Tips control diabetes : ಮಧುಮೇಹದ ಕಾಯಿಲೆ ಬಂತೆಂದರೆ ಜೀವನದುದ್ದಕ್ಕೂ ಆರೋಗ್ಯದ  ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಈ ರೋಗದಲ್ಲಿ  ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು, ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದು ಮತ್ತು ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸುವುದು ಬಹಳ ಮುಖ್ಯವಾಗಿರುತ್ತದೆ. ಇವುಗಳಲ್ಲಿ ಸಣ್ಣ ತಪ್ಪಾದರೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಧುಮೇಹ ರೋಗಿಗಳು ಸಿಹಿ ತಿನ್ನಲೇಬಾರದು. ಓದೀಗ ಹಬ್ಬದ ಸಡಗರ.  ಸಿಹಿ ತಿನ್ನದೇ ಇರುವೂ ಹೇಗೆ?  ಸಿಹಿ ತಿಂಡಿಗಳನ್ನು ತಿಂದ ಮೇಲೆ ಖಂಡಿತವಾಗಿಯೂ ರಕ್ತದಲ್ಲಿನ ಸಕ್ಕರೆ  ಅಂಶ ಹೆಚ್ಚಾಗಿರುತ್ತದೆ.  ಈ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳನ್ನು ಬಳಸಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಬಹುದು.   


COMMERCIAL BREAK
SCROLL TO CONTINUE READING

ಮೆಂತ್ಯೆ :
ಸಕ್ಕರೆ ರೋಗಿಗಳಿಗೆ ಮೆಂತ್ಯೆ  ತುಂಬಾ ಪ್ರಯೋಜನಕಾರಿಯಾಗಿದೆ. ಮೆಂತ್ಯೆ  ಬೀಜಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಒಂದು ಚಮಚ ಮೆಂತ್ಯೆ  ಬೀಜಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೀಜಗಳೊಂದಿಗೆ ನೀರನ್ನು ಕುಡಿಯಿರಿ. ಅದನ್ನು ಕುಡಿದ ನಂತರ ಅರ್ಧ ಘಂಟೆಯವರೆಗೆ ಬೇರೆ ಏನನ್ನೂ ತಿನ್ನಬಾರದು.  


ಇದನ್ನೂ ಓದಿ : Diabetes Control Tips : ಮಧುಮೇಹ ನಿಯಂತ್ರಣಕ್ಕೆ ದೇಹದ ಈ ಭಾಗದಲ್ಲಿ ಮಸಾಜ್ ಮಾಡಿ


ಬೆಳ್ಳುಳ್ಳಿ :
ಬೆಳ್ಳುಳ್ಳಿಯಲ್ಲಿ ಅನೇಕ ಆಯುರ್ವೇದ ಗುಣಗಳು ಕಂಡುಬರುತ್ತವೆ. ಮಧುಮೇಹ ರೋಗಿಗಳು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ, 2-3 ಬೆಳ್ಳುಳ್ಳಿ ಎಸಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿದು ತಿನ್ನಬೇಕು. ಹೀಗೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಮತ್ತು ಕೊಲೆಸ್ಟ್ರಾಲ್ ಎರಡೂ ನಿಯಂತ್ರಣಕ್ಕೆ ಬರುತ್ತದೆ. 


ನೇರಳೆ ಹಣ್ಣಿನ ಬೀಜಗಳು : 
ಮಧುಮೇಹ ನಿಯಂತ್ರಣಕ್ಕೆ ವೈದ್ಯರು ಸಹ ನೇರಳೆ ಹಣ್ಣು ಸೇವಿಸುವಂತೆ ಶಿಫಾರಸ್ಸು ಮಾಡುತ್ತಾರೆ. ಸಕ್ಕರೆ ರೋಗಿಗಳಿಗೆ ನೇರಳೆ ಹಣ್ಣು ರಾಮಬಾಣ ಎಂದರೆ ತಪ್ಪಲ್ಲ.  ನೇರಳೆ ಹಣ್ಣಿನ ಬೀಜಗಳನ್ನು ಆಯುರ್ವೇದ ಚಿಕಿತ್ಸೆಯಲ್ಲಿಯೂ ಬಳಸಲಾಗುತ್ತದೆ.  ನೇರಳೆ ಹಣ್ಣಿನ ಬೀಜಗಳನ್ನು ಒಣಗಿಸಿ ಪುಡಿಮಾಡಿ ಇಟ್ಟುಕೊಳ್ಳಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಈ ಪುಡಿಯನ್ನು ಬೆರೆಸಿ ಕುಡಿಯಬೇಕು. ಹೀಗೆ ಮಾಡುತ್ತಾ ಬಂದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.  


ಇದನ್ನೂ ಓದಿ : White Onion: ಮಧುಮೇಹಕ್ಕೆ ರಾಮಬಾಣ ಬಿಳಿ ಈರುಳ್ಳಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ