ಹೈ ಬಿಪಿ ಸಮಸ್ಯೆ ಇರುವವರಿಗೆ ತುಂಬಾ ಲಾಭದಾಯಕ ಈ ಚಾಕೋಲೇಟ್..! ದಿನ ಒಂದಿಂಚು ಸೇವಿಸಿದರೆ ಸಾಕು ಹೆಚ್ಚಾಗುವುದಿಲ್ಲ ರಕ್ತದೊತ್ತಡ..!
Chocolate: ಚಾಕೋಲೇಟ್ ತಿಂದ್ರೆ ತೂಕ ಹೆಚ್ಚಾಗುತ್ತೆ ಎನ್ನುವುದು ಕೆಲವರ ಭಾವನೆ. ಆದರೆ, ಚಾಕೋಲೇಟ್ ಸೇವನೆಯಿಂದ ಬಿಪಿ ನಿಯಂತ್ರಿಸಬಹುದು.
Chocolate For BP: ಚಾಕೋಲೇಟ್ ಎಂದ್ರೆ ಹಲವರ ಬಾಯಲ್ಲಿ ನೀರೂರುತ್ತೆ. ಆದರೆ, ಚಾಕೋಲೇಟ್ ಸೇವನೆಯಿಂದ ತೂಕ ಹೆಚ್ಚಾಗುತ್ತದೆ ಎಂದು ಕೆಲವರು ಹೆದರುತ್ತಾರೆ. ಆದರೆ, ಉತ್ಕರ್ಷಣ ನಿರೋಧಕಗಳು, ಅಗತ್ಯ ಜೀವಸತ್ವಗಳಿಂದ ಸಮೃದ್ಧವಾಗಿರುವ ಚಾಕೊಲೇಟ್ ಅನ್ನು ಉತ್ತಮ ಆರೋಗ್ಯಕ್ಕೆ ಸೂಪರ್‌ಫುಡ್ ಎಂದು ಪರಿಗಣಿಸಬಹುದು. ಅಷ್ಟೇ ಅಲ್ಲ, "ಅಧಿಕ ರಕ್ತದೊತ್ತಡ" ಸಮಸ್ಯೆ ಇರುವವರಿಗೆ ಚಾಕೋಲೇಟ್ ದಿವ್ಯೌಷಧವಿದ್ದಂತೆ. ಆದಾಗ್ಯೂ, ಇದಕ್ಕಾಗಿ ಯಾವ ರೀತಿಯ ಚಾಕೋಲೇಟ್ ತಿನ್ನಬೇಕು ಎಂದು ತಿಳಿದಿರಬೇಕು.
ಆರೋಗ್ಯ ಉತ್ತಮವಾಗಿರಬೇಕು ಎಂದರೆ ಸಕ್ಕರೆ ಮತ್ತು ಕೊಬ್ಬಿನೊಂದಿಗೆ ಸಂಯೋಜಿಸಲಾದ ಚಾಕೋಲೇಟ್ ಬದಲಿಗೆ 'ಕೋಕೋ ಚಾಕೋಲೇಟ್' ಸೇವಿಸಬೇಕು. ಕೋಕೋ ಬೀನ್ಸ್ ಹುರಿದು ತಯಾರಿಸಲಾದ ಕೋಕೋ ಚಾಕೊಲೇಟ್‌ನ ಕಚ್ಚಾ ಮತ್ತು ಸಂಸ್ಕರಿಸದ ರೂಪವಾಗಿದೆ. ಹಾಗಾಗಿಯೇ ಇದನ್ನು 'ಹೈ ಬಿಪಿ' ರೋಗಿಗಳಿಗೆ ವರದಾನ ಎನ್ನಲಾಗುತ್ತದೆ.
ಹೈ ಬಿಪಿ ಇದ್ದವರಿಗೆ ಕೋಕೋ ಹೇಗೆ ಪ್ರಯೋಜನಕಾರಿ?
ಫ್ಲಾವನಾಲ್‌ಗಳು:
ಕೋಕೋದಲ್ಲಿ ಕಂಡು ಬರುವ ಫ್ಲಾವನಾಲ್‌ಗಳು, ಥಿಯೋಬ್ರೋಮಿನ್ ರಕ್ತದೊತ್ತಡವನ್ನು ಕಡಿಮೆ ಮಾಡಿ, ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ- ಡಯಾಬಿಟಿಸ್ ಫ್ರೆಂಡ್ಲಿ ಡ್ರಿಂಕ್ಸ್: ಇವುಗಳನ್ನು ಕುಡಿದ್ರೆ ಐದೇ ನಿಮಿಷದಲ್ಲಿ ಕಂಟ್ರೋಲ್'ಗೆ ಬರುತ್ತೆ ಶುಗರ್
ಉತ್ಕರ್ಷಣ ನಿರೋಧಕಗಳು:
ಕೋಕೋದಲ್ಲಿ ಫ್ಲೇವನಾಯ್ಡ್‌ಗಳ ಉತ್ಕರ್ಷಣ ನಿರೋಧಕ ಶಕ್ತಿ, ದೇಹಕ್ಕೆ ಅಗತ್ಯವಾದ ಖನಿಜಗಳು, ವಿಟಮಿನ್‌ಗಳು ಹೆರಳವಾಗಿದ್ದು ಇದು ಹೃದಯದ ಆರೋಗ್ಯವನ್ನು ಸುಧಾರಿಸಿ ರಕ್ತದ ಹರಿವನ್ನು ಸರಾಗಗೊಳಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಫೈಬರ್:
ಕೋಕೋದಲ್ಲಿ ಅಧಿಕ ಪ್ರಮಾಣದ ಫೈಬರ್ ಕಂಡು ಬರುತ್ತದೆ. ದೇಹದ ಜೀರ್ಣಕಾರಿ ಕಿಣ್ವಗಳ ಉತ್ಪಾದನ್ನು ಉತ್ತೇಜಿಸುವ ಮೂಲಕ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೈ ಬಿಪಿಯನ್ನು ಕಂಟ್ರೋಲ್ ಮಾಡುತ್ತದೆ.
ಇದನ್ನೂ ಓದಿ- ನಿತ್ಯ ಈ ಮಸಾಲೆಗಳನ್ನು ಬಳಸಿದ್ರೆ ಡಯಾಬಿಟಿಸ್ ರೋಗಿಗಳಲ್ಲಿ ಶುಗರ್ ಎಂದಿಗೂ ಹೈ ಆಗುವುದಿಲ್ಲ!
ಮಾನಸಿಕ ಆರೋಗ್ಯ:
ಕೋಕೋದಲ್ಲಿ ಪ್ರೋಟೀನ್‌ಗಳು, ಬೀಟಾ-ಕ್ಯಾರೋಟಿನ್, ಲ್ಯೂಸಿನ್, ಲಿನೋಲಿಕ್ ಸೇರಿದಂತೆ ಹಲವು ಅಂಶಗಳು ಕಂಡು ಬರುತ್ತದೆ. ಇದು ಮಾನಸಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಪರಿಣಾಮಕಾರಿ ಆಗಿದೆ.
ನಿತ್ಯ ಒಂದಿಂಚು ಕಚ್ಚಾ ಚಾಕೋಲೇಟ್ ಅನ್ನು ಸೇವಿಸಿದರೆ ರಕ್ತದೊತ್ತಡ ಎಂದಿಗೂ ಸಹ ಹೆಚ್ಚಾಗುವುದಿಲ್ಲ ಎನ್ನಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.