ಹಸಿರು ತರಕಾರಿಗಳ ಸೇವನೆಯಿಂದ ಕಡಿಮೆಯಾಗುತ್ತದೆಯೇ ಹೃದಯಾಘಾತದ ಅಪಾಯ ?
ನಾವು ಏನು ತಿನ್ನುತ್ತೇವೆ ಎನ್ನುವುದರ ಜೊತೆಗೆ ಎಷ್ಟು ವ್ಯಾಯಾಮ ಮಾಡುತ್ತೇವೆ ಎನ್ನುವುದು ಕೂಡಾ ಮುಖ್ಯವಾಗಿರುತ್ತದೆ. ಇದು ನಮ್ಮ ಜೀವನಶೈಲಿಯ ಮೇಲೂ ಪರಿಣಾಮ ಬೀರುತ್ತದೆ.
ನವದೆಹಲಿ : ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹಸಿರು ತರಕಾರಿಗಳಿಂದ ಮಾತ್ರ ಕಡಿಮೆ ಮಾಡಲು ಸಾಧ್ಯವಿಲ್ಲ. ಈ ಮಾಹಿತಿಯನ್ನು ಸಂಶೋಧನೆಯಲ್ಲಿ ಬಹಿರಂಗಪಡಿಸಲಾಗಿದೆ. ಆದರೆ ಹಸಿರು ತರಕಾರಿಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ (Green vegetable benefits). ಹಸಿರು ತರಕಾರಿಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ಅನೇಕ ರೀತಿಯ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.
ಆದರೆ, ಈ ಹಸಿರು ತರಕಾರಿಗಳು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂಬುದು ಈ ಸಂಶೋಧನೆಗಳಲ್ಲಿ ಸ್ಪಷ್ಟವಾಗಿದೆ (green vegetables for heart disease). ನಾವು ಏನು ತಿನ್ನುತ್ತೇವೆ ಎನ್ನುವುದರ ಜೊತೆಗೆ ಎಷ್ಟು ವ್ಯಾಯಾಮ ಮಾಡುತ್ತೇವೆ ಎನ್ನುವುದು ಕೂಡಾ ಮುಖ್ಯವಾಗಿರುತ್ತದೆ. ಇದು ನಮ್ಮ ಜೀವನಶೈಲಿಯ ಮೇಲೂ ಪರಿಣಾಮ ಬೀರುತ್ತದೆ. ನಾವು ಸಮತೋಲಿತ ಆಹಾರವನ್ನು ಸೇವಿಸಿದರೆ, ಕ್ಯಾನ್ಸರ್ ಸೇರಿದಂತೆ ಅನೇಕ ಪ್ರಮುಖ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆ ಹೇಳಿದೆ.
ಇದನ್ನೂ ಓದಿ : ರಾತ್ರಿ ಹೊತ್ತು ನೀರು ಕುಡಿಯುವ ಅಭ್ಯಾಸ ನಿಮಗೂ ಇದ್ದರೆ, ಈ ವಿಚಾರ ತಿಳಿದಿರಲಿ
ಈ ರೀತಿಯಲ್ಲಿ ನಡೆಯಿತು ಸಂಶೋಧನೆ :
ಮಾಧ್ಯಮ ವರದಿಗಳ ಪ್ರಕಾರ, ಆಕ್ಸ್‌ಫರ್ಡ್ ಮತ್ತು ಬ್ರಿಸ್ಟಲ್ ವಿಶ್ವವಿದ್ಯಾಲಯಗಳು ಮತ್ತು ಚೀನಾದ ಹಾಂಗ್ ಕಾಂಗ್ ವಿಶ್ವವಿದ್ಯಾಲಯಗಳ ಅಧ್ಯಯನವು ಯುಕೆ ಬಯೋಬ್ಯಾಂಕ್ ಅಧ್ಯಯನದಲ್ಲಿ ಭಾಗವಹಿಸಿದ ಸುಮಾರು 4 ಲಕ್ಷ ಜನರನ್ನು ತಮ್ಮ ಆಹಾರದ ಬಗೆಗಿನ ಪ್ರಶ್ನಾವಳಿಯನ್ನು ಭರ್ತಿ ಮಾಡುವಂತೆ ಕೇಳಿದೆ. ವ್ಯಕ್ತಿ ಪ್ರತಿದಿನ ಯಾವ ಪ್ರಮಾಣದಲ್ಲಿ ಬೇಯಿಸಿದ ಮತ್ತು ಹಸಿ ತರಕಾರಿಗಳನ್ನು ಸೇವಿಸುತ್ತಾನೆ? ಎನ್ನುವುದನ್ನು ಇಲ್ಲಿ ಕೇಳಲಾಗಿತ್ತು. ಇದರಲ್ಲಿ, ಅವರು ದಿನಕ್ಕೆ ಎರಡು ಚಮಚ ಹಸಿ ತರಕಾರಿಗಳು (green vegetables)ಮತ್ತು 3 ಚಮಚ ಬೇಯಿಸಿದ ತರಕಾರಿಗಳನ್ನು ಸೇವಿಸುವುದಾಗಿ ಅನೇಕರು ತಿಳಿಸಿದ್ದರು. ಅಂದರೆ, ಅವರು ದಿನಕ್ಕೆ ಒಟ್ಟು 5 ಚಮಚ ತರಕಾರಿಗಳನ್ನು ಸೇವಿಸುವಂತಾಯಿತು. ಅಂದರೆ ಇವರು ಹೃದಯ ಸಂಬಂಧಿ ಕಾಯಿಲೆಗಳಿಂದ (heart disease)ಮೃತಪಡುವ ಅಪಾಯವು 15 ಪ್ರತಿಶತದಷ್ಟು ಕಡಿಮೆಯಾಗುತ್ತದೆ.
ವರದಿಯ ಪ್ರಕಾರ ಈ ಸಂಶೋಧನೆಯಲ್ಲಿ ಜನರ ಜೀವನಶೈಲಿಯೂ (Lifestyle) ಸೇರಿದೆ. ಉದಾಹರಣೆಗೆ ಅವರು ಧೂಮಪಾನ ಮಾಡುತ್ತಿದ್ದಾರೆಯೇ , ಅಥವಾ ಮದ್ಯ ಸೇವಿಸಿದ್ದಾರೆಯೇ ಎನ್ನುವುದನ್ನು ಕೂಡಾ ತಿಳಿದುಕೊಳ್ಳಲಾಗಿತ್ತು. ಕೇವಲ ಹಸಿರು ತರಕಾರಿಗಳನ್ನು ಮಾತ್ರ ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದಕ್ಕೆ ತಮ್ಮ ಅಧ್ಯಯನದಲ್ಲಿ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಸಂಶೋಧನೆ ಹೇಳಿದೆ.
ಇದನ್ನೂ ಓದಿ : Face Mask: ಮುಖ ಹೊಳೆಯುವಂತೆ ಮಾಡಲು ಈ ಫೇಸ್ ಮಾಸ್ಕ್ಗಳನ್ನು ಟ್ರೈ ಮಾಡಿ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.