ಪಾನ್ ಸೇವನೆ ಬಳಿಕ ಈ ಆಹಾರಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ
ಸಾಮಾನ್ಯವಾಗಿ ಭೋಜನದ ನಂತರ ತಿಂದ ಆಹಾರ ಸರಿಯಾಗಿ ಜೀರ್ಣವಾಗಲೆಂದು ತಾಂಬೂಲ ಅಂದರೆ ಪಾನ್ ಅನ್ನು ಸೇವಿಸಲಾಗುತ್ತದೆ. ಆದರೆ, ನಮ್ಮಲ್ಲಿ ಕೆಲವರು ಪಾನ್ ಸೇವಿಸಿದ ಬಳಿಕವೂ ಏನನ್ನಾದರೂ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ಆರೋಗ್ಯಕ್ಕೆ ಇದರಿಂದ ಆಗುವ ಅನಾನುಕೂಲಗಳೇನು ಎಂದು ನಿಮಗೆ ತಿಳಿದಿದೆಯೇ?
Health Tips: ಆಯುರ್ವೇದದಲ್ಲಿ ವೀಳ್ಯದೆಲೆಯನ್ನು ಆರೋಗ್ಯದ ಗಣಿ ಎಂದು ಪರಿಗಣಿಸಲಾಗಿದೆ. ಹಾಗಾಗಿಯೇ ಭೋಜನದ ಬಳಿಕ ವೀಳ್ಯದೆಲೆಯನ್ನು ನೀಡಲಾಗುತ್ತದೆ. ಇದನ್ನು ತಾಂಬೂಲ ಎಂತಲೂ ಹೇಳಲಾಗುತ್ತದೆ. ಸಾಮಾನ್ಯವಾಗಿ, ಊಟದ ನಂತರ ತಾಂಬೂಲ ಎಂದರೆ ಪಾನ್ ಸೇವನೆಯು ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಮಾತ್ರವಲ್ಲ, ಆರೋಗ್ಯಕ್ಕೆ ಇದರಿಂದ ಹಲವು ಪ್ರಯೋಜನಗಳು ಲಭ್ಯವಿದೆ. ಆದ್ರೆ, ನಮ್ಮಲ್ಲಿ ಹಲವರು ಪಾನ್ ಸೇವಿಸಿದ ಬಳಿಕ ಏನನ್ನಾದರೂ ಸೇವಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ, ಆರೋಗ್ಯದ ದೃಷ್ಟಿಯಿಂದ ಇದು ಎಷ್ಟು ಒಳ್ಳೆಯದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಪಾನ್ ತಿಂದ ಬಳಿಕ ಸೇವಿಸುವ ಕೆಲವು ಆಹಾರಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು.
ಪಾನ್ ಸೇವನೆಯ ಬಳಿಕ ಯಾವ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ?
* ಹಾಲು ಕುಡಿಯುವುದು:
ಪಾನ್ ಸೇವನೆ ಬಳಿಕ ಕೆಲವರು ಹಾಲು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ, ಪಾನ್ ಸೇವನೆ ಬಳಿಕ ಹಾಲು ಕುಡಿಯುವುದು ನಿಮ್ಮ ಜೀರ್ಣಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಇದನ್ನೂ ಓದಿ- Health Tips : ಚಳಿಗಾಲದ ಈ ರೋಗಗಳಿಂದ ದೂರವಿರಲು ತಪ್ಪದೆ ಸೇವಿಸಿ ಸಜ್ಜೆ ರೊಟ್ಟಿ!
* ಔಷಧಿ ಸೇವನೆ:
ಕೆಲವು ಊಟವಾದ ಬಳಿಕ ಮೊದಲು ಪಾನ್ ಸೇವಿಸಿ ನಂತರ ಔಷಧಿ ಸೇವಿಸುತ್ತಾರೆ. ಆದರೆ, ಇದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು.
* ಜ್ಯೂಸ್:
ವೀಳ್ಯದೆಲೆಯನ್ನು ಸೇವಿಸಿದ ಬಳಿಕ ಯಾವುದೇ ರೀತಿಯ ಜ್ಯೂಸ್ ಸೇವನೆಯು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ. ಹಾಗಾಗಿ, ಊಟ ಮಾಡಿ ಪಾನ್ ಸೇವಿಸಿದ ಬಳಿಕ ಯಾವುದೇ ರೀತಿ ತರಕಾರಿ ಅಥವಾ ಹಣ್ಣಿನ ಜ್ಯೂಸ್ ಕುಡಿಯುವುದನ್ನು ತಪ್ಪಿಸಿ.
ಇದನ್ನೂ ಓದಿ- Best Health Tips: ಕೂದಲು ಸೇರಿ ದೇಹದ ಅನೇಕ ಸಮಸ್ಯೆಗೆ ರಾಮಬಾಣ ಈ ಮುಳ್ಳುಹಣ್ಣಿನ ಎಣ್ಣೆ
* ನೀರು ಕುಡಿಯುವುದು:
ಪಾನ್ ತಿಂದ ತಕ್ಷಣ ಕೆಲವರು ನೀರು ಕುಡಿಯುತ್ತಾರೆ. ಆದರೆ, ನಿಮ್ಮ ಈ ಅಭ್ಯಾಸದಿಂದ ಅಲ್ಸರ್ ರೀತಿಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.