Fenugreek water Benefits: ಮೆಂತ್ಯ ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇವುಗಳನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಮಧುಮೇಹ ರೋಗಿಗಳು ಮೆಂತ್ಯ ಸೇವಿಸುವುದರಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಮೆಂತ್ಯ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಿರುವವರು ಸಹ ಈ ಮೆಂತ್ಯ ಬೀಜದ ನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.  


COMMERCIAL BREAK
SCROLL TO CONTINUE READING

ಮೆಂತ್ಯ ನೀರು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುವ ಹಲವು ಗುಣಗಳನ್ನು ಹೊಂದಿದೆ. ಕೆಲವು ಅಧ್ಯಯನಗಳ ಪ್ರಕಾರ, ಮೆಂತ್ಯ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಮೆಂತ್ಯ ಬೀಜಗಳಲ್ಲಿನ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಬ್ಲಡ್ ಶುಗರ್‌ ಅನ್ನು ಕಂಟ್ರೋಲ್‌ ಮಾಡುತ್ತದೆ. ಇದು ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. 


ಇದನ್ನೂ ಓದಿ:  Hot Water: ಪ್ರತಿದಿನ ಬೆಳಗ್ಗೆ ಬಿಸಿನೀರು ಕುಡಿದ್ರೆ ಏನಾಗುತ್ತೆ ಗೊತ್ತಾ..?


ಕೆಲವು ಅಧ್ಯಯನಗಳು ಮೆಂತ್ಯ ನೀರು ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ. ಮೆಂತ್ಯ ನೀರು ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


ಮೆಂತ್ಯ ನೀರನ್ನು ತಯಾರಿಸುವ ವಿಧಾನ:


ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿನಲ್ಲಿ ಒಂದು ಚಮಚ ಮೆಂತ್ಯ ಕಾಳುಗಳನ್ನು ಹಾಕಿ ನೆನೆಸಿಡಿ. ಬೆಳಿಗ್ಗೆ ಎದ್ದ ಬಳಿಕ ಹಳಸಿದ ಬಾಯಲ್ಲಿ ಈ ನೀರನ್ನು ಕುಡಿಯಿರಿ. ರುಚಿಗೆ ಸ್ವಲ್ಪ ನಿಂಬೆ ರಸ ಕೂಡ ಸೇರಿಸಬಹುದು.


ಇದನ್ನೂ ಓದಿ:  ಶುಂಠಿಯಲ್ಲಿದೆ ಮಧುಮೇಹಕ್ಕೆ ಮದ್ದು... ಇದರ ಜೊತೆಗೆ ಸೇವಿಸಿದರೆ ಕೆಲವೇ ನಿಮಿಷದಲ್ಲಿ ಕಂಟ್ರೋಲ್‌ಗೆ ಬರುತ್ತೆ ಬ್ಲಡ್‌ ಶುಗರ್!


ಸೂಚನೆ: ಮೆಂತ್ಯ ನೀರು ಮಧುಮೇಹ ಚಿಕಿತ್ಸೆಗೆ ಪರ್ಯಾಯವಲ್ಲ. ಮಧುಮೇಹದಿಂದ ಬಳಲುತ್ತಿದ್ದರೆ ನಿಮ್ಮ ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿ. ಮೆಂತ್ಯ ನೀರನ್ನು ಕುಡಿಯುವುದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ನಿಮಗೆ ವೈದ್ಯರೊಂದಿಗೆ ಮಾತನಾಡಿ ಬಳಿಕ ಮುಂದುವರೆಸಿ. ಈ ಮಾಹಿತಿ ಮನೆಮದ್ದುಗಳನ್ನು ಆಧರಿಸಿದ್ದು ಜೀ ಕನ್ನಡ ನ್ಯೂಸ್‌ ಇದಕ್ಕೆ ಯಾವುದೇ ರೀತಿಯಲ್ಲೂ ಹೊಣೆಯಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.