ಬೆಂಗಳೂರು : ಮೂತ್ರಪಿಂಡವು ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಅದು ಇಲ್ಲದೆ ದೇಹವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಮೂತ್ರಪಿಂಡಗಳು ರಕ್ತದಲ್ಲಿರುವ ಕೊಳೆಯನ್ನು ಫಿಲ್ಟರ್ ಮಾಡುವ ಕೆಲಸ ಮಾಡುತ್ತವೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವಹಿಸುತ್ತವೆ. ನಮ್ಮ ಕಿಡ್ನಿ ಸರಿಯಾಗಿ ಕೆಲಸ ಮಾಡದೇ ಇದ್ದಾಗ ದೇಹದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.  ಮೂತ್ರಪಿಂಡದ ಸೋಂಕು ಮತ್ತು ಮೂತ್ರಪಿಂಡ ವೈಫಲ್ಯದಂತಹ ಗಂಭೀರ ಕಾಯಿಲೆಗಳು ಮಾರಣಾಂತಿಕವಾಗಿ ಪರಿಣಮಿಸಬಹುದು. ಕಿಡ್ನಿಗೆ ಸಂಬಂಧ ಪಟ್ಟಂತೆ ಯಾವುದೇ ರೀತಿಯ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆಯುವುದು ಅಗತ್ಯ. ಮೂತ್ರಪಿಂಡ ವೈಫಲ್ಯವನ್ನು ಸೂಚಿಸುವ ಚಿಹ್ನೆಗಳು ಇಲ್ಲಿವೆ. 


COMMERCIAL BREAK
SCROLL TO CONTINUE READING

ಸದಾ ದಣಿವಾಗುವುದು : 
ಅನೇಕ ಬಾರಿ ನಮ್ಮ ಕಿಡ್ನಿಯಲ್ಲಿ ಬಹಳಷ್ಟು ವಿಷಕಾರಿ ಅಂಶಗಳು ಶೇಖರಣೆಯಾಗುತ್ತವೆ. ಈ ಸಂದರ್ಭದಲ್ಲಿ ಕಿಡ್ನಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಅಂತಹ ಸಮಯದಲ್ಲಿ ತುಂಬಾ ಸುಸ್ತಾಗುತ್ತದೆ. ದೌರ್ಬಲ್ಯ ಮತ್ತು ಏಕಾಗ್ರತೆಯ ಕೊರತೆ ಕಾಡುತ್ತದೆ. ವಾಸ್ತವವಾಗಿ, ಮೂತ್ರಪಿಂಡಗಳು ಹಾರ್ಮೋನ್ ಅನ್ನು ತಯಾರಿಸುತ್ತವೆ. ಅದು ದೇಹಕ್ಕೆ ಕೆಂಪು ರಕ್ತ ಕಣಗಳನ್ನುಬಿಡುಗಡೆ ಮಾಡಲು ಸಹಾಯ ಮಾಡುತ್ತವೆ. ಅದರ ಕೊರತೆಯಿರುವಾಗ, ರಕ್ತವು ಸ್ನಾಯುಗಳು ಮತ್ತು ಮೆದುಳಿಗೆ ಅಗತ್ಯವಿರುವಷ್ಟು ಆಮ್ಲಜನಕವನ್ನು ತಲುಪಿಸಲು ಸಾಧ್ಯವಾಗುವುದಿಲ್ಲ. 


ಇದನ್ನೂ ಓದಿ : ಮಲಬದ್ದತೆ ಈ ಎರಡು ಗಂಭೀರ ರೋಗಗಳ ಲಕ್ಷಣವೂ ಆಗಿರಬಹುದು .!


 ಸರಿಯಾಗಿ ನಿದ್ದೆ ಬಾರದೇ ಇರುವುದು : 
ನಿದ್ರಾಹೀನತೆ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ನಡುವಿನ ಸಂಭವನೀಯ ಸಂಪರ್ಕವನ್ನು ಬಹಳಷ್ಟು ಸಂಶೋಧನೆಗಳು ತೋರಿಸುತ್ತವೆ. ಇದು ಕಾಲಾನಂತರದಲ್ಲಿ ದೇಹದ ಅಂಗಗಳನ್ನು ಹಾನಿಗೊಳಿಸುತ್ತದೆ. ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗುತ್ತದೆ. ನಿದ್ರಾಹೀನತೆಯು ದೇಹವು ಸಾಕಷ್ಟು ಆಮ್ಲಜನಕವನ್ನು ಪಡೆಯುವುದನ್ನು ತಡೆಯುವ ಮೂಲಕ ಮೂತ್ರಪಿಂಡಗಳನ್ನು ಭಾಗಶಃ ಹಾನಿಗೊಳಿಸುತ್ತದೆ. ಅದಕ್ಕಾಗಿಯೇ ತಜ್ಞರು ಸಹ ಆರೋಗ್ಯವಾಗಿರಲು ಉತ್ತಮ ನಿದ್ರೆ ಬಹಳ ಮುಖ್ಯ ಎಂದು ಹೇಳುತ್ತಾರೆ. 


ತುರಿಕೆ  :
ಮೂತ್ರಪಿಂಡಗಳು ತ್ಯಾಜ್ಯ ಉತ್ಪನ್ನಗಳನ್ನು ತೆಗೆದುಹಾಕಲು ಸಾಧ್ಯವಾಗದಿದ್ದಾಗ ಮತ್ತು  ಚರ್ಮದಲ್ಲಿ ತುರಿಕೆಗೆ ಕಾರಣವಾಗುತ್ತದೆ. ಕಾಲಾನಂತರದಲ್ಲಿ, ಮೂತ್ರಪಿಂಡಗಳು ದೇಹದಲ್ಲಿ ಖನಿಜಗಳು ಮತ್ತು ಇತರ ಪೋಷಕಾಂಶಗಳನ್ನು ಸಮತೋಲನಗೊಳಿಸಲು ಸಾಧ್ಯವಾಗುವುದಿಲ್ಲ, ಇದು ಮೂಳೆ ರೋಗಗಳಿಗೆ ಕಾರಣವಾಗಬಹುದು, ಇದು ನಿಮ್ಮ ಚರ್ಮವನ್ನು ಶುಷ್ಕಗೊಳಿಸಿ ತುರಿಕೆಗೆ ಕಾರಣವಾಗಬಹುದು.


ಮೂತ್ರದ ಬಣ್ಣ ಮತ್ತು ರೂಪದಲ್ಲಿ ಬದಲಾವಣೆ :
ಮೂತ್ರದಲ್ಲಿ ಅತಿಯಾದ ಫೋಮಿಂಗ್ ಪ್ರೋಟೀನ್ ಹೆಚ್ಚುವರಿ ಬಿಡುಗಡೆಯನ್ನು ಸೂಚಿಸುತ್ತದೆ. ಇದನ್ನು ಅಲ್ಬುಮಿನ್ ಎಂದು ಕರೆಯಲಾಗುತ್ತದೆ. ಇದು ಹೆಚ್ಚಾಗಿ ಮೂತ್ರಪಿಂಡ ವೈಫಲ್ಯದಿಂದ ಉಂಟಾಗುತ್ತದೆ. ಈ ಸಮಯದಲ್ಲಿ ಮೂತ್ರದ ಬಣ್ಣವು ಕಂದು ಅಥವಾ ವಿಪರೀತ ಹಳದಿಯಾಗಿರಬಹುದು. ಮೂತ್ರಕೋಶದಲ್ಲಿ ರಕ್ತಸ್ರಾವವಾಗಬಹುದು. 


ಇದನ್ನೂ ಓದಿ : Fruits For Diabetes: ಈ 5 ಬಗೆಯ ಹಣ್ಣುಗಳನ್ನು ಮಧುಮೇಹ ರೋಗಿಗಳು ತಿನ್ನಲೇಬೇಕು


ಮುಖ ಮತ್ತು ಕಾಲುಗಳ ಊತ:
ಮೂತ್ರಪಿಂಡಗಳು ಸೋಡಿಯಂ ಅನ್ನು ಸರಿಯಾದ ಪ್ರಮಾಣದಲ್ಲಿ ದೇಹದಿಂದ ಹೊರಗೆ ಹಾಕುವುದು ಸಾಧ್ಯವಾಗದೆ ಹೋದಾಗ ದ್ರವವು ದೇಹದಲ್ಲಿ ಸಂಗ್ರಹವಾಗುತ್ತದೆ.  ಇದು ಕೈಗಳು, ಪಾದಗಳು, ಕಾಲುಗಳು ಮತ್ತು ಮುಖದಲ್ಲಿ ಊತವನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ, ಪ್ರೋಟೀನ್ ಮೂತ್ರದಿಂದ ಹೊರಬರಲು ಪ್ರಾರಂಭಿಸುತ್ತದೆ. ಇದು  ಕಣ್ಣುಗಳ ಸುತ್ತಲೂ ಕಾಣಿಸಿಕೊಳ್ಳುವ ಊತಕ್ಕೆ ಕಾರಣವಾಗುತ್ತದೆ. 


ಉಸಿರಾಟದ ತೊಂದರೆ :


 ಮೂತ್ರಪಿಂಡದ ಕಾಯಿಲೆಯನ್ನು ಹೊಂದಿರುವಾಗ, ಅಂಗಗಳು ರೆಥ್ರೋಪೊಯೆಟಿನ್ ಎಂಬ ಹಾರ್ಮೋನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸುವುದು ಸಾಧ್ಯವಾಗುವುದಿಲ್ಲ. ಈ ಹಾರ್ಮೋನ್ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.  ಇದರಿನದ ವ್ಯಕ್ತಿಗೆ ಎನಿಮಿಯಾ ಆಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. 


ಮೆದುಳಿನ  ಸರಿಯಾಗಿ ಕೆಲಸ ಮಾಡದೇ ಇರುವುದು : 
 ಮೂತ್ರಪಿಂಡಗಳು ದೇಹದಿಂದ ವಿಷವನ್ನು ಸರಿಯಾಗಿ ಫಿಲ್ಟರ್ ಮಾಡಲು ಸಾಧ್ಯವಾಗದಿದ್ದಾಗ, ಅದು ನಿಮ್ಮ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ಮೆದುಳು ಅಗತ್ಯವಾದ ಆಮ್ಲಜನಕವನ್ನು ಪಡೆಯುವುದಿಲ್ಲ, ಇದರಿಂದಾಗಿ ತಲೆತಿರುಗುವಿಕೆ, ಏಕಾಗ್ರತೆಯ ನಷ್ಟ ಮತ್ತು ಮೆಮೊರಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. 


ಇದನ್ನೂ ಓದಿ : ಆರೋಗ್ಯಕರ ಹೃದಯಕ್ಕಾಗಿ ನಿಮ್ಮ ಡಯಟ್ನಲ್ಲಿರಲಿ ಈ 4 ಸೂಪರ್‌ಫುಡ್‌ಗಳು


ಹಸಿವಿನ ನಷ್ಟ
ಮೂತ್ರಪಿಂಡದ ಕಾಯಿಲೆಯಲ್ಲಿ ವಾಕರಿಕೆ, ವಾಂತಿ ಮತ್ತು ಹೊಟ್ಟೆಯ ತೊಂದರೆಗಳು ಕಂಡುಬರುತ್ತವೆ. ಈ ಸಮಯದಲ್ಲಿ ಕೆಲವೊಮ್ಮೆ ತೂಕ ನಷ್ಟವಾಗುವ ಸಾಧ್ಯತೆ ಕೂಡಾ ಇರುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.