ಮೊಟ್ಟೆಗಳು ಪೂರ್ಣ ಸಸ್ಯಾಹಾರಿ!
ನವದೆಹಲಿ : ಮೊಟ್ಟೆ ಸಸ್ಯಾಹಾರಿಯೋ ಅಥವಾ ಮಾಂಸಹಾರಿಯೋ ಎಂಬ ದೀರ್ಘಕಾಲದ ಗೊಂದಲಕ್ಕೆ ಮೊಟ್ಟೆ ಪೂರ್ಣ ಸಸ್ಯಾಹಾರಿ ಎಂದು ಹೇಳುವ ಮೂಲಕ ವಿಜ್ಞಾನಿಗಳು ಪೂರ್ಣ ವಿರಾಮ ಹಾಕಿದ್ದಾರೆ.
ಅನೇಕರ ಪ್ರಕಾರ ಮೊಟ್ಟೆಗಳು ಸಜೀವವಾದ ಕೋಳಿಯಿಂದ ಬರುವುದರಿಂದ ಮೊಟ್ಟೆ ಸಸ್ಯಾಹಾರಿ ಎಂದು ಹೇಳಿದ್ದರು. ಆದಾಗ್ಯೂ, ಮೊಟ್ಟೆಯ ಹೊರ ಕವಚ, ಮೊಟ್ಟೆಯ ಹಳದಿ ಲೋಳೆ ಮತ್ತು ಮೊಟ್ಟೆಯ ಬಿಳಿ ಭಾಗ ಹೀಗೆ ಮೊಟ್ಟೆಯು ಮೂರು ಭಾಗಗಳನ್ನು ಹೊಂದಿದ್ದು, ಮೊಟ್ಟೆಯ ಬಿಳಿ ಭಾಗ (ಎಗ್ವೈಟ್ಸ್) ಕೇವಲ ಪ್ರೊಟೀನ್ ಅಂಶಗಳನ್ನು ಮತ್ತು ಮೊಟ್ಟೆಯ ಹಳದಿ ಲೋಳೆಯು ಪ್ರೋಟೀನ್, ಕೊಲೆಸ್ಟರಾಲ್ ಮತ್ತು ಕೊಬ್ಬಿಣ ಅಂಶಗಳನ್ನು ಒಳಗೊಂಡಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
ನಾವು ಪ್ರತಿದಿನವೂ ಸೇವಿಸುವ ಮೊಟ್ಟೆಗಳಲ್ಲಿ ಭ್ರೂಣಗಳು ಇರುವುದಿಲ್ಲ. ಅಂದರೆ ಒಂದು ಜೀವಂತ ಪಕ್ಷಿ/ಪ್ರಾಣಿಯನ್ನು ತಿನ್ನುವ ಹಂತದಷ್ಟು ಅಭಿವೃದ್ಧಿ ಹೊಂದಿರುವುದಿಲ್ಲ ಎಂದಿದ್ದಾರೆ.
ಒಂದು ಕೋಳಿಯು ತನ್ನ 6 ತಿಂಗಳ ವಯಸ್ಸಿನ ನಂತರ, ಒಂದು ದಿನಕ್ಕೆ ಅಥವಾ ಒಂದೂವರೆ ದಿನಕ್ಕೆ ಒಂದರಂತೆ ಮೊಟ್ಟೆಗಳನ್ನು ಇಡುತ್ತದೆ. ಆದರೆ, ಕೋಳಿ ತನ್ನ ಮೊಟ್ಟೆಗಳನ್ನು ಇಡುವ ಮೊದಲು ಸಂಭೋಗದ ಅನಿವಾರ್ಯತೆಯೇನಿಲ್ಲ. ಹಾಗಾಗಿ ಈ ಮೊಟ್ಟೆಗಳನ್ನು ಫಲವತ್ತಾಗಿಸದ ಮೊಟ್ಟೆಗಳು ಎಂದು ಕರೆಯಲಾಗುತ್ತದೆ. ಹಾಗಾಗಿ ನಾವು ಸ್ಥಳೀಯ ಮಾರುಕಟ್ಟೆಯಿಂದ ಖರೀದಿಸುವ ಮೊಟ್ಟೆಗಳು ಹೆಚ್ಚಾಗಿ ಫಲವತ್ತತೆ ಹೊಂದಿರದಾಗಿರುತ್ತವೆ. ಹಾಗಾಗಿ ಮೊಟ್ಟೆಯನ್ನು ಸಸ್ಯಾಹಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.