ನವದೆಹಲಿ : ನೀವು ಯಾವುದಾದರೂ ಪರೀಕ್ಷೆ ಅಥವಾ ಸಂದರ್ಶನಕ್ಕೆ ಹೋಗುತ್ತಿದ್ದೀರಾ? ಪರೀಕ್ಷೆಗೆ ಅಥವಾ ಸಂದರ್ಶನಕ್ಕೆ ಹೋಗುವ ಮುನ್ನ ಓದಿದ್ದನ್ನು ಮರೆಯುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಮೆದುಳು ಚುರುಕಾಗಬೇಕೆ? ಓದಿದ್ದೆಲ್ಲಾ ನೆನಪಿನಲ್ಲಿ ಉಳಿಯಬೇಕೆ? ಹಾಗಿದ್ದರೆ ನಿಮಗಿದೆ ಇಲ್ಲೊಂದು ಉಪಾಯ! 


COMMERCIAL BREAK
SCROLL TO CONTINUE READING

ಪರೀಕ್ಷೆ ಬರೆಯಲು ಅಥವಾ ಸಂದರ್ಶನಕ್ಕೆ ಹೋಗುವ ಮೊದಲು 10 ನಿಮಿಷಗಳ ವ್ಯಾಯಾಮ ಮಾಡಿದರೆ ನಿಮ್ಮ ನೆನಪಿನ ಶಕ್ತಿ ಮತ್ತು ಮೆದುಳಿನ ಕಾರ್ಯಕ್ಷಮತೆ ಸುಧಾರಿಸುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.  


ವ್ಯಾಯಾಮವು ಮೆದುಳಿನ ಭಾಗಗಳನ್ನು ಅವಿಭಾಜ್ಯವಾಗಿಸಿ ನಮ್ಮ ಸಮಸ್ಯೆಗಳನ್ನು ಕೇಂದ್ರೀಕರಿಸಲು ಮತ್ತು ಪರಿಹರಿಸಲು ಸಹಾಯ ಮಾಡುತ್ತದೆ. "ಕೆಲವರು ಸಮಯ ಮತ್ತು ದೈಹಿಕ ಸಾಮರ್ಥ್ಯದ ಕಾರಣದಿಂದಾಗಿ ದೀರ್ಘಾವಧಿ ವ್ಯಾಯಾಮಕ್ಕೆ ಒಗ್ಗಿಕೊಳ್ಳುವುದಿಲ್ಲ'' ಎಂದು ಕೆನಡಾದ ವೆಸ್ಟರ್ನ್ ಒಂಟಾರಿಯೊ ವಿಶ್ವವಿದ್ಯಾನಿಲಯದ ಪ್ರೊಫೆಸರ್, ಸಹ-ಲೇಖಕ ಮ್ಯಾಥ್ಯೂ ಹೀತ್ ಹೇಳಿದ್ದಾರೆ. 


ಹೀತ್ ಅವರು ಹೇಳುವಂತೆ ಜನರು ಅತಿ ಕಡಿಮೆ ಸಮಯದಲ್ಲಿ ಸೈಕಲ್ ತುಳಿಯುವುದು ಅಥವಾ ವೇಗದ ನಡಿಗೆಗೆ ಒಗ್ಗಿಕೊಳ್ಳುತ್ತಾರೆ. ಹಾಗೆಯೇ ಅದು ಆರೋಗ್ಯದ ಮೇಲೆ ವೇಗವಾಗಿ ಪರಿಣಾಮ ಬೀರಬೇಕೆಂದು ಬಯಸುತ್ತಾರೆ. ಆದರೆ ಇತ್ತೀಚಿನ ಆವಿಷ್ಕಾರಗಳು ಬುದ್ಧಿಮಾಂದ್ಯತೆಯ ಆರಂಭಿಕ ಹಂತಗಳಲ್ಲಿರುವ ವೃದ್ಧರಲ್ಲಿ ಮತ್ತು ಅತಿ ಕಡಿಮೆ ಕೆಲಸ ಮಾಡುವವರಿಗೆ ಸಹಾಯವಾಗಲಿದೆ. 


ಈ ಸಂಶೋಧನೆಗೆ ನಡೆಸಿದ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಕೆಲವರು ಕುಳಿತು ನಿಯತಕಾಲಿಕವನ್ನು ಓದಿದರೆ ಮತ್ತೆ ಕೆಲವರು ಸ್ಥಾಯಿ ಬೈಸಿಕಲ್ನಲ್ಲಿ 10 ನಿಮಿಷಗಳ ಮಧ್ಯಮ ವೇಗದ ತೀವ್ರ ವ್ಯಾಯಾಮ ಮಾಡಿದರು.


ಓದುವಿಕೆ ಮತ್ತು ವ್ಯಾಯಾಮದ ಸಮಯವನ್ನು ಅನುಸರಿಸಿ, ಸಂಶೋಧಕರು ಕಣ್ಣಿನ ಚಲನಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರೀಕ್ಷಿಸಲು ಕಣ್ಣಿನ ಟ್ರ್ಯಾಕಿಂಗ್ ಸಾಧನಗಳನ್ನು ಬಳಸಿದರು. ಈ ಪರೀಕ್ಷೆಯು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮತ್ತು ನಿರ್ಣಾಯಕ ಅಂಶಗಳನ್ನು ತೆಗೆದುಕೊಳ್ಳುವಲ್ಲಿ ಮೆದುಳು ಎಷ್ಟರಮಟ್ಟಿಗೆ ಕೆಲಸ ಮಾಡುತ್ತಿದೆ ಎಂಬುದರ ಬಗ್ಗೆ ತಿಳಿಯಲು ಈ ಪರೀಕ್ಷೆ ನಡೆಸಲಾಯಿತು. 


"ವ್ಯಾಯಾಮ ಮಾಡಿದವರಲ್ಲಿ ತಕ್ಷಣದ ಸುಧಾರಣೆ ಕಂಡುಬಂದಿತಲ್ಲದೆ, ಅವರ ಪ್ರತಿಕ್ರಿಯೆ ಹೆಚ್ಚು ನಿಖರವಾಗಿಯೂ, ಸಮಯವು ಪೂರ್ವ-ವ್ಯಾಯಾಮದ ಮೌಲ್ಯಕ್ಕಿಂತ 50 ಮಿಲಿಸೆಕೆಂಡ್ಗಳಷ್ಟು ಕಡಿಮೆಯಾಗಿತ್ತು" ಎಂದು ಹೇತ್ ಹೇಳಿದ್ದಾರೆ.


"ಇದು ಸ್ವಲ್ಪ ಮಟ್ಟಿಗೆ ಕಾಣಿಸಬಹುದು. ಆದರೆ ಇದು ಕೆಲವು ಸಂದರ್ಭಗಳಲ್ಲಿ ಅರಿವಿನ ಕಾರ್ಯಕ್ಷಮತೆಗೆ 14 ಪ್ರತಿಶತದಷ್ಟು ಲಾಭವನ್ನು ನೀಡಿದೆ" ಎಂದು ಹೀಥ್ ವಿವರಿಸಿದ್ದಾರೆ. 


ಹಾಗಿದ್ದರೆ ಇನ್ನೇಕೆ ತಡ. ನೀವು ಪ್ರತಿನಿತ್ಯ ವ್ಯಾಯಾಮ ಮಾಡಿ, ನಿಮ್ಮ ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಿ.