Side Effects of Sugar: ಅತಿಯಾದ ಸಕ್ಕರೆ ಸೇವನೆ ಮಧುಮೇಹ ಮಾತ್ರವಲ್ಲ ಈ ಮಾರಕ ಕಾಯಿಲೆಗೂ ಕಾರಣ!!
Side Effects of Sugar: ಅತಿಯಾಗಿ ಏನು ತಿಂದರೂ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅದೇ ನಿಯಮ ಸಕ್ಕರೆ ಸೇವನೆಗೆ ಅನ್ವಯಿಸುತ್ತದೆ. ಸಕ್ಕರೆಯನ್ನು ಮಿತಿಯಾಗಿ ಸೇವಿಸುವುದು ಒಳ್ಳೆಯದು. ಹೆಚ್ಚು ಸಕ್ಕರೆ ಸೇವಿಸಿದರೆ ಅದು ದೇಹಕ್ಕೆ ಹಾನಿ ಮಾಡುತ್ತದೆ.
Side Effects of Sugar: ಹೆಚ್ಚು ಸಕ್ಕರೆಯನ್ನು ತಿನ್ನುವುದರಿಂದ ಅನೇಕ ರೀತಿಯ ಅಡ್ಡಪರಿಣಾಮಗಳು ಉಂಟಾಗುತ್ತವೆ. ಸಕ್ಕರೆಯ ಪದಾರೈಗಳು ಸಿಹಿ ಮತ್ತು ರುಚಿಕರವಾಗಿರುತ್ತವೆ. ಆದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅದರಲ್ಲೂ ಸಕ್ಕರೆಯ ಅತಿಯಾದ ಸೇವನೆಯಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ. ಇದರಿಂದ ಅಧಿಕ ತೂಕದಿಂದ ಬಳಲುತ್ತೀರಿ. ಮಧುಮೇಹ ಮತ್ತು ಬೊಜ್ಜುಗೆ ಕಾರಣವಾಗುತ್ತದೆ. ಮಿತಿಮೀರಿ ಸಕ್ಕರೆ ಸೇವಿಸಿದರೆ ನಿಮ್ಮ ದೇಹದಲ್ಲಿನ ಬದಲಾವಣೆಗಳೇನು? ಈಗ ಅದರ ದುಷ್ಪರಿಣಾಮಗಳೇನು ಎಂದು ತಿಳಿಯೋಣ.
ಸಕ್ಕರೆ ಸಾಮಾನ್ಯವಾಗಿ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಅನ್ನು ಹೊಂದಿರುತ್ತದೆ. ಗ್ಲೂಕೋಸ್ ಅನ್ನು ನಮ್ಮ ದೇಹದ ಪ್ರತಿಯೊಂದು ಜೀವಕೋಶವೂ ಬಳಸುತ್ತದೆ. ಆದರೆ ಫ್ರಕ್ಟೋಸ್ ಅನ್ನು ಜೀವಕೋಶಗಳು ಬಳಸುವುದಿಲ್ಲ. ಫ್ರಕ್ಟೋಸ್ ಯಕೃತ್ತಿನಲ್ಲಿ ಮಾತ್ರ ಚಯಾಪಚಯಗೊಳ್ಳುತ್ತದೆ. ಯಕೃತ್ತನ್ನು ತಲುಪುವ ಹೆಚ್ಚುವರಿ ಫ್ರಕ್ಟೋಸ್ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ಹೆಚ್ಚಿನ ಮಟ್ಟದ ಸಕ್ಕರೆ ಸೇವನೆಯಿಂದ ಕ್ರಮೇಣ ಇದು ಹೈಪರ್ ಟ್ರೈ ಗ್ಲಿಸರೈಡಿಮಿಯಾ ಆಗಿ ಬದಲಾಗುತ್ತದೆ.
ಇದನ್ನೂ ಓದಿ: ಬೆಚ್ಚಗಿನ ನೀರಿನಲ್ಲಿ ಇದನ್ನು ಸೇರಿಸಿ ಕುಡಿಯಿರಿ.. 15 ದಿನಗಳಲ್ಲಿ 2 ಕೆಜಿ ತೂಕ ಇಳಿಸಿ!
ವಾಸ್ತವವಾಗಿ, ತರಕಾರಿಗಳು ಅಥವಾ ಹಣ್ಣುಗಳು ಅಥವಾ ಧಾನ್ಯಗಳಂತಹ ಫೈಬರ್ ಸಮೃದ್ಧ ಆಹಾರವನ್ನು ಸೇವಿಸಬೇಕು. ಇದು ಮೆದುಳಿನ ಆರೋಗ್ಯಕ್ಕೆ ಉತ್ತಮ. ಇದರಿಂದ ಹೆಚ್ಚು ಆಹಾರ ಸೇವಿಸುವ ಆಸೆ ಹುಟ್ಟುವುದಿಲ್ಲ. ಸಕ್ಕರೆ, ಉಪ್ಪು ಮತ್ತು ಕೊಬ್ಬಿನಂಶವಿರುವ ಆಹಾರವನ್ನು ಸೇವಿಸಿದಾಗ, ಹಸಿವನ್ನು ನೀಗಿಸಲು ಸಾಧ್ಯವಿಲ್ಲ. ಹಾಗಾಗಿ ಅತಿಯಾಗಿ ತಿನ್ನುವ ಆಸೆ ಉಂಟಾಗುತ್ತದೆ. ನಾರಿನಂಶ ಹೆಚ್ಚಿರುವ ಆಹಾರಗಳು ನಮ್ಮ ಆರೋಗ್ಯಕ್ಕೆ ಉತ್ತಮ.
ಹೆಚ್ಚು ಸಕ್ಕರೆ ತಿನ್ನುವವ ಅಭ್ಯಾಸ ಇರುವುದಕ್ಕೆ ಒಂದು ವೈಜ್ಞಾನಿಕ ಕಾರಣವಿದೆ. ಯಾರಾದರೂ ಹೆಚ್ಚು ಸಕ್ಕರೆ ತಿಂದಾಗ ಅವರ ದೇಹದಲ್ಲಿ ಆಗುವ ಬದಲಾವಣೆ ಎಂದರೆ ಸಕ್ಕರೆ ಪ್ರಿಯ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚುವುದು. ಕ್ರಮೇಣ ಇದು ಡಿಸ್ಬಯೋಸಿಸ್ ಆಗಿ ಬದಲಾಗುತ್ತದೆ. ಅಂದರೆ ನಿಮ್ಮ ಮಲದಲ್ಲಿ ಒಂದು ರೀತಿಯ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಬ್ಯಾಕ್ಟೀರಿಯಾಗಳು ಸಕ್ಕರೆಯನ್ನು ತಿನ್ನುತ್ತವೆ. ಅದಕ್ಕಾಗಿಯೇ ನಿಮ್ಮ ದೇಹವು ಸಕ್ಕರೆಯನ್ನು ಸೇವಿಸಲು ಬಯಸುತ್ತದೆ. ಈ ಕಾರಣದಿಂದ ಹೆಚ್ಚು ಸಕ್ಕರೆ ತಿನ್ನುವ ಅಭ್ಯಾಸವಿರುವವರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೆಚ್ಚು ಸಕ್ಕರೆ ತಿನ್ನುವುದು ನಿಮ್ಮ ದೇಹಕ್ಕೆ ಹಲವು ವಿಧಗಳಲ್ಲಿ ಹಾನಿ ಮಾಡುತ್ತದೆ. ಆದ್ದರಿಂದ ಸಕ್ಕರೆಯನ್ನು ಮಿತವಾಗಿ ಸೇವಿಸಿ.
ಇದನ್ನೂ ಓದಿ: ಕರ್ಬೂಜ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ...!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.