಿಸರ ವಿಜ್ಞಾನದ ಸವಾಲುಗಳನ್ನು ಉಳಿದುಕೊಂಡಿರುವ ಬೆಳೆಗಳನ್ನು ವಿಕಸಿಸಲು ಜೀನ್-ಎಡಿಟಿಂಗ್ ತಂತ್ರಜ್ಞಾನ ಸಿಆರ್ಐಎಸ್ಪಿಆರ್ ಅನ್ನು ಬಳಸುವ ಸಾಧ್ಯತೆಗಳನ್ನು ವಿಜ್ಞಾನಿಗಳು ಅನ್ವೇಷಿಸುತ್ತಿದ್ದಾರೆ.


ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ವಿಜ್ಞಾನಿಗಳು ಆಹಾರ ಮತ್ತು ಕ್ಯಾಂಡಿ ಕಂಪೆನಿಯ ಮಾರ್ಸ್ ನೊಂದಿಗೆ ಸಿಆರ್ಐಎಸ್ಪಿಆರ್ ತಂತ್ರವನ್ನು ಅನ್ವೇಷಿಸುತ್ತಿದ್ದು, ಇದು ಸಣ್ಣ ಕೊಕೊವ್ ಮೊಳಕೆಗಳನ್ನು ಶುಷ್ಕಕಾರಿಯ, ಬೆಚ್ಚಗಿನ ವಾತಾವರಣದಲ್ಲಿ ಬದುಕುಳಿಯಲು ಸಹಾಯ ಮಾಡಲಿದೆ ಎಂದು Businessinsider.com ವರದಿ ಮಾಡಿದೆ.


ಬೆಚ್ಚಗಿನ ಜಾಗತಿಕ ಉಷ್ಣತೆ ಮತ್ತು ಶುಷ್ಕ ಹವಾಮಾನದ ಪರಿಸ್ಥಿತಿಯಾ ಹೆಚ್ಚಳದಿಂದಾಗಿ 2050ಕ್ಕೂ ಮುಂಚೆಯೇ ಚಾಕೊಲೇಟ್ ಕಣ್ಮರೆಯಾಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ.


ಕೊಕೊ ಬೀನ್ಸ್ ಅನ್ನು ಉತ್ಪಾದಿಸುವ ಕೋಕೋ ಮರವು ಸಮಭಾಜಕಕ್ಕೆ 20 ಡಿಗ್ರಿ ಉತ್ತರ ಮತ್ತು ದಕ್ಷಿಣಕ್ಕೆ ಇಳಿಜಾರಿನ ಕಾಡು ಪ್ರದೇಶದೊಳಗೆ ಮಾತ್ರ ಬೆಳೆಯಬಹುದಾಗಿದ್ದು, ಅಲ್ಲಿ ತಾಪಮಾನ, ಮಳೆ, ಮತ್ತು ಆರ್ದ್ರತೆಯು ವರ್ಷವಿಡೀ ಸಾಪೇಕ್ಷವಾಗಿ ಸ್ಥಿರವಾಗಿರುತ್ತವೆ.


ಆದಾಗ್ಯೂ, ದುರ್ಬಲವಾದ ಗಿಡಗಳು ರೋಗಗಳಿಂದ ಮತ್ತು ಬದಲಾದ ವಾತಾವರಣವು ಮಣ್ಣಿನಲ್ಲಿನ ತೇವಾಂಶವನ್ನು ಹೀರಿಕೊಳ್ಳುತ್ತವೆ. ಇದರ ಪರಿಣಾಮ 2050 ರ ಹೊತ್ತಿಗೆ ಪ್ರಪಂಚದಾದ್ಯಂತ ಅನೇಕ ಪ್ರದೇಶಗಳಲ್ಲಿ ಕೋಕೋ ಬೆಳೆ ಉತ್ಪಾದಿಸಲು ಅಸಾಧ್ಯವೆಂದು ಸನ್ ವರದಿ ಮಾಡಿದೆ.


ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಆಡಳಿತದ ಪ್ರಕಾರ, 2050 ರ ಹೊತ್ತಿಗೆ ಹೆಚ್ಚಾದ ಉಷ್ಣಾಂಶವು ವಿಶ್ವದ ಚಾಕೊಲೇಟ್-ಬೆಳೆಯುತ್ತಿರುವ ಪ್ರದೇಶಗಳನ್ನು ಪರ್ವತ ಪ್ರದೇಶದ 1,000 ಅಡಿ ಎತ್ತರಕ್ಕೆ ತಳ್ಳುತ್ತದೆ - ಇವುಗಳಲ್ಲಿ ಹೆಚ್ಚಿನವುಗಳು ಪ್ರಸ್ತುತ ವನ್ಯಜೀವಿಗಳಿಗೆ ಸಂರಕ್ಷಿಸಲಾದ ಪ್ರದೇಶಗಳಾಗಿವೆ ಎಂದು ಹೇಳಿದೆ.


ತಜ್ಞರ ಪ್ರಕಾರ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಒದಗಿಸಲಾಗದ ಬಡ ಕುಟುಂಬಗಳು ಹೆಚ್ಚಿನ ಕೊಕೊ ಉತ್ಪಾದಿಸುತ್ತಿದ್ದಾರೆ ಎಂದಿದ್ದಾರೆ. 


ಲಂಡನ್ ಮೂಲದ ಬಂಡವಾಳ ಮಾರುಕಟ್ಟೆಯ ಸಲಹಾ ಸೇವೆಗಳ ಸಂಸ್ಥೆಯಾದ ಹಾರ್ಡ್ಮನ್ ಆಗ್ರಿ ಬ್ಯುಸಿನೆಸ್ ನ ಡೌಗ್ ಹಾಕಿನ್ಸ್ "ಜಾಗತಿಕ ಮಟ್ಟದಲ್ಲಿ ಶೇ.90 ರಷ್ಟು ಕೋಕೋ ಬೆಳೆಯನ್ನು ಬೆಳೆಯುತ್ತಿದ್ದಾರೆ. ಮುಂದಿನ ಕೆಲವು ವರ್ಷಗಳಲ್ಲಿ ವರ್ಷಕ್ಕೆ 100,000 ಟನ್ಗಳಷ್ಟು ಚಾಕೊಲೇಟ್ ಕೊರತೆಯನ್ನು ನಾವು ಎದುರಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.