ಚಹಾದೊಂದಿಗೆ ರಸ್ಕ್ ತಿನ್ನುವ ಹವ್ಯಾಸ ಖಂಡಿತಾ ಬೇಡ ! ರಸ್ಕ್ ತಿಂದರೆ ಎದುರಾಗುವುದು ಈ ಸಮಸ್ಯೆ
Side Effects of Rusk : ಮೈದಾ ಹಿಟ್ಟಿನಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ.ಮಾತ್ರವಲ್ಲ ಇದನ್ನು ತಯಾರಿಸಲು ರಿಫೈನ್ಡ್ ಎಣ್ಣೆಯನ್ನೇ ಬಳಸಲಾಗುತ್ತದೆ. ಮೈದಾ, ರಿಫೈನ್ಡ್ ಎಣ್ಣೆ, ಸಕ್ಕರೆ ಇದ್ಯಾವುದೂ ಕೂಡಾನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.
ಬೆಂಗಳೂರು : Side Effects of Rusk : ಹೆಚ್ಚಿನವರಿಗೆ ಬೆಳಿಗ್ಗೆ ಎದ್ದ ಕೂಡಲೇ ಚಹಾ ಕುಡಿಯುವ ಹವ್ಯಾಸ ಇರುತ್ತದೆ. ಹೀಗೆ ಚಹಾ ಹೀರುವಾಗ ಖಾಲಿ ಹೊಟ್ಟೆಯಲ್ಲಿ ಚಹಾ ಬೇಡ ಎನ್ನುವ ಉದ್ದೇಶದಿಂದ ಕೆಲವರು ರಸ್ಕ್ ತಿನ್ನುತ್ತಾರೆ. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ತಿನ್ನುವ ರಸ್ಕ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾಕೆಂದರೆ ರಸ್ಕ್ ಅನ್ನು ಮೈದಾ ಹಿಟ್ಟಿನಲ್ಲಿ ತಯಾರಿಸಲಾಗುತ್ತದೆ. ಈ ಹಿಟ್ಟಿನಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ.ಮಾತ್ರವಲ್ಲ ಇದನ್ನು ತಯಾರಿಸಲು ರಿಫೈನ್ಡ್ ಎಣ್ಣೆಯನ್ನೇ ಬಳಸಲಾಗುತ್ತದೆ. ಮೈದಾ, ರಿಫೈನ್ಡ್ ಎಣ್ಣೆ, ಸಕ್ಕರೆ ಇದ್ಯಾವುದೂ ಕೂಡಾನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.
ರಸ್ಕ್‌ನಲ್ಲಿ ಏನೆಲ್ಲಾ ಅಡಗಿರುತ್ತದೆ ?:
ಮೈದಾ ಹಿಟ್ಟನ್ನು ರಸ್ಕ್‌ನಲ್ಲಿ ಬಳಸಲಾಗುತ್ತದೆ. ಇದರೊಂದಿಗೆ ರಿಫೈನ್ಡ್ ಎಣ್ಣೆ, ಆರ್ಟಿಫಿಶಿಯಲ್ ಫ್ಲೇವರ್, ಪ್ರಿಸರ್ವೆಟಿವ್ಸ್ ಗಳನನ್ನು ಬಳಸಿ ರಸ್ಕ್ ತಯಾರಿಸಲಾಗುತ್ತದೆ. ಈ ಎಲ್ಲಾ ವಸ್ತುಗಳು ಆರೋಗ್ಯವನ್ನು ಕೆಡಿಸುತ್ತವೆ.ಹಾಗಾಗಿ ದಿನಕ್ಕೆ ಕೇವಲ ಎರಡು ರಸ್ಕ್ ತಿನ್ನುವುದರಿಂದ ಕೂಡಾ ಸ್ಥೂಲಕಾಯತೆಯ ಸಮಸ್ಯೆ ಕಾಡುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : ಮಧುಮೇಹಿಗಳು ಚಹಾಕ್ಕೆ ಸಕ್ಕರೆಯಲ್ಲ ಈ ವಸ್ತುವನ್ನು ಬೆರೆಸಿ ಕುಡಿಯಿರಿ!ಬ್ಲಡ್ ಶುಗರ್ ಏರುವ ಭಯವೂ ಇರುವುದಿಲ್ಲ
ಚಹಾದೊಂದಿಗೆ ರಸ್ಕ್ ತಿನ್ನುವ ಅನಾನುಕೂಲಗಳು:
ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ :
ಚಹಾದೊಂದಿಗೆ ರಸ್ಕ್ ತಿನ್ನುವುದರಿಂದ ಹೃದಯದ ಆರೋಗ್ಯಕ್ಕೆ ಹಾನಿಕಾರಕ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ರಸ್ಕ್ ಹೆಚ್ಚಿಸುತ್ತದೆ.
ಕರುಳನ್ನು ಹಾನಿಗೊಳಿಸುತ್ತದೆ : ಚಹಾದೊಂದಿಗೆ ರಸ್ಕ್ ಅನ್ನು ಸೇವಿಸುವುದರಿಂದ ಅಲ್ಸರ್ ಸಮಸ್ಯೆ ಕಾಣಿಸಬಹುದು. ಇದು ಗ್ಯಾಸ್, ಕಳಪೆ ಜೀರ್ಣಕ್ರಿಯೆ ಸೇರಿದಂತೆ ಉದರದ ಸಮಸ್ಯೆಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ : Constipation Remedies: ಹಾಲಿಗೆ ಇದನ್ನು ಸೇರಿಸಿ ಕುಡಿದರೆ ಸಾಕು ಮಲಬದ್ಧತೆ ಗುಣವಾಗುವುದು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.