ವ್ಯಾಕ್ಸಿನೇಷನ್ ಅಪಾಯದಲ್ಲಿರುವ ವಯಸ್ಕರಲ್ಲಿ ಇನ್ಫ್ಲುಯೆನ್ಸಾ ಸೋಂಕನ್ನು ತಡೆಗಟ್ಟುತ್ತದೆ: ತಜ್ಞರು
ಋತುಮಾನ ಸಂಬಂಧಿತ ಉಸಿರಾಟದ ವೈರಲ್ ಸೋಂಕು, ಇನ್ಫ್ಲುಯೆನ್ಸಾ, ಎಲ್ಲಾ ವಯೋಮಾನದ ಜನರ ಮೇಲೆ ಪರಿಣಾಮ ಬೀರುತ್ತದೆ. ಕೊಮೊರ್ಬಿಡಿಟಿಗಳಿರುವ ವ್ಯಕ್ತಿಗಳು ತೊಡಕುಗಳಿಂದ ಹೆಚ್ಚಿನ ಅಪಾಯದಲ್ಲಿರುತ್ತಾರೆ. ವಾರ್ಷಿಕ ಇನ್ಫ್ಲುಯೆನ್ಸಾ ಲಸಿಕೆಯು ಸೋಂಕನ್ನು ತಪ್ಪಿಸಲು ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ತಂತ್ರವಾಗಿದ್ದು, ಜ್ವರ-ಸಂಬಂಧಿತ ತೊಡಕುಗಳ ಅಪಾಯವನ್ನು 70% ರಿಂದ 90% ರಷ್ಟು ಕಡಿಮೆ ಮಾಡುತ್ತದೆ
ಬೆಂಗಳೂರು: ಭಾರತವು 2020 ರ ಏಪ್ರಿಲ್ ಮತ್ತು ಜೂನ್‍ಗಳ ನಡುವೆ ತೀವ್ರತರವಾದ ಉಸಿರಾಟದ ಸೋಂಕಿನ 778,070 ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಅದೃಷ್ಟವಶಾತ್, ಐತಿಹಾಸಿಕವಾಗಿ ದೇಶವು ಲಸಿಕಾಕರಣದ ಸಹಾಯದಿಂದ ವಿವಿಧ ಸಾಂಕ್ರಾಮಿಕ ರೋಗಗಳನ್ನು ಜಯಿಸಿದೆ. ಅಂತಹ ಒಂದು ಲಸಿಕೆ-ಪ್ರತಿರೋಧಿತ ರೋಗವಾದ ಇನ್ಫ್ಲುಯೆನ್ಸಾ , ಋತುಮಾನ ಸಂಬಂಧಿತ ಉಸಿರಾಟದ ವೈರಲ್ ಸೋಂಕು ಆಗಿದ್ದು, ಇದು ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತದೆ. ಭಾರತದಲ್ಲಿ, ಋತುಮಾನ ಸಂಬಂಧಿತ ಇನ್ಫ್ಲುಯೆನ್ಸಾ ಅಥವಾ 'ಫ್ಲೂ' ಸಾಮಾನ್ಯವಾಗಿ ಮಳೆಗಾಲ ಅಥವಾ ಅತೀವ ಚಳಿಗಾಲದಲ್ಲಿ, ಸ್ವಲ್ಪ ಪ್ರಾದೇಶಿಕ ವ್ಯತ್ಯಾಸಗಳೊಂದಿಗೆ, ಏಕಾಏಕಿ ಕಂಡುಬರುತ್ತದೆ.
ಇದನ್ನೂ ಓದಿ:Skin Care: ಮೃದುವಾದ ಚರ್ಮಕ್ಕಾಗಿ ಮನೆಯಲ್ಲಿ ತಯಾರಿಸಿ ಬಾಡಿ ಲೋಷನ್!
ಇನ್ಫ್ಲುಯೆನ್ಸಾ ಎಲ್ಲಾ ವಯೋಮಾನದ ಜನರ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಮಧುಮೇಹ, ಮೂತ್ರಪಿಂಡ, ಹೃದಯ ಅಥವಾ ಪಿತ್ತಜನಕಾಂಗದ ಕಾಯಿಲೆಗಳು, ಆಸ್ತಮಾ, ರಕ್ತದ ಅಸ್ವಸ್ಥತೆಗಳಂತಹ ಕೊಮೊರ್ಬಿಡ್ ಪರಿಸ್ಥಿತಿಗಳನ್ನು ಹೊಂದಿರುವ ಜನರು ಮತ್ತು ಇತರ ದುರ್ಬಲ-ಪ್ರತಿರೋಧಕತೆಯನ್ನು ಹೊಂದಿರುವ ವ್ಯಕ್ತಿಗಳು ತೊಡಕುಗಳಿಂದ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಆದ್ದರಿಂದ ಪ್ರತಿರೋಧಕತೆಯು ಪ್ರಮುಖವಾಗಿದೆ. ಇನ್ಫ್ಲುಯೆನ್ಸಾ ಸೋಂಕು ಮತ್ತು ಸಂಬಂಧಿತ ಪ್ರತಿಕೂಲ ಪರಿಣಾಮಗಳನ್ನು ತಪ್ಪಿಸಲು ಮಕ್ಕಳು ಮತ್ತು ವಯಸ್ಕರಿಗೆ ಲಸಿಕೆಗಳು ಅತ್ಯಂತ ಪರಿಣಾಮಕಾರಿ ತಂತ್ರವಾಗಿದೆ. ಫ್ಲೂ ನ ಒಂದು ಚುಚ್ಚುಮದ್ದು ಫ್ಲೂ-ಸಂಬಂಧಿತ ತೊಡಕುಗಳ ಅಪಾಯವನ್ನು ಸುಮಾರು 70% ರಿಂದ 90% ರಷ್ಟು ಕಡಿಮೆ ಮಾಡುತ್ತದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ ಪ್ರಸ್ತುತದಲ್ಲಿರುವ ಫ್ಲೂ ತಳಿಗಳಿಗೆ, ವಿಶೇಷವಾಗಿ ಎಲ್ಲಾ ಹೆಚ್ಚಿನ ಅಪಾಯವಿರುವ ಗುಂಪುಗಳಿಗೆ, ವಾರ್ಷಿಕ ಇನ್ಫ್ಲುಯೆನ್ಸಾ ವ್ಯಾಕ್ಸಿನೇಷನ್ ಅನ್ನು ಶಿಫಾರಸು ಮಾಡುತ್ತದೆ.
ಮಕ್ಕಳಿಗೆ ಫ್ಲೂ ಶಾಟ್‍ಗಳು ಅತೀವ ಸಾಮಾನ್ಯವಾಗಿದ್ದರೂ, ವಯಸ್ಕರಲ್ಲಿ, ಅದೂ ಸಹ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕೊಮೊರ್ಬಿಡ್ ಪರಿಸ್ಥಿತಿಗಳಿರುವವರೂ ಸಹ, ಇನ್ಫ್ಲುಯೆನ್ಸಾ ವ್ಯಾಕ್ಸಿನೇಷನ್ ಪಡೆಯುವುದು ಕಡಿಮೆಯಾಗಿದೆ. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್‍ನಂತಹ ದೇಶದಲ್ಲಿಯೂ ಸಹ, ವಯಸ್ಕ ಇನ್ಫ್ಲುಯೆನ್ಸಾ ವ್ಯಾಕ್ಸಿನೇಷನ್ ಕವರೇಜ್ 46.1% (2017-18 ರ ಅವಧಿಯಲ್ಲಿ) ಮತ್ತು ಅದೇ ರೀತಿ, ಭಾರತವೂ ಸಹ, ಅದರಲ್ಲೂ ಹೆಚ್ಚಾಗಿ ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ವಯಸ್ಕರು ರೋಗನಿರೋಧಕವನ್ನು ಪಡೆಯುವುದನ್ನು ಹೆಚ್ಚಿಸುವಲ್ಲಿ ಬಹಳ ದೂರ ಹೋಗಬೇಕಿದೆ. ಉದಾಹರಣೆಗೆ, ಮಧುಮೇಹ ಹೊಂದಿರುವ ಲಸಿಕೆ ಹಾಕದ ರೋಗಿಗಳಿಗೆ ಹೋಲಿಸಿದರೆ ಇನ್ಫ್ಲುಯೆನ್ಸಾ ಲಸಿಕೆ ಪಡೆದ ಮಧುಮೇಹ ಹೊಂದಿರುವ ರೋಗಿಗಳಲ್ಲಿ ಸಮಸ್ಯೆಗಳಲ್ಲಿ 56% ರಷ್ಟು ಇಳಿಕೆ, ಜೊತೆಗೆ ಆಸ್ಪತ್ರೆ ದಾಖಲಾತಿಯಲ್ಲಿಯೂ 54% ಇಳಿಕೆ ಕಂಡುಬಂದಿತು. 74 ಮಿಲಿಯನ್‍ಗಿಂತಲೂ ಹೆಚ್ಚು ಮಧುಮೇಹ ಹೊಂದಿರುವ ಜನರೊಂದಿಗೆ - ಭಾರತವನ್ನು ವಿಶ್ವದ ಮಧುಮೇಹ ರಾಜಧಾನಿ ಎಂದು ಪರಿಗಣಿಸಲಾಗಿರುವುದರಿಂದ - ಹೆಚ್ಚಿನ ವ್ಯಾಕ್ಸಿನೇಷನ್ ಕವರೇಜ್ ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ.
ಇನ್ಫ್ಲುಯೆನ್ಸಾ ಲಸಿಕೆಯನ್ನು ಹೆಚ್ಚಿಸುವ ಅಗತ್ಯತೆಯ ಕುರಿತು ಪ್ರತಿಕ್ರಿಯಿಸಿದ ಶ್ವಾಸಕೋಶತಜ್ಞರು ಮತ್ತು ಸಲಹೆಗಾರರಾದ ಮತ್ತು ಬೆಂಗಳೂರಿನ ಅಪೊಲೊ ಆಸ್ಪತ್ರೆಗಳ ಕ್ರಿಟಿಕಲ್ ಕೇರ್ ಮುಖ್ಯಸ್ಥರಾದ ಡಾ.ರವೀಂದ್ರ ಮೆಹ್ತಾ, ಹೇಳಿದರು, "ಬೆಂಗಳೂರಿನಲ್ಲಿ, ನಾವು ತಿಂಗಳಿಗೆ ಸರಾಸರಿ 40 ರಿಂದ 50 ಇನ್ಫ್ಲುಯೆನ್ಸಾ ತರಹದ ಅನಾರೋಗ್ಯದ (ILI) ರೋಗಿಗಳನ್ನು OPD ಯಲ್ಲಿ ನೋಡುತ್ತೇವೆ, ವಿಶೇಷವಾಗಿ ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಇರುವ ರೋಗಿಗಳಲ್ಲಿ. ಇವರಲ್ಲಿ, ಸುಮಾರು 10 ರಿಂದ 15 ರೋಗಿಗಳು, ವಿಶೇಷವಾಗಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರು, ಪ್ರತಿ ತಿಂಗಳು ಆಸ್ಪತ್ರೆಗೆ ದಾಖಲಾಗುತ್ತಾರೆ. ಅಂತಹ ಸೋಂಕುಗಳನ್ನು ತಪ್ಪಿಸಲು ಲಸಿಕೆಗಳು ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿ ಆಯ್ಕೆಯಾಗಿದೆ. "
ಅಬಾಟ್‍ನಲ್ಲಿನ ವೈದ್ಯಕೀಯ ವ್ಯವಹಾರಗಳ ನಿರ್ದೇಶಕ ಡಾ ಜೆಜೋ ಕರಣ್‍ಕುಮಾರ್, "ಅಬಾಟ್‍ನಲ್ಲಿ, ಜನರು ತಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಆರೋಗ್ಯವಾಗಿರುವಲ್ಲಿ ಸಹಾಯ ಮಾಡಲು ನಾವು ಬದ್ಧತೆಯನ್ನು ಹೊಂದಿದ್ದೇವೆ. ಮಕ್ಕಳಿಗೆ ಮಾತ್ರವಲ್ಲದೆ ಅಪಾಯದಲ್ಲಿರುವ ವಯಸ್ಕರಲ್ಲಿಯೂ ಸಹ, ಜನರಿಗೆ ಸೋಂಕಿನ ವಿರುದ್ಧ ಹೆಚ್ಚಿನ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ವಾರ್ಷಿಕ ಇನ್ಫ್ಲುಯೆನ್ಸಾ ಚುಚ್ಚುಮದ್ದಿನ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಪ್ರಮುಖವಾಗಿದೆ. ಫ್ಲೂ ಚುಚ್ಚುಮದ್ದು ಪಡೆಯಲು ಸುಲಭತೆ ಮತ್ತು ಅನುಕೂಲಕ್ಕಾಗಿ, ಫ್ಲೂ ವ್ಯಾಕ್ಸಿನೇಷನ್ ಸೇವೆಗಳನ್ನು ಜನರ ಮನೆಗಳಲ್ಲಿಯೂ ನೀಡಲಾಗುತ್ತದೆ. ಇನ್ಫ್ಲುಯೆನ್ಸಾ ಲಸಿಕೆ-ಪ್ರತಿರೋಧಿತ ಅರೋಗ್ಯಸಮಸ್ಯೆಯಾಗಿದೆ, ಮತ್ತು ತಡೆಗಟ್ಟುವಿಕೆಯ ಪ್ರಯೋಜನಗಳು ಮತ್ತು ಸರಳತೆಯು ನಂತರದ ಅನಾರೋಗ್ಯದ ತೊಡಕುಗಳಿಗಿಂತ ಹೆಚ್ಚು ಮಹತ್ವದ್ದಾಗಿದೆ. " ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:Hibiscus Tea: ಮಧುಮೇಹ ರೋಗಿಗಳಿಗೆ ದಾಸವಾಳದ ಟೀ! ಇಲ್ಲಿದೆ ತಯಾರಿಸುವ ವಿಧಾನ..
ಇನ್ಫ್ಲುಯೆನ್ಸಾ ತಳಿಗಳು ಪ್ರತಿ ವರ್ಷ ರೂಪಾಂತರಗೊಳ್ಳುತ್ತವೆ, ಪ್ರಸ್ತುತ ಹರಡುತ್ತಿರುವ ವೈರಸ್ ತಳಿಯ ಕುರಿತ ಮಾರ್ಗಸೂಚಿಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು ನಿರಂತರವಾಗಿ ನವೀಕರಿಸುತ್ತದೆ. ಮಕ್ಕಳಿಗೆ ಮಾತ್ರವಲ್ಲ, ವಯಸ್ಕರು, ವಿಶೇಷವಾಗಿ ಇತರ ಆರೋಗ್ಯ ಸಮಸ್ಯೆಗಳಿರುವವರು ತಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ವಾರ್ಷಿಕ ಇನ್ಫ್ಲುಯೆನ್ಸಾ ಲಸಿಕೆಯನ್ನು ಪಡೆಯುವುದು ಬಹಳ ಮುಖ್ಯವಾಗಿದೆ.
ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ, ತಲೆನೋವು, ಮೂಗು ಸೋರುವುದು, ಮೈ-ಕೈ ನೋವು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಇನ್ಫ್ಲುಯೆನ್ಸಾ ಮತ್ತು ಇತರ ಉಸಿರಾಟದ ಸೋಂಕುಗಳಂತಹುದೇ ರೋಗಲಕ್ಷಣಗಳು ಕಂಡುಬರುವ ಪ್ರಸ್ತುತ ಜಾಗತಿಕ ಸನ್ನಿವೇಶವು ಅನೇಕರಿಗೆ ಗೊಂದಲವನ್ನು ಸೃಷ್ಟಿಸುವುದನ್ನು ಮುಂದುವರೆಸಿದೆ. ಕೋವಿಡ್-19 ವ್ಯಾಕ್ಸಿನೇಷನ್‍ನಿಂದ ಜ್ವರಕ್ಕೆ ರಕ್ಷಣೆ ದೊರೆಯುವುದಿಲ್ಲ ಮತ್ತು ಅದೇ ರೀತಿ ವಿಪರ್ಯಯವಾಗಿ ಸಹಾ ಎಂಬುದನ್ನು ಗಮನಿಸುವುದು ಮುಖ್ಯ. ಫ್ಲೂ ಲಸಿಕೆಗಳು ಮತ್ತು ಕೋವಿಡ್-19 ಲಸಿಕೆಗಳನ್ನು ಒಂದೇ ಸಮಯದಲ್ಲಿ ನೀಡಬಹುದು ಮತ್ತು ಒಂದು ಮತ್ತೊಂದರ ಸುರಕ್ಷತಾ ಪ್ರೊಫೈಲ್ ಅಥವಾ ಪರಿಣಾಮಕಾರಿತ್ವದ ಮೇಲೆ ಪರಿಣಾಮ ಬೀರುವುದಿಲ್ಲ.
ಜನವರಿ 2018 ರಲ್ಲಿ ಭಾರತದಲ್ಲಿ ಸ್ಥಾಪಿಸಲಾದ ವಯಸ್ಕರ ಪ್ರತಿರಕ್ಷಣೆ ಕೇಂದ್ರ ಮತ್ತು ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾ ಹಂಚಿಕೊಂಡಿರುವ ಇತ್ತೀಚಿನ ಪ್ರತಿರಕ್ಷಣೆ ಶಿಫಾರಸುಗಳು ಜಾಗೃತಿ ಮೂಡಿಸಲು ಮತ್ತು ಲಸಿಕೆ ಹೆಚ್ಚಿನ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವ ಉದ್ದೇಶಿತ ಕ್ರಮಗಳಾಗಿ ಕಾರ್ಯನಿರ್ವಹಿಸುತ್ತವೆ. ಲಸಿಕೆಗಳು ವ್ಯಕ್ತಿಯ ಕುಟುಂಬ, ಸ್ನೇಹಿತರು ಮತ್ತು ಸಮಾಜದ ಸದಸ್ಯರಿಗೆ ಸ್ತರಗಳಲ್ಲಿ ರಕ್ಷಣೆಯನ್ನು ನೀಡುತ್ತವೆ. ರಾಷ್ಟ್ರವ್ಯಾಪಿ ರೋಗನಿರೋಧಕ ವ್ಯಾಪ್ತಿಯನ್ನು ಸ್ಕೇಲಿಂಗ್ ಹೆಚ್ಚಿಸುವ ಮೂಲಕ, ಜನರು ಆರೋಗ್ಯ ವ್ಯವಸ್ಥೆಗಳನ್ನು ಬೆಂಬಲಿಸಿಕೊಳ್ಳುತ್ತಲೇ ಜ್ವರ-ಸಂಬಂಧಿತ ತೊಡಕುಗಳನ್ನು ತಪ್ಪಿಸಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.