Health Tips: ಸಿಹಿ, ಕಹಿ, ಹುಳಿ ಹೊಂದಿರುವ ನೆಲ್ಲಿಕಾಯಿ ಎನ್ನುತ್ತಿದ್ದಂತೆಯೇ ಬಾಯಲ್ಲಿ ನೀರು ಬರುವುದು ಸಹಜ .. ಹಳ್ಳಿ ಕಡೆಗಳಲ್ಲಿ ತೋಟ, ಕಾಡುಗಳಲ್ಲಿ ನೆಲ್ಲಿಕಾಯಿ ಗಿಡ ಕಂಡರೆ  ಆ ಮರಕ್ಕೆ ಕಲ್ಲು ಹೊಡೆದ ಒಂದು ನೆಲ್ಲಿಕಾಯಿಯನ್ನಾದರೂ ಕೆಳಗೆ ಬಿಳಿಸಿ ತಿಂದರೆ ಅವಾಗಲೇ ಸಮಾಧಾನ.!  ಆದರೆ ಪ್ರಸ್ತುತದಲ್ಲಿ ನೆಲ್ಲಿಕಾಯಿಯನ್ನು ತೋಟಗಾರಿಕೆ ಪದ್ದತಿಯಲ್ಲಿ ಬೆಳೆಯುವುದರಿಂದ ಮರಕ್ಕೆ ಕಲ್ಲು ಹೊಡೆಯುವ ಮಜ ತಪ್ಪಿದೆ. ಇದೀಗ ಸುಲಭವಾಗಿ ಸಿಗುವ ನೆಲ್ಲಿಕಾಯಿ ಆರೋಗ್ಯಕ್ಕೆ  ಎಷ್ಟು  ಪ್ರಯೋಜನಕಾರಿ ತಿಳಿಯೋಣ..


COMMERCIAL BREAK
SCROLL TO CONTINUE READING

ನೆಲ್ಲಿಕಾಯಿ ಫೈಬರ್, ಕಬ್ಬಿಣಾಂಶ,ವಿಟಮಿನ್-ಸಿ  ಹೊಂದಿದೆ.  ಈ ಕಾಯಿಯನ್ನು ಕಾಲು ಅಡಿಯಿಂದ ಮುಡಿವರೆಗೂ ಇದರ ಉಪಯೋಗವಿದೆ. ಅಂದರೆ ಆರೋಗ್ಯ ದೃಷ್ಠಿಯಿಂದ ಮಾತ್ರವಲ್ಲದೇ ಸೌಂದರ್ಯವರ್ಧಕವಾಗಿ ಬಳಸಲಾಗುತ್ತಿದೆ. ಸಂಶೋಧನೆಯಲ್ಲಿ ಹೇಳಿರುವಂತೆ  ನೆಲ್ಲಿಕಾಯಿ ನಿಯಮಿತ ಸೇವನೆಯಿಂದ ಕೂದಲು ಉದುರುವಿಕೆ, ಆಸಿಡಿಟಿ, ಜೀರ್ಣಕಾರಿ ಸಮಸ್ಯೆಗಳು  ನಿಯಂತ್ರಣಕ್ಕೆ ಬರುತ್ತವೆ. 


ಇದನ್ನೂ ಓದಿ: Health Tipes: ಹರಿವೆ ಸೊಪ್ಪಿನ ಬಗ್ಗೆ ಅರಿವು ಇದೆಯೇ 


ನೆಲ್ಲಿಕಾಯಿ ಹುಳಿ ಕಹಿಯಾಗಿರುವುದರಿಂದ ನೇರವಾಗಿ ತಿನ್ನಲು ಕಷ್ಟ ವಾಗಬಹುದು. ಉಪ್ಪಿನಕಾಯಿ ಮಾಡಿ ತಿನ್ನಬಹುದು ಇದರಿಂದ ಊಟದ ರುಚಿ ಜೊತೆಗೆ ಆರೋಗ್ಯಕ್ಕೆ ಸಹಕಾರಿಯಾಗಿದೆ  ವರದಿ ಪ್ರಕಾರ   ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನುವುದರಿಂದ  ಆರೋಗ್ಯಕ್ಕೆ ಅನೇಕ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ: ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುವ ಆಹಾರ ಪದಾರ್ಥಗಳಿವು ..!


ಹಲವು ದಿನಗಳಿಂದ ಶೀತ ಕೆಮ್ಮಿನಿಂದ ಬಳಲುತ್ತಿದ್ದರೇ  ಅಂಥಹ ಸಂದರ್ಭದಲ್ಲಿ ಇದರ ಸೇವನೆ ಬಹಳ ಉಪಯೋಗಕಾರಿ.. ಮಕ್ಕಳಿಗೆ ಮಾತ್ರವಲ್ಲದೇ ದೊಡ್ಡವರು ಇದರ ರಸ ಸೇವಿಸಬಹುದು.  


ಸೌಂದರ್ಯ ವರ್ಧಕವಾಗಿ ಬಳಸುವುದಾದರೇ  ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ತುಂಬಾನೇ ಸಹಕಾರಿ ಮುಖದ ಮೇಲಿನ ಕಲೆಯನ್ನು ತೆಗೆದುಹಾಕಲು ಬಳಸಬಹುದಾಗಿದೆ. ಇದರ ರಸವನ್ನು ಮುಖಕ್ಕೆ ಹಚ್ಚುವುದರಿಂದ ಉತ್ತಮ ತ್ವಚೆಯ ಹೆಚ್ಚಾಗುತ್ತದೆ. 


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್