ಮನುಷ್ಯನಿಗೆ ವಯಸ್ಸಾದಂತೆ ನಾನಾ ರೀತಿಯ ಕಾಯಿಲೆಗಳು ಆರಂಭವಾಗುತ್ತವೆ. ಈ ಕಾಯಿಲೆಗಳಿಗೆ ಬ್ರೇಕ್ ಹಾಕಲು ದಿನನಿತ್ಯ ವ್ಯಾಯಾಮದ ಅಗತ್ಯತೆಯಂತೂ ಹೆಚ್ಚಿದೆ. ಆದರೆ, ಈ ಅಗತ್ಯವನ್ನು ಅರ್ಥಮಾಡಿಕೊಂಡು ಕೆಲವರು ವ್ಯಾಯಾಮ ಮಾಡಿದರೆ, ಮತ್ತೆ ಕೆಲವರು ಇತರ ಕಾರಣಗಳಿಂದ ಆಲಸಿಗಳಾಗಿ ನಿರ್ಲಕ್ಷಿಸುತ್ತಾರೆ. ಅಂಥವರಿಗೆ ಶ್ವಾನಗಳೊಂದಿಗಿನ ವಾಕಿಂಗ್ ಹೆಚ್ಚು ಸಹಕಾರಿಯಾಗುತ್ತದೆ. 


COMMERCIAL BREAK
SCROLL TO CONTINUE READING

ಅಧ್ಯಯನದ ಪ್ರಕಾರ, ಮನೆ ಆವರಣದಲ್ಲಿನ ತೋಟಗಾರಿಕೆ ಕಾರ್ಯದಲ್ಲಿ ತೊಡಗುವಿಕೆ ಅಥವಾ ಶ್ವಾನಗಳನ್ನು ವಾಕಿಂಗ್ ಕರೆದೊಯ್ಯುವುದು ವಯಸ್ಸಾದ ಪುರುಷರ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂಬುದು ತಿಳಿದುಬಂದಿದೆ. 


ಲಂಡನ್ ಯುನಿವರ್ಸಿಟಿ ಕಾಲೇಜಿನ ಬರ್ಬಾಜ ಜೆಫೆರಿಸ್ ಅವರ ಸಂಶೋಧನೆಯ ಪ್ರಕಾರ, ದಿನನಿತ್ಯದ ವ್ಯಾಯಾಮ ವೃದ್ಧರಲ್ಲಿನ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ವೃದ್ಧರಿಗೆ ಯಾವುದೇ ರೀತಿಯ ದೈಹಿಕ ಚಟುವಟಿಕೆ ಉತ್ತಮ ಆರೋಗ್ಯ ಪಡೆಯಲು ಸಹಕಾರಿ ಎಂದಿದ್ದಾರೆ. 


ವಾರದಲ್ಲಿ ಯಾವುದೇ ರೀತಿಯಲ್ಲಿ ಮಾಡುವ 150 ನಿಮಿಷಗಳ ದೈಹಿಕ ಚಟುವಟಿಕೆಯನ್ನು ವಯಸ್ಸಾದವರನ್ನು ಸದಾ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಆದಾಗ್ಯೂ, ವಯಸ್ಸಾದವರಿಗೆ ಇದು ಅಷ್ಟು ಸುಲಭದ ವಿಚಾರವಲ್ಲ, ಎಂದು ಸಂಶೋಧಕರು ಹೇಳಿದ್ದಾರೆ.


ಈ ಅಧ್ಯಯನಕ್ಕಾಗಿ 78 ವರ್ಷದ 1000 ಪುರುಷರನ್ನು ಒಳಪಡಿಸಲಾಗಿತ್ತು. ಅವರಿಗೆ 7 ದಿನಗಳ ವಾಕಿಂಗ್ ಗೆ ಹೋಗುವ ಅವಧಿಯಲ್ಲಿ, ದೈಹಿಕ ಚಟುವಟಿಕೆಯ ಪರಿಮಾಣ ಮತ್ತು ತೀವ್ರತೆಯನ್ನು ನಿರಂತರವಾಗಿ ಟ್ರ್ಯಾಕ್ ಮಾಡುವ ಅಕ್ಸೆಲೆರೊಮೀಟರ್ ಧರಿಸಲು ಹೇಳಲಾಗಿತ್ತು. ಈ ಅವಧಿಯಲ್ಲಿ 5 ವರ್ಷಗಳ ಸರಾಸರಿಯಲ್ಲಿ 194 ಪುರುಷರು ನಿಧನರಾಗಿದ್ದರು. 


ಅಕ್ಸೆಲೆರೊಮೀಟರ್ ಸಂಶೋಧನೆಗಳು ಸೂಚಿಸಿದ ಪ್ರಕಾರ, ದೈಹಿಕ ಚಟುವಟಿಕೆಯ ಒಟ್ಟು ಪರಿಮಾಣವು ಬೆಳಕಿನ ತೀವ್ರತೆಯಿಂದ ಮೇಲೇರಿ, ಯಾವುದೇ ಕಾರಣದಿಂದಾಗಿ ಉಂಟಾಗುವ ಸಾವಿನ ಅಪಾಯ ಕಡಿಮೆಯಾಗಿರುವುದು ಕಂಡುಬಂದಿತು. 


ಒಂದು ದಿನದ ಬೆಳಕು ತೀವ್ರತೆಯ ಚಟುವಟಿಕೆಯ ಹೆಚ್ಚುವರಿ 30 ನಿಮಿಷಗಳು, ಸಾವಿನ ಅಪಾಯದಲ್ಲಿ ಶೇ.17 ಕಡಿಮೆಗೊಳಿಸುತ್ತದೆ ಎಂದು ಅಧ್ಯಯನ ಹೇಳಿದೆ. ಪ್ರತಿ ಹೆಚ್ಚುವರಿ 30 ನಿಮಿಷಗಳ ಮಧ್ಯಮ ತೀವ್ರತೆಯ ದೈಹಿಕ ಚಟುವಟಿಕೆಯು ಸಾವಿನ ಅಪಾಯಕ್ಕೆ ಸಮಾನವಾದ ಕಡಿತವು ಸುಮಾರು 33 ಪ್ರತಿಶತದಷ್ಟು ಇದ್ದರೂ, ಬೆಳಕಿನ ತೀವ್ರತೆಯ ಚಟುವಟಿಕೆಯ ಪ್ರಯೋಜನಗಳೂ ಕೂಡಾ ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.