How to reduce bad cholesterol : ನಿರಂತರವಾಗಿ ಹದಗೆಡುತ್ತಿರುವ ಆಹಾರ ಮತ್ತು ಜೀವನಶೈಲಿಯಿಂದಾಗಿ, ಅಧಿಕ ಕೊಲೆಸ್ಟ್ರಾಲ್ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದೆ.ನಮ್ಮ ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್ ಕಂಡುಬರುತ್ತದೆ. ಒಂದು ಒಳ್ಳೆಯ ಕೊಲೆಸ್ಟ್ರಾಲ್ (HDL) ಮತ್ತು ಇನ್ನೊಂದು ಕೆಟ್ಟ ಕೊಲೆಸ್ಟ್ರಾಲ್ (LDL).ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಅದನ್ನು ಅಧಿಕ ಕೊಲೆಸ್ಟ್ರಾಲ್ ಎನ್ನುತ್ತಾರೆ.ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುವುದರಿಂದ,ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ.ಅಂತಹ ಪರಿಸ್ಥಿತಿಯಲ್ಲಿ,ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ.ದೇಹದಲ್ಲಿ ಹೆಚ್ಚಿದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು,ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು.ಇದಲ್ಲದೇ, ಕೆಲವು ಮನೆಮದ್ದುಗಳ (Home Remedies For Bad Cholesterol) ಸಹಾಯದಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. 


COMMERCIAL BREAK
SCROLL TO CONTINUE READING

ಅಧಿಕ ಕೊಲೆಸ್ಟ್ರಾಲ್‌ ಕರಗಿಸಲು ಸೊಂಪು : 
ದೇಹದಲ್ಲಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸೊಂಫಿನ ನೀರು ತುಂಬಾ ಪ್ರಯೋಜನಕಾರಿ.ಸೊಂಫಿನಲ್ಲಿ ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತವೆ.ಇದು ನಮ್ಮ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.ಅಲ್ಲದೇ ಇದು ಹೇರಳವಾದ ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುತ್ತದೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ,ಇದರಲ್ಲಿ ಪೊಟ್ಯಾಸಿಯಮ್ ಕೂಡಾ ಕಂಡುಬರುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಅಷ್ಟೇ ಅಲ್ಲ,ಇದರ ನಿಯಮಿತ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.


ಇದನ್ನೂ ಓದಿ : ನಿಮ್ಮ ದೇಹದಲ್ಲಿ ಹೀಗಾಗುತ್ತಿದ್ದರೆ ಅರ್ಥ ಮಾಡಿಕೊಳ್ಳಿ ಬ್ಲಡ್ ಶುಗರ್ ಲೋ ಆಗಿದೆ ! ಇದು ಬಹಳ ಅಪಾಯಕಾರಿ


ಸೊಂಫು ನೀರನ್ನು ತಯಾರಿಸುವುದು ಹೇಗೆ? : 
ಸೊಂಫಿನ ನೀರನ್ನು ತಯಾರಿಸಲು, ಒಂದು ಲೋಟ ನೀರಿನಲ್ಲಿ 2 ಚಮಚ ಸೊಂಫು ಅನ್ನು ಸೇರಿಸಿ ಮತ್ತು ರಾತ್ರಿಯಿಡೀ ನೆನೆಸಿ.ಬೆಳಿಗ್ಗೆ ಎದ್ದ ತಕ್ಷಣ ಈ ನೀರನ್ನು ಫಿಲ್ಟರ್ ಮಾಡಿ ಮತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸಿ.ಬೇಕಿದ್ದರೆ ಈ ನೀರನ್ನು ಕುದಿಸಿಯೂ ಸೇವಿಸಬಹುದು. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ .


ಇದನ್ನೂ ಓದಿ : ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವ ಪಾನೀಯಗಳಿವು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.