ಬೆಂಗಳೂರು : ಎಲ್ಲಾ ಋತುವಿನಲ್ಲಿಯೂ ಕೂದಲಿನ ಒಂದಲ್ಲ ಒಂದು ರೀತಿಯ ಸಮಸ್ಯೆ ಕಾಡುತ್ತದೆ. ಸಾಮಾನ್ಯವಾಗಿ ಕೂದಲಿನ ಸಮಸ್ಯೆಗೆ ಮನೆ ಮದ್ದುಗಳನ್ನು ಬಳಸುವುದೇ ಹೆಚ್ಚು.ಕೂದಲಿನ ಆರೋಗ್ಯ ಕಾಪಾಡುವ ಮನೆ ಮದ್ದಿನಲ್ಲಿ ಸಾಸಿವೆ ಎಣ್ಣೆ ಬಹಳ  ಮುಖ್ಯವಾದುದು. ಸಾಸಿವೆ ಎಣ್ಣೆಯಲ್ಲಿ ಹಲವಾರು ಔಷಧೀಯ ಗುಣಗಳಿದ್ದು ಇದು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ.


COMMERCIAL BREAK
SCROLL TO CONTINUE READING

ಸಾಸಿವೆ ಎಣ್ಣೆಯೊಂದಿಗೆ ಮೆಂತ್ಯೆ ಕಾಳುಗಳನ್ನು ಬೆರೆಸಿದರೆ,ಅದರ ಗುಣ ದುಪ್ಪಟ್ಟಾಗುವುದು. ಸಾಸಿವೆ ಎಣ್ಣೆ ಮತ್ತು ಮೆಂತ್ಯವನ್ನು ಬೆರೆಸಿ ಹಚ್ಚುವುದರಿಂದ ಕೂದಲಿಗೆ ಆಗುವ ಲಾಭ ಯಾವುದು? 


ಇದನ್ನೂ ಓದಿ : Home Remedies For Gout: ಕೀಲು ನೋವನ್ನು ನಿಮಿಷಗಳಲ್ಲಿ ಗುಣವಾಗಿಸುತ್ತೆ ಈ ಪಾನೀಯ !


ನೆತ್ತಿಯ ಸೋಂಕನ್ನು ತೆಗೆದು ಹಾಕುತ್ತದೆ : 
ಸಾಸಿವೆ ಎಣ್ಣೆಗೆ ಮೆಂತ್ಯೆಯನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ನೆತ್ತಿಯ ಮೇಲಿನ ಸೋಂಕಿನ ಸಮಸ್ಯೆ ನಿವಾರಣೆಯಾಗುತ್ತದೆ.ಸಾಸಿವೆ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಮೆಂತ್ಯೆಯು ಶುದ್ಧೀಕರಣ ಗುಣಗಳನ್ನು ಹೊಂದಿದೆ. ಇದು ಕೂದಲನ್ನು ಆಳವಾಗಿ ಸ್ವಚ್ಛಗೊಳಿಸಬಹುದು.ಇದನ್ನು ನಿಮ್ಮ ಕೂದಲಿಗೆ ಕೆಲವು ವಾರಗಳ ಕಾಲ ಹಚ್ಚಿಕೊಂಡರೆ ತಲೆಹೊಟ್ಟು ನಿವಾರಣೆಯಾಗುತ್ತದೆ. 


ಕೂದಲು ಉದುರುವಿಕೆಯಿಂದ ಮುಕ್ತಿ : 
ಮೆಂತ್ಯೆ ಕೂದಲನ್ನು ಬಲಪಡಿಸುವ ಗುಣವನ್ನು ಹೊಂದಿದೆ.ಅದನ್ನು ಕೂದಲಿಗೆ ಹಚ್ಚಿದರೆ ಕೂದಲು ಬೇರಿನಿಂದಲೇ ಗಟ್ಟಿಯಾಗುತ್ತದೆ. ಮೆಂತ್ಯೆಯನ್ನು ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಉತ್ತಮಗೊಳ್ಳುವುದಲ್ಲದೆ, ಕೂದಲು ಉದುರುವುದನ್ನು ಕೂಡಾ ತಡೆಯುತ್ತದೆ. 


ಇದನ್ನೂ ಓದಿ : ಈ ಕಪ್ಪು ಒಣ ಹಣ್ಣನ್ನು ರಾತ್ರಿಯಿಡೀ ನೆನೆಸಿದ ನೀರು ಕುಡಿದ್ರೆ ಶುಗರ್‌ ಯಾವಾಗ್ಲೂ ಕಂಟ್ರೋಲ್‌ ಇರುತ್ತೆ! ಯಾವ ಪಥ್ಯದ ಅವಶ್ಯಕತೆಯೂ ಇರಲ್ಲ!!


ತಲೆಹೊಟ್ಟು ನಿವಾರಣೆ : 
ತಲೆಹೊಟ್ಟು ಸಮಸ್ಯೆಯನ್ನು ಕಡಿಮೆ ಮಾಡಲು,ಸಾಸಿವೆ ಎಣ್ಣೆ ಮತ್ತು ಮೆಂತ್ಯೆ ಮಿಶ್ರಣವನ್ನು ಬಳಸಬಹುದು.ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.  ಇದು ಕೂದಲಿನ ಸೋಂಕನ್ನು ಕಡಿಮೆ ಮಾಡುವ ಮೂಲಕ ತಲೆಹೊಟ್ಟುಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ದೀರ್ಘಕಾಲದವರೆಗೆ ತಲೆಹೊಟ್ಟು ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ಎಣ್ಣೆ ಉತ್ತಮ ಪರಿಹಾರವಾಗಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.