ಈ ಐದು ರೀತಿಯ ಹಿಟ್ಟಿನ ಚಪಾತಿ ತಿಂದರೆ ಒಂದೇ ವಾರದಲ್ಲಿ ಇಳಿಯುವುದು ದೇಹ ತೂಕ !
Weight Loss Tips :ಗೋಧಿ ಹಿಟ್ಟಿನ ಚಪಾತಿ ಬದಲು ಈ ಕೆಳಗೆ ಹೇಳಲಾದ ಹಿಟ್ಟಿನ ಚಪಾತಿ ಸೇವಿಸುವುದರಿಂದ ದೇಹ ತೂಕವನ್ನು ಶೀಘ್ರವೇ ಕಡಿಮೆ ಮಾಡಬಹುದು.
ಬೆಂಗಳೂರು : ತೂಕ ನಷ್ಟವಾಗಬೇಕಾದರೆ ನಾವು ಅನುಸರಿಸುವ ಆಹಾರ ಕ್ರಮದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ತೂಕ ನಷ್ಟಕ್ಕೆ ಫೈಬರ್ ಭರಿತ ಆಹಾರಗಳನ್ನು ಸೇವಿಸಬೇಕು. ಈ ರೀತಿಯ ಆಹಾರವು ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡುವುದಲ್ಲದೆ, ಚಯಾಪಚಯವನ್ನು ಬಲಪಡಿಸುತ್ತದೆ. ತೂಕ ನಷ್ಟಕ್ಕೆ ಚಪಾತಿ ಸೇವಿಸಬೇಕು ಎಂದು ಹೇಳಲಾಗುತ್ತದೆ. ಆದರೆ ಗೋಧಿ ಹಿಟ್ಟಿನ ಚಪಾತಿ ಬದಲು ಈ ಕೆಳಗೆ ಹೇಳಲಾದ ಹಿಟ್ಟಿನ ಚಪಾತಿ ಸೇವಿಸುವುದರಿಂದ ದೇಹ ತೂಕವನ್ನು ಶೀಘ್ರವೇ ಕಡಿಮೆ ಮಾಡಬಹುದು.
ಬಾರ್ಲಿ ಚಪಾತಿ :
ಬಾರ್ಲಿ ಹಿಟ್ಟಿನಿಂದ ತಯಾರಿಸಿದ ಚಪಾತಿ ತಿನ್ನುವುದರಿಂದ ಫೈಬರ್ ಮಾತ್ರವಲ್ಲದೆ, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ತಾಮ್ರದಂತಹ ಸಾಕಷ್ಟು ಪೋಷಕಾಂಶಗಳನ್ನು ನಮ್ಮ ದೇಹವನ್ನು ಸೇರುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ.
ಇದನ್ನೂ ಓದಿ : ಚಳಿಗಾಲದಲ್ಲಿ ಈ ನಾಲ್ಕು ರೀತಿಯಲ್ಲಿ ಅರಶಿನ ಸೇವಿಸಿದರೆ ದೂರವಾಗುವುದು ಕಾಯಿಲೆಗಳ ಅಪಾಯ !
ಜೋಳದ ರೊಟ್ಟಿ :
ಜೋಳದಿಂದ ತಯಾರಿಸಿದ ರೊಟ್ಟಿ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡುತ್ತದೆ. ಇದು ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್, ಫೋಲೇಟ್, ಕ್ಯಾಲ್ಸಿಯಂ, ಕಬ್ಬಿಣದಂತಹ ಅನೇಕ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಜೋಳದ ರೊಟ್ಟಿಯನ್ನು ನಿಯಮಿತವಾಗಿ ತಿನ್ನುವುದರಿಂದ ತೂಕವನ್ನು ನಿಯಂತ್ರಿಸಬಹುದು.
ರಾಗಿ ರೊಟ್ಟಿ :
ರಾಗಿ ರೊಟ್ಟಿ ತಿನ್ನುವುದರಿಂದ ಕಬ್ಬಿಣದ ಜೊತೆಗೆ ಪ್ರೋಟೀನ್ ಮತ್ತು ಫೈಬರ್ ಕೂಡಾ ದೇಹಕ್ಕೆ ಸಿಗುತ್ತದೆ. ಇದು ಗ್ಲುಟನ್ ಮುಕ್ತವಾಗಿದೆ. ರಾಗಿಯಿಂದ ತಯಾರಿಸಿದ ರೊಟ್ಟಿಯನ್ನು ನಿಯಮಿತವಾಗಿ ತಿನ್ನುವುದರಿಂದ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಸಜ್ಜೆ ರೊಟ್ಟಿ :
ಸಜ್ಜೆ ರೊಟ್ಟಿಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಫೈಬರ್ ಸಮೃದ್ಧವಾಗಿದೆ. ಇದು ನಿಮ್ಮ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಇದಲ್ಲದೆ, ಮಧುಮೇಹ ಮತ್ತು ಕೊಲೆಸ್ಟ್ರಾಲ್‌ನಂತಹ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಇದು ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ : ಚಳಿಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಇರಲಿ ವಿಶೇಷ ಗಮನ: ತಾಯಂದಿರಿಗೆ ಇಲ್ಲಿದೆ ಸಿಂಪಲ್ ಟಿಪ್ಸ್
ಕಡಲೆ ಹಿಟ್ಟು ಮತ್ತು ಗೋಧಿ ಹಿಟ್ಟಿನ ಚಪಾತಿ :
ಕಡಲೆ ಹಿಟ್ಟು ಮತ್ತು ಗೋಧಿಯಿಂದ ತಯಾರಿಸಿದ ರೊಟ್ಟಿಯನ್ನು ತಿನ್ನುವುದರಿಂದ ದೇಹಕ್ಕೆ ಪ್ರಯೋಜನ ಸಿಗುತ್ತದೆ. ಇದರೊಂದಿಗೆ, ನಿಮ್ಮ ದೇಹವು ಪ್ರೋಟೀನ್ ಜೊತೆಗೆ ಫೈಬರ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳನ್ನು ಪಡೆಯುತ್ತದೆ. ಈ ಎಲ್ಲಾ ಪೋಷಕಾಂಶಗಳ ಸಹಾಯದಿಂದ, ವೇಗವಾಗಿ ತೂಕವನ್ನು ಕಳೆದುಕೊಳ್ಳಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.