ಜಪಾನೀಸ್ ಎನ್ಸಫಲೈಟಿಸ್ ಸಾಂಕ್ರಾಮಿಕವನ್ನು ತೊಲಗಿಸಲು ಲಸಿಕೀಕರಣ ಶಿಫಾರಸು ಮಾಡಿದ ತಜ್ಞರು
ಸೋಂಕು ಏರ್ಪಟ್ಟ ಸೊಳ್ಳೆಗಳಿಂದ ಹರಡುವ ವೆಕ್ಟಾರ್-ಕಾರಕ ಕಾಯಿಲೆಯಾದ ಜಪಾನೀಸ್ ಎನ್ಸಫಲೈಟಿಸ್(ಜೆಇ), ಮೆದುಳಿನ ವೈರಾಣು ಸೋಂಕಿಗೆ ಕಾರಣವಾಗುತ್ತದೆ ಮತ್ತು ಇದು ಉಲ್ಬಣಗೊಂಡರೆ(ಗಂಭೀರವಾದರೆ)ಅಥವಾ ಚಿಕಿತ್ಸೆ ಪಡೆಯದೆ ಹೋದರೆ, ಸರಿಪಡಿಸಲಾಗದ ನ್ಯೂರಾನ್ಗಳ ಹಾನಿಗೆ ಕಾರಣವಾಗುತ್ತದೆ.
ಬೆಂಗಳೂರು: ಜಪಾನೀಸ್ ಎನ್ಸಫಲೈಟಿಸ್ (ಜೆಇ), ವೆಕ್ಟರ್-ಕಾರಕ ಪ್ರಾಣಿಜನ್ಯ ಕಾಯಿಲೆಯಾಗಿದ್ದು, ಸೊಳ್ಳೆಗಳಿಂದ ಸೋಂಕು ಹರಡುತ್ತದೆ ಮತ್ತು ಭಾರತದಲ್ಲಿ ಇದು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯ ವಿಷಯವಾಗಿದೆ. ಇದು, ಹಲವು ಏಶ್ಯಾ ದೇಶಗಳಾದ್ಯಂತ ಸೊಳ್ಳೆ-ಜನ್ಯವಾದ ವೈರಾಣು ಎನ್ಸಫಲೈಟಿಸ್‍ಗೆ ಅತಿ ಮುಖ್ಯವಾದ ಕಾರಣವಾಗಿದೆ. ಭಾರತದಲ್ಲಿ, ಉತ್ತರ ಪ್ರದೇಶ, ಬಿಹಾರ, ಅಸ್ಸಾಂ, ತಮಿಳುನಾಡು, ಮತ್ತು ಪಶ್ಚಿಮ ಬಂಗಾಳ ಒಟ್ಟೂ ರೋಗ ಹೊರೆಯ 80%ಗಿಂತ ಹೆಚ್ಚಿನ ಪಾಲಿಗೆ ಕೊಡುಗೆ ನೀಡುತ್ತವೆ. ವಾರ್ಷಿಕವಾಗಿ, 1,500ದಿಂದ 4,000 ಸಂದರ್ಭಗಳು ದೇಶದಲ್ಲಿ ವರದಿಯಾಗುತ್ತಿವೆ. ಇದು ಸಾಮಾನ್ಯವಾಗಿ ಶಿಶುಗಳನ್ನು ಬಾಧಿಸುತ್ತಿದ್ದು 75%% ಸಂದರ್ಭಗಳಲ್ಲಿ ಇದು 0ದಿಂದ 14 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಏರ್ಪಡುತ್ತಿದೆ. ಕರ್ನಾಟಕದಲ್ಲಿ, ಕಳೆದ 5 ವರ್ಷಗಳಲ್ಲಿ, 122 ಜೆಇ ಸಂದರ್ಭಗಳನ್ನು ವರದಿ ಮಾಡಲಾಗಿದೆ. ಜೆಇ ಲಸಿಕೆಯಿಂದ ತಡೆಗಟ್ಟಬಹುದಾದ ಕಾಯಿಲೆಯಾಗಿದ್ದು, ಇದನ್ನು ನಿಯಂತ್ರಿಸುವುದಕ್ಕೆ ಹಾಗೂ ತೊಲಗಿಸುವುದಕ್ಕೆ ಲಸಿಕೀಕರಣವು ಅತ್ಯಂತ ಪರಿಣಾಮಕಾರಿಯಾದ ತಡೆಯಾತ್ಮಕ ತಂತ್ರವಾಗಿದೆ.
ಇದನ್ನೂ ಓದಿ: ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಈ ಸಂಕೇತಗಳು ಸರ್ವಿಕಲ್ ಕ್ಯಾನ್ಸರ್ ನ ಲಕ್ಷಣಗಳಾಗಿರಬಹುದು ..!
ಜಪಾನೀಸ್ ಎನ್ಸಫಲೈಟಿಸ್ ಮೆದುಳಿನ ವೈರಾಣು ಸೋಂಕಿನ ಕಾಯಿಲೆಯಾಗಿದ್ದು, ಮೆದುಳಿನ ಕೋಶಗಳಲ್ಲಿ ಉರಿಯೂತ ಏರ್ಪಡಿಸುತ್ತದೆ. ಇದು ತೀವ್ರಗೊಂಡರೆ(ಗಂಭೀರವಾದರೆ)ಅಥವಾ ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳದೇ ಹೋದರೆ, ಸರಿಪಡಿಸಲಾಗದ ನ್ಯೂರಾನ್ ಹಾನಿ ಏರ್ಪಡುತ್ತದೆ. ಕಾಯಿಲೆಯ ರೋಗಲಕ್ಷಣಗಳಿರುವವರ ಪೈಕಿ, 30% ಮರಣ ಸಂದರ್ಭಗಳೇರ್ಪಡುತ್ತವೆ. ಜೀವಾಪಾಯದಿಂದ ಪಾರಾದವರ ಪೈಕಿ 30%ನಿಂದ 60%ವರೆಗಿನವರಲ್ಲಿ, ಅವರು ತಕ್ಷಣದ ರೋಗಲಕ್ಷಣಗಳಿಂದ ಚೇತರಿಸಿಕೊಂಡರೂ, ಕಾಯಿಲೆಯ ದೀರ್ಘಾವಧಿ ನರರೋಗ ಸಂಬಂಧಿತ ಉಲ್ಬಣಗಳು ಕಾಣಿಸಿಕೊಂಡು ಶಿಕ್ಷಣ, ಉದ್ಯೋಗ, ಮತ್ತು ಸಾಮಾಜಿಕ ಸಂಬಂಧಗಳು ಒಳಗೊಂಡಂತೆ, ಅವರ ಜೀವನದ ಗುಣಮಟ್ಟವನ್ನು ಬಾಧಿಸುತ್ತದೆ.
ಅತ್ಯಂತ ಗಂಭೀರವಾದ ಈ ಕಾಯಿಲೆಯು ಭಾರತದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಸಾಂಕ್ರಾಮಿಕಗಳನ್ನುಂಟು ಮಾಡಿದೆ. ಹವಾಮಾನವೂ ರೋಗದ ಪ್ರಸರಣಕ್ಕೆ ಮುಖ್ಯ ಕಾರಣವಾಗಿದ್ದು, ವೈರಾಣುವಿನ ಸಾಂದ್ರತೆಯು ಅತಿಗರಿಷ್ಟದಲ್ಲಿರುವಂತಹ ಬೇಸಿಗೆಯ ಉತ್ತರಾರ್ಧದಲ್ಲಿ ಮತ್ತು ಮಳೆಗಾಲದಲ್ಲಿ ಭಾರತದಾದ್ಯಂತದ ಸಮಶೀತೋಷ್ಣ ಪ್ರದೇಶಗಳಲ್ಲಿ ಇದರ ಅಪಾಯ ಹೆಚ್ಚಾಗುತ್ತದೆ.
ಜೆಇ ನಿರೋಧಕ ಲಸಿಕೀಕರಣದ ಅಗತ್ಯದ ಬಗ್ಗೆ ಮಾತನಾಡುತ್ತಾ, ಬೆಂಗಳೂರಿನ ಅಪೋಲೋ ಹಾಸ್ಪಿಟಲ್ ಮತ್ತು ರುತೀಕ್ ಚಿಲ್ಡ್ರನ್ ಕೇರ್ ನ ಮಕ್ಕಳರೋಗ ತಜ್ಞರಾದ ಡಾ. ರಮೇಶ್ ಸುನ್ಗಲ್, “ಕರ್ನಾಟಕದಲ್ಲಿ ಜೆಇ ಕುರಿತಾದ ಅರಿವು ಅತ್ಯಂತ ಕಡಿಮೆಯಾಗಿದೆ. ಇದರೊಂದಿಗೆ ಸಂಬಂಧಿಸಿರುವ ವಾಂತಿ ಮತ್ತು ಹೊಟ್ಟೆನೋವು ಒಳಗೊಂಡಂತೆ, ಆರಂಭಿಕ ಪ್ರಬಲವಾದ ರೋಗಲಕ್ಷಣಗಳನ್ನು ಇತರ ಕಾಯಿಲೆಗಳಿಗೆ ತಪ್ಪು ತಿಳಿದುಕೊಳ್ಳಲ್ಪಡುವುದರಿಂದ ಆರಂಭಿಕ ಹಂತಗಳಲ್ಲಿ ಅನೇಕ ಸಂದರ್ಭಗಳು ಪತ್ತೆಯಾಗದೆ ಹೋಗುತ್ತವೆ. ವಾರ್ಷಿಕವಾಗಿ, ಮಕ್ಕಳಲ್ಲಿ ನಾವು ನೋಡುವ ಹೆಚ್ಚಿನ ಸಂದರ್ಭಗಳು ಮಳೆಗಾಲದಲ್ಲೇ ಬರುತ್ತವೆ. ಗಂಭೀರ ಸಂದರ್ಭಗಳು ವಿಪರೀತ ಜ್ವರ, ಸೆಳವು, ಮಂದ ದೃಷ್ಟಿ, ಮತ್ತು ಕೋಮಾ ಮುಂತಾದವನ್ನು ಒಳಗೊಂಡಿರುತ್ತದೆ. ಇಂತಹ ಸಂಕೀರ್ಣತೆಗಳನ್ನು ತಡೆಗಟ್ಟಲು, ನಿರೋಧಕ ಲಸಿಕೀಕರಣದ ಪೂರೈಕೆಯನ್ನು ಪ್ರೋತ್ಸಾಹಿಸುವುದು ಅತ್ಯಾವಶ್ಯಕವಾಗಿದೆ. ರೋಗವನ್ನು ತಡೆಗಟ್ಟಲು, ಲಸಿಕೆಗಳು ಸುರಕ್ಷಿತವಾದ ಮತ್ತು ಪರಿಣಾಮಕಾರಿಯಾದ ಪುರಾವೆ-ಆಧಾರಿತ ಆಯ್ಕೆಗಳಾಗಿವೆ. ವ್ಯಾಪಕ ನಿರೋಧಕ ಲಸಿಕೀಕರಣವು ವಿವಿಧ ಜನಸಂಖ್ಯೆಗಳಾದ್ಯಂತ ರೋಗದ ಹೊರೆಯನ್ನು ಕಡಿಮೆ ಮಾಡಲು ನೆರವಾಗುತ್ತವೆ.”ಎಂದರು.
ಪ್ರಸ್ತುತ ಜೆಇ ನಿರ್ವಹಣೆ ಮತ್ತು ಚಿಕಿತ್ಸೆಯು ಹೆಚ್ಚಾಗಿ ರೋಗಲಕ್ಷಣ ನಿರ್ವಹಣೆಯ ಮೇಲೆ ಕೇಂದ್ರೀಕೃತವಾಗಿದ್ದು ಪರಿಸ್ಥಿತಿಯ ವ್ಯತಿರಿಕ್ತ ಪರಿಣಾಮಗಳನ್ನು ಮಿತಗೊಳಿಸುವುದರ ಮೇಲಿರುವುದರಿಂದ, ಒಂದು ತಂತ್ರವಾಗಿ, ಪರಿಣಾಮಕಾರಿಯಾದ ನಿಯಂತ್ರಣಕ್ಕೆ ಲಸಿಕೀಕರಣದ ಪ್ರಾಮುಖ್ಯತೆಯು ಹೆಚ್ಚಾಗುತ್ತದೆ. ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಬರುವ ಭಾರತದ ಸಾರ್ವತ್ರಿಕ ನಿರೋಧಕ ಲಸಿಕೀಕರಣ ಯೋಜನೆಯು ಆಯ್ದ ಪ್ರಸರಣ ಸಂಭಾವ್ಯ ಜಿಲ್ಲೆಗಳಲ್ಲಿ ತನ್ನ ಉಪ-ರಾಷ್ಟ್ರೀಯ ಕಾರ್ಯಕ್ರಮವಾಗಿ ಜಪಾನೀಸ್ ಎನ್ಸಫಲೈಟಿಸ್‍ಅನ್ನು ಒಳಗೊಂಡಿದೆ. ಜೆಇ ಲಸಿಕೆಯು ಒಂಭತ್ತು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ಮಕ್ಕಳಿಗೆ, ಅದರಲ್ಲೂ ನಿರ್ದಿಷ್ಟವಾಗಿ ಸಂಭಾವ್ಯತೆಯ ಅಪಾಯ ಹೆಚ್ಚಾಗಿರುವ ಗುಂಪುಗಳಿಗೆ ನೀಡಲು ಸೂಚಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ(WHO) ಮತ್ತು ತಜ್ಞರ ಪುರಾವೆ-ಆಧಾರಿತ ನಿರೋಧಕ ಲಸಿಕೀಕರಣ ಮಾರ್ಗಸೂಚಿಗಳ ಪ್ರಕಾರ, ಇದನ್ನು ಅಪಾಯ ಸಂಭಾವ್ಯತೆ ಇರುವ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಕಾರ್ಯಕರ್ತರುಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರಯಾಣ ಬೆಳೆಸುವವರಿಗೂ ಸೂಚಿಸಲಾಗಿದೆ. ಈ ಲಸಿಕೆಗಳು, ಅಧಿಕ ಪ್ರೋಟೀನ್ ಪ್ರಮಾಣ ಹಾಗೂ ದೀರ್ಘಾವಧಿ ನಿರೋಧಕ ಶಕ್ತಿ ಒಳಗೊಂಡಂತೆ, ಹಲವಾರು ಪ್ರಯೋಜನಗಳನ್ನು ಹೊಂದಿದೆ.
ಇದನ್ನೂ ಓದಿ: ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಚಿಯಾ ಬೀಜಗಳಿಂದ ಸಿಗುತ್ತೆ ಪರಿಹಾರ
ಅಬಾಟ್ ಇಂಡಿಯಾದ ವೈದ್ಯಕೀಯ ವ್ಯವಹಾರಗಳ ನಿರ್ದೇಶಕರಾದ ಡಾ. ಜೆಜೋ ಕರಣ್‌ಕುಮಾರ್, “ಪ್ರಸರಣ ಸಂಭಾವ್ಯತೆಯ ಪ್ರದೇಶಗಳಲ್ಲಿ ಅಧಿಕ ಪ್ರಚಲಿತತೆ ಇದ್ದರೂ ಜಪಾನೀಸ್ ಎನ್ಸಫಲೈಟಿಸ್ ಕುರಿತಾದ ಅರಿವು ಅತ್ಯಂತ ಕಡಿಮೆ. ಲಭ್ಯವಿರುವ ಲಸಿಕೆ ಆಯ್ಕೆಗಳ ಬಗ್ಗೆ ಜಾಗೃತಿ ಹೆಚ್ಚಿಸುವ ಸಮಯದಲ್ಲೇ ಜ್ಞಾನದಲ್ಲಿರುವ ಅಂತರವನ್ನು ಕಡಿಮೆ ಮಾಡುವುದೂ ಕೂಡ ಭಾರತೀಯ ಜನಸಂಖ್ಯೆಯಾದ್ಯಂತ ನಿರೋಧಕ ಲಸಿಕೀಕರಣವನ್ನು ವರ್ಧಿಸುವುದಕ್ಕೆ ಅತಿಮುಖ್ಯವಾದುದಾಗಿದೆ. ಇದರ ಜೊತೆಗೆ, ಪೋಷಕರಿಗೆ ಹಾಗೂ ಶುಶ್ರೂಷಕರಿಗೆ ಪುರಾವೆ-ಆಧಾರಿತ ಲಸಿಕೆ ಶಿಫಾರಸುಗಳನ್ನು ಮಾಡುವುದಕ್ಕೆ ಆರೋಗ್ಯ ಶುಶ್ರೂಷಾ ಕಾರ್ಯಕರ್ತರನ್ನು ಜ್ಞಾನದೊಂದಿಗೆ ಸಜ್ಜುಗೊಳಿಸುವುದೂ ಬಹಳ ಮುಖ್ಯವಾದುದು. ಬಾಲ್ಯಾವಸ್ಥೆಯಲ್ಲಿ ಹೆಚ್ಚಿನ ಲಸಿಕೀಕರಣ ಪೂರೈಕೆಯಿಂದ ಉತ್ತಮ ರಕ್ಷಣೆ ದೊರಕುವುದು ಖಾತರಿಯಾಗಿ, ಆ ಮೂಲಕ ಜೀವನದ ಜೀವಿತಾವಧಿ ಹಾಗೂ ಗುಣಮಟ್ಟವೂ ಹೆಚ್ಚಾಗುತ್ತದೆ.”ಎಂದರು.
ಭಾರತದ ಫಿಸಿಶಿಯನ್‍ಗಳ ಸಂಘ(Association of Physicians of India) ಮಾಡುವ ಲಸಿಕೀಕರಣ ಶಿಫಾರಸುಗಳು ಮುಂತಾದ ತಜ್ಞರ ಗುಂಪುಗಳ ಶಿಫಾರಸುಗಳು, ಅಬಾಟ್‍ನೊಂದಿಗಿನ ಸಹಯೋಗದೊಡನೆ, ಅಗತ್ಯವಾದ ಲಸಿಕೆಗಳು, ಸೂಚನೆಗಳು ಹಾಗೂ ಶೆಡ್ಯೂಲ್‍ಗಳ ಕುರಿತು ವಿಶ್ವಸನೀಯ ಆರೋಗ್ಯ ಮಾಹಿತಿಯನ್ನು ಹಂಚಿಕೊಳ್ಳುವಲ್ಲಿ ವೈದ್ಯರುಗಳಿಗೆ ಬೆಂಬಲ ಒದಗಿಸುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.