ನವದೆಹಲಿ : ಗೋಡಂಬಿ (Cashew nuts) ಅಥವಾ ಗೋಡಂಬಿಯಿಂದ ಮಾಡಿದ ತಿನಿಸು ಇಷ್ಟ ಆಗದವರು ಇರಲಿಕ್ಕಿಲ್ಲ. ಗೋಡಂಬಿ ಆರೋಗ್ಯಕ್ಕೆ ಬಹಳ ಹಿತಕಾರಿ(Health benefits of cashew). ಗೋಡಂಬಿಯಲ್ಲಿ ಆಂಟಿ ಆಕ್ಸಿಡೆಂಟ್, ಮಿನರಲ್, ವಿಟಮಿನ್, ಪ್ರೊಟಿನ್, ಆಯರನ್, ಫೈಬರ್, ಮೆಗ್ನೇಶಿಯಂ, ಪಾಸ್ಪರೆಸ್, ಸೆಲೆನಿಯಂ ಇತ್ಯಾದಿ ಪೋಷಕಾಂಶಗಳ ದಂಡಿಯಾಗಿರುತ್ತದೆ.  ಡಯಾಬಿಟಿಸ್ ಇದ್ದವರಿಗಂತೂ ಗೋಡಂಬಿ ರಾಮಬಾಣ.  ಗೊತ್ತಿರಲಿ ಗೋಡಂಬಿಯಲ್ಲಿರುವ ಪೋಷಕಾಂಶಗಳು ಕೇವಲ ದೇಹಕ್ಕೆ ಅಷ್ಟೇ ಅಲ್ಲ, ಚರ್ಮ ಮತ್ತು ತಲೆಗೂದಲ ರಕ್ಷಣೆಗೂ ಸಾಕಷ್ಟು ನೆರವಾಗುತ್ತದೆ. 


COMMERCIAL BREAK
SCROLL TO CONTINUE READING

ಗೋಡಂಬಿ ತಿಂದರೆ ಹೆಲ್ತ್ ಮೇಲಾಗುವ ಲಾಭ ಏನು..?
1. ಡಯಾಬಿಟಿಸ್ 
ಮಧುಮೇಹಿಗಳು ಗೋಡಂಬಿ (Cashew Nuts) ತಿನ್ನಬೇಕು. ಅದು ದೇಹದಲ್ಲಿರುವ ಗ್ಲುಕೋಸ್ ಅನ್ನು ಸ್ಟೆಬಿಲೈಸ್ ಮಾಡುತ್ತದೆ. 


ಇದನ್ನೂ ಓದಿ : ಆಮ್ಲೇಟನ್ನು ಇನ್ನಷ್ಟು ಸಾಫ್ಟ್ ಮತ್ತು ಟೇಸ್ಟಿ ಮಾಡುವುದು ಹೇಗೆ..?


2. ಜೀರ್ಣಕ್ರಿಯೆ
ಗೋಡಂಬಿಯಲ್ಲಿ ಫೈಬರ್ ಬೇಕಾದಷ್ಟಿರುತ್ತದೆ. ಹಾಗಾಗಿ ಜೀರ್ಣಕ್ರಿಯೆಗೆ (Digestion) ಬಹಳ ಉತ್ತಮ


3. ಚರ್ಮ 
ಗೋಡಂಬಿಯಲ್ಲಿ ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟ್ ಗುಣ ಸಾಕಷ್ಟಿರುತ್ತದೆ.  ಇದು ಚರ್ಮದ  ಆರೋಗ್ಯವನ್ನು (Skin care) ಕಾಪಾಡುತ್ತದೆ.


4. ಮೂಳೆ
ಗೋಡಂಬಿಯಲ್ಲಿ ಮೆಗ್ನೇಶಿಯಂ ಮತ್ತು ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದು ಮೂಳೆಗಳ ಬೆಳವಣಿಗೆ (Bone health) ಮತ್ತು ಶಕ್ತಿ ವರ್ಧನೆಗೆ ನೆರವಾಗುತ್ತದೆ.


ಇದನ್ನೂ ಓದಿ : Honey Benefits : ಚರ್ಮದ ಎಲ್ಲಾ ಸಮಸ್ಯೆಗಳಿಗೆ ಜೇನು ತುಪ್ಪ : ಬಳಸುವುದು ಹೇಗೆ? ಇಲ್ಲಿ ನೋಡಿ


5.  ಬೊಜ್ಜು ಕರಗುತ್ತದೆ
ಗೋಡಂಬಿಯಲ್ಲಿ ಮೆಗ್ನೇಶಿಯಂ ಮತ್ತು ಫೈಬರಿನ ಪ್ರಮಾಣ ಸಾಕಷ್ಟು ಇರುತ್ತದೆ.  ಇದು ದೇಹದ ಮೆಟಾಬಲಿಸಂ ಹೆಚ್ಚಿಸುತ್ತದೆ. ಇದರಿಂದ ದೇಹದ ತೂಕ ಕಡಿಮೆ ಆಗುತ್ತದೆ. 


6.  ಗರ್ಭಿಣಿಯರಿಗೆ
ಗೋಡಂಬಿಯಲ್ಲಿ ಸಿಗುವ ಪೋಷಕಾಂಶಗಳು ಗರ್ಭಿಣಿಯರಿಗೆ ಹೆಚ್ಚು ಹಿತಕಾರಿ.  ಗೋಡಂಬಿಯಲ್ಲಿರುವ ಮೆಗ್ನೇಶಿಯಂ ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದು.


7. ಕೇಶ ಸೌಂದರ್ಯ
ಗೋಡಂಬಿಯಲ್ಲಿ ಮೆಗ್ನೇಶಿಯಂ, ಸತು, ಕಬ್ಬಿಣದಾಂಶ, ಪಾಸ್ಪರಸ್ ಮುಂತಾದ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಇವೆ. ಇವು ಕೂದಲನ್ನು ಬಲಿಷ್ಠಗೊಳಿಸುತ್ತವೆ (Hair care). ಜೊತೆಗೆ ಅದನ್ನು ಮೃದುವಾಗಿಸುತ್ತದೆ.


ಇದನ್ನೂ ಓದಿ : Vitamin K Deficiency Symptoms: ವಿಟಮಿನ್ 'ಕೆ' ಕೊರತೆಯಿದ್ದಾಗ ಕಂಡುಬರುವ ಲಕ್ಷಣಗಳಿವು


8. ವೀಕ್ನೆಸ್ : ಕಾಜೂ ಅಥವಾ ಗೋಡಂಬಿ ತಿಂದರೆ ವೀಕ್ನೆಸ್ ಹೋಗುತ್ತದೆ. ದೇಹಕ್ಕೆ ಶಕ್ತಿ ನೀಡುತ್ತದೆ ಗೋಡಂಬಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.