Muskmelon Side Effects: ಬೇಸಿಗೆ ಕಾಲ ಬಂತೆಂದರೆ ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣು ಸೇರಿದಂತೆ ಹಲವು ಹಣ್ಣುಗಳು ರಾರಾಜಿಸುತ್ತವೆ. ಬಿರು ಬೇಸಿಗೆಯಲ್ಲಿ ಜನರು ಕಲ್ಲಂಗಡಿ ಹಣ್ಣನ್ನು ಹೆಚ್ಚು ಇಷ್ಟಪಡುತ್ತಾರೆ. ಕಲ್ಲಂಗಡಿ ಜೊತೆಗೆ ಕಾಲೋಚಿತ ಹಣ್ಣುಗಳಲ್ಲಿ ಒಂದಾದ ಕರ್ಬೂಜವನ್ನು ಕೂಡ ಹೆಚ್ಚಾಗಿ ಬಳಸುತ್ತಾರೆ. 


COMMERCIAL BREAK
SCROLL TO CONTINUE READING

ಕರ್ಬೂಜದ ಹಣ್ಣು (Muskmelon) ಅನೇಕ ಪೌಷ್ಟಿಕ ಅಂಶಗಳಿಂದ ಸಮೃದ್ಧವಾಗಿದೆ. ವಿಟಮಿನ್ ಎ ಮತ್ತು ಸಿ ಹೇರಳವಾಗಿ ಕಂಡು ಈ ಹಣ್ಣನ್ನು ಬೇಸಿಗೆಯಲ್ಲಿ ಸೇವಿಸುವುದರಿಂದ  ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ಆದರೆ, ಅತಿಯಾದರೆ ಅಮೃತವೂ ವಿಷವಾದಂತೆ, ಕರ್ಬೂಜದ ಹಣ್ಣಿನ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು ಎನ್ನಲಾಗುತ್ತದೆ. 


ಕರ್ಬೂಜದ ಹಣ್ಣಿನ ಅಡ್ಡಪರಿಣಾಮಗಳೆಂದರೆ... 
*  ಜೀರ್ಣಕಾರಿ ಸಮಸ್ಯೆ: 

ಕರ್ಬೂಜದ ಹಣ್ಣಿನಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಹಾಗಾಗಿ, ಇದರ ಅತಿಯಾದ ಸೇವನೆಯು ಗ್ಯಾಸ್ಟ್ರಿಕ್, ಅಜೀರ್ಣದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. 


ಇದನ್ನೂ ಓದಿ- ಟೂಥ್ ಪೇಸ್ಟ್ ಬದಲು ಈ ಹಣ್ಣಿನ ಸಿಪ್ಪೆ ಬಳಸಿ, ಹಲ್ಲಿನಲ್ಲಿರುವ ಹಳದಿ ಕಲೆ ಸುಲಭವಾಗಿ ಮಾಯವಾಗುತ್ತದೆ!


* ಮಧುಮೇಹ: 
ಕರ್ಜೂರದ ಹಣ್ಣಿನಲ್ಲಿ ಸಕ್ಕರೆಯ ಅಂಶವೂ ಕಂಡು ಬರುತ್ತದೆ. ಹಾಗಾಗಿ, ಮಧುಮೆಹಿಗಳಿಗೆ (Diabetes) ಇದರ ಅತಿಯಾದ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಅಪಾಯವಿರುತ್ತದೆ. 


* ಉಸಿರಾಟದ ಸಮಸ್ಯೆ: 
ಕರ್ಬೂಜದ ಹಣ್ಣಿನ ಅತಿಯಾದ ಸೇವನೆಯು ಕೆಲವರಲ್ಲಿ ಉಸಿರಾಟದ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. 


* ಮೂತ್ರಪಿಂಡದಲ್ಲಿ ಕಲ್ಲು: 
ಕರ್ಬೂಜದ ಹಣ್ಣಿನಲ್ಲಿ ಆಕ್ಸಲೇಟ್ ಅಂಶ ಸ್ವಲ್ಪ ಹೆಚ್ಚಾಗಿರುತ್ತದೆ. ಹಾಗಾಗಿ, ಇದರ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಈ ಹಣ್ಣು ಅಪಾಯಕಾರಿ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- ಬೇಸಿಗೆಯಲ್ಲಿ ಕಬ್ಬಿನಹಾಲು ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಅದ್ಭುತ ಪ್ರಯೋಜನಗಳಿವು!


ಕರ್ಬೂಜದ ಹಣ್ಣನ್ನು ಸೇವಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: 
>> ಕರ್ಬೂಜದ ಹಣ್ಣನ್ನು ಎಂದಿಗೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರಾಡು. 
>> ರಾತ್ರಿ ವೇಳೆ ಕರ್ಬೂಜದ ಹಣ್ಣಿನ ಸೇವನೆ ಅಷ್ಟು ಒಳ್ಳೆಯದಲ್ಲ. 
>> ಈ ಹಣ್ಣನ್ನು ಬೆಳಗಿನ ಉಪಾಹಾರ ಅಥವಾ ಮಧ್ಯಾಹ್ನದ ಭೋಜನದ ಸಮಯದಲ್ಲಿ  ಸೇರುವುದು ಹೆಚ್ಚು ಪ್ರಾಯೋಜನಕಾರಿ. 


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.