ಬೇರೇನೂ ಬೇಡ, ಈ ನೀರನ್ನು ಹೀಗೆಯೇ ಕುಡಿದು ನೋಡಿ ! ಹೊರಗೆ ಚಾಚಿಕೊಂಡಿರುವ ಹೊಟ್ಟೆ ಒಂದೇ ವಾರದಲ್ಲಿ ಸಣ್ಣಗಾಗುವುದು
ಕೆಲವು ನೈಸರ್ಗಿಕ ವಸ್ತುಗಳ ಸಹಾಯದಿಂದ, ಹೊಟ್ಟೆ ಮತ್ತು ಸೊಂಟದ ಸುತ್ತ ಸೇರಿಕೊಂಡಿರುವ ಬೊಜ್ಜನ್ನು ಸುಲಭವಾಗಿ ಕರಗಿಸಬಹುದು.
Drink to reduce belly fat : ಹೊಟ್ಟೆಯ ಬೊಜ್ಜು ಹೆಚ್ಚಾಗುತ್ತಾ ಹೋದಂತೆ ಹೊಟ್ಟೆ ಮುಂದೆ ಚಾಚಿಕೊಳ್ಳುತ್ತದೆ.ಆಗ ಪುರುಷರೇ ಆಗಲಿ, ಮಹಿಳೆಯರೇ ಆಗಲಿ ದೇಹ ಸೌಂದರ್ಯ ಸಂಪೂರ್ಣವಾಗಿ ಹಾಳಾಗಿ ಬಿಡುತ್ತದೆ.ಇನ್ನು ಕೆಲವರ ದೇಹದ ಬೇರೆ ಎಲ್ಲಾ ಭಾಗಗಳು ಸಣ್ಣ ಇರುತ್ತದೆ.ಆದರೆ ಹೊಟ್ಟೆ ಮತ್ತು ಸೊಂಟದ ಭಾಗ ವಿಪರೀತ ದಪ್ಪ ಇರುತ್ತದೆ.ಅಂದರೆ ಆ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೊಜ್ಜು ಶೇಖರಣೆಯಾಗಿರುತ್ತದೆ.ದಿನವಿಡೀ ಕುಳಿತು ಡೆಸ್ಕ್ ಕೆಲಸ ಮಾಡುವುದು, ವ್ಯಾಯಾಮ ಮಾಡದಿರುವುದು ಮತ್ತು ಆಹಾರದ ಬಗ್ಗೆ ಕಾಳಜಿ ವಹಿಸದಿರುವುದೇ ಹೀಗಾಗುವುದಕ್ಕೆ ಕಾರಣ.
ಸೊಂಟದ ಸುತ್ತಲಿನ ಬೊಜ್ಜು :
ಸೊಂಟದ ಸುತ್ತ ಇರುವ ಈ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡಲು,ವ್ಯಾಯಾಮದ ಜೊತೆಗೆ ಆಹಾರದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು.ಕೆಲವು ನೈಸರ್ಗಿಕ ವಸ್ತುಗಳ ಸಹಾಯದಿಂದ,ಈ ಬೊಜ್ಜನ್ನು ಕರಗಿಸುವ ಪ್ರಯತ್ನ ಮಾಡಬೇಕು. ಯಾವುದೇ ಅಡ್ಡ ಪರಿಣಾಮವಿಲ್ಲದೆ ಫ್ಯಾಟ್ ಬರ್ನ್ ಮಾಡುವ ಸುಲಭ ವಿಧಾನ ಇಲ್ಲಿದೆ.
ಸೋಂಫು ನೀರು :
ಚಾಚಿಕೊಂಡಿರುವ ಹೊಟ್ಟೆಯನ್ನು ಕಡಿಮೆ ಮಾಡಲು ಸೋಂಫಿನ ನೀರನ್ನು ಕುಡಿಯಬಹುದು.ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೋಂಫು ನೀರನ್ನು ಕುಡಿಯುತ್ತಾ ಬಂದರೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ನೀರು ಸೊಂಟ ಮತ್ತು ಹೊಟ್ಟೆಯ ಭಾಗದಲ್ಲಿ ಸಂಗ್ರಹವಾಗಿರುವ ಮೊಂಡುತನದ ಕೊಬ್ಬನ್ನು ಬಹಳ ಬೇಗನೆ ಕಡಿಮೆ ಮಾಡುತ್ತದೆ.
ಸೋಂಫು ನೀರನ್ನು ತಯಾರಿಸುವುದು ಹೇಗೆ :
ಒಂದು ಪಾತ್ರೆಯಲ್ಲಿ ಅರ್ಧ ಲೀಟರ್ ನೀರನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ಚಮಚ ಸೋಂಫು ಬೀಜಗಳನ್ನು ಸೇರಿಸಿ. ಈ ನೀರು ಒಂದು ಕಪ್ ನಷ್ಟಾಗುವವರೆಗೆ ಕುದಿಯಲು ಬಿಡಿ. ಈಗ ಅದನ್ನು ಶೋಧಿಸಿ ಅದರಲ್ಲಿ ಒಂದು ನಿಂಬೆಹಣ್ಣಿನ ರಸವನ್ನು ಹಿಂಡಿ ಕುಡಿಯಿರಿ.
ಸೋಂಫು ಬೀಜಗಳಲ್ಲಿ ಅಧಿಕ ಫೈಬರ್ ಅಂಶವಿದೆ.ಅದು ನಿಮ್ಮ ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಚಯಾಪಚಯ ಸರಿಯಾಗಿ ಆಗುವುದರಿಂದ ತೂಕವನ್ನು ಕಳೆದುಕೊಳ್ಳಲು ಇದು ಸುಲಭ ಮಾರ್ಗವಾಗಿದೆ.
ಇದನ್ನೂ ಓದಿ : ಶ್ವಾಸಕೋಶದ ಆರೋಗ್ಯದ ಮೇಲೆ ಪರಿಣಾಮ ಬೀರುವ ಗುಪ್ತ ಅಪಾಯಗಳ ಬಗ್ಗೆ ವೈದ್ಯರು ಏನ್ ಹೇಳ್ತಾರೆ..!
ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಗುಣಗಳಿಂದ ಸಮೃದ್ಧವಾಗಿದೆ.ಸೋಂಫು ನೀರನ್ನು ಕುಡಿಯುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ದೇಹದ ನಿರ್ವಿಶೀಕರಣದ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುವ ಮೂಲಕ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.