Hair Care tips in Kannada : ಕೂದಲು ಉದುರುವಿಕೆ ಸಮಸ್ಯೆಗೆ ವಿವಿಧ ಕಾರಣಗಳಿವೆ. ನಾವು ಸೇವಿಸುವ ಆಹಾರ ಪದಾರ್ಥಗಳು, ಒತ್ತಡ, ಮಾಲಿನ್ಯ, ಜಂಕ್ ಫುಡ್ ಗಳಂತಹ ಹಲವು ಅಂಶಗಳಿಂದಲೂ ಕೂದಲು ಉದುರುತ್ತದೆ. ಆದರೆ ಅನೇಕ ಜನರು ಕೂದಲು ಉದುರುವಿಕೆಯ ಸಮಸ್ಯೆಯನ್ನು ತಡೆಯಲು ಮತ್ತು ಉದ್ದ ಹಾಗೂ ದಪ್ಪ ಪಡೆಯಲು ಹಲವಾರು ವಿಧಾನಗಳನ್ನು ಅನುಸರಿಸಿ ವಿಫಲರಾಗುತ್ತಿದ್ದಾರೆ.. 


COMMERCIAL BREAK
SCROLL TO CONTINUE READING

ಅಷ್ಟೇ ಅಲ್ಲ, ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರೀತಿಯ ಕೂದಲು ತೈಲಗಳು ಮತ್ತು ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಇನ್ನು ಕೆಲವರು ಮನೆಯಲ್ಲಿಯೇ ನೈಸರ್ಗಿಕ ಮನೆಮದ್ದುಗಳನ್ನು ಅನುಸರಿಸುತ್ತಾರೆ. ಆದರೆ, ಕೂದಲು ದಟ್ಟವಾಗಿ ಬೆಳೆಯುವುದಿಲ್ಲ. 


ಇದನ್ನೂ ಓದಿ:ಎಳನೀರು ಆರೋಗ್ಯಕ್ಕೆ ವರದಾನಕ್ಕಿಂತ ಕಡಿಮೆಯಿಲ್ಲ; ಇದನ್ನ ಕುಡಿಯುವ ಸಮಯ & ಪ್ರಯೊಜನಗಳ ಬಗ್ಗೆ ತಿಳಿಯಿರಿ


ಕೂದಲು ದಪ್ಪ ಮತ್ತು ವೇಗವಾಗಿ ಬೆಳೆಯಬೇಕು, ಅದಕ್ಕಾಗಿ ಏನು ಮಾಡಬೇಕು..? ಬನ್ನಿ ನಿಮ್ಮ ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ನಾವು ನೀಡುತ್ತೇವೆ.. ಕೂದಲು ಬೇಗ ಬೆಳೆಯಲು ಬಯಸುವವರು ಮೆಂತ್ಯ ಸೊಪ್ಪಿನ ಜೊತೆಗೆ ಮೆಂತ್ಯವನ್ನು ಸೇರಿಸಿ ಪೇಸ್ಟ್ ಬಳಸಬಹುದು..


ಹೌದು.. ಮೊದಲು ಮೆಂತ್ಯ ಬೀಜಗಳನ್ನು ತೆಗೆದುಕೊಂಡು ಕರಿಬೇವಿನ ಎಲೆಗಳು ಮತ್ತು ಆಮ್ಲಾ ತುಂಡುಗಳನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮೂರನ್ನೂ ಮಿಕ್ಸ್ ಮಾಡಿ ನಯವಾದ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ, ಒಂದು ಗಂಟೆ ಹಾಗೆ ಬಿಡಿ. ಅದರ ನಂತರ, ಯಾವುದೇ ಶಾಂಪೂ ಬಳಸಿ ಸ್ನಾನ ಮಾಡಿ. ವಾರದಲ್ಲಿ ಎರಡರಿಂದ ಮೂರು ಬಾರಿ ಈ ಪರಿಹಾರವನ್ನು ಮಾಡುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.