ಮಧುಮೇಹಕ್ಕೆ ರಾಮಬಾಣ.. ಈ ಪುಟ್ಟ ಕಾಳನ್ನು ಹೀಗೆ ಸೇವಿಸಿದ್ರೆ ಕಂಪ್ಲೀಟ್ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್! ಮಾತ್ರೆಯ ಅವಶ್ಯಕತೆಯೇ ಇರೋದಿಲ್ಲ..
Flax seeds to control Blood Sugar: ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ನಂತಹ ಸಮಸ್ಯೆಗಳಿಂದ ಮುಕ್ತಿ ಹೊಂದಲು ಬಯಸಿದರೆ ಅಗಸೆಬೀಜವು ಪ್ರಯೋಜನಕಾರಿಯಾಗಿದೆ.
Blood Sugar Control Tips: ಚಿಕ್ಕದಾಗಿ ಕಾಣುವ ಅಗಸೆ ಬೀಜಗಳು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಹೇರಳವಾದ ನಾರಿನಂಶವಿದ್ದು, ನಿಯಮಿತವಾಗಿ ಸೇವಿಸುವ ಮೂಲಕ ಅಪಧಮನಿಗಳಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕಡಿಮೆ ಮಾಡಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ. ಅಗಸೆ ಬೀಜಗಳು ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡಲು ಸಹ ಪ್ರಯೋಜನಕಾರಿ. ಫೈಬರ್, ಪ್ರೋಟೀನ್, ಮೆಗ್ನೀಸಿಯಮ್ ಮತ್ತು ರಂಜಕ ಸೇರಿದಂತೆ ಅನೇಕ ಪೋಷಕಾಂಶಗಳು ಅಗಸೆ ಬೀಜಗಳಲ್ಲಿ ಕಂಡುಬರುತ್ತವೆ. ಇದೀಗ ಇದರ ಆಶ್ಚರ್ಯಕರ ಪ್ರಯೋಜನಗಳನ್ನು ತಿಳಿಯೋಣ.
ಇತ್ತೀಚಿನ ದಿನಗಳಲ್ಲಿ, ಕೊಲೆಸ್ಟ್ರಾಲ್ ಸಮಸ್ಯೆಯು ಚಿಕ್ಕ ವಯಸ್ಸಿನಲ್ಲಿ ಕಂಡುಬರುತ್ತಿದೆ. ಅಲ್ಲದೇ ಹೃದಯಾಘಾತಕ್ಕೆ, ಅಧಿಕ ಕೊಲೆಸ್ಟ್ರಾಲ್ ಮಟ್ಟವು ಕಾರಣವೆಂದು ಕಂಡುಬಂದಿದೆ. ಅಗಸೆ ಬೀಜಗಳನ್ನು ಪ್ರತಿದಿನ ಸೇವಿಸಿದರೆ, ಅಪಧಮನಿಗಳಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು. ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ರಕ್ತದೊತ್ತಡವು ಹಲವಾರು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ.. ಇದು ಹೃದಯದ ಮೇಲೆ ನೇರ ಪರಿಣಾಮ ಬೀರಿ.. ಹೃದಯಾಘಾತಕ್ಕೂ ಕಾರಣವಾಗಬಹುದು. ಹೀಗಾಗಿ ಅಗಸೆ ಬೀಜಗಳನ್ನು ಪ್ರತಿದಿನ ಸೇವಿಸಿದರೆ ಬಿಪಿಯನ್ನು ನಿಯಂತ್ರಿಸಬಹುದು.
ಇತ್ತೀಚಿನ ದಿನಗಳಲ್ಲಿ ಮಧುಮೇಹದ ಸಮಸ್ಯೆ ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿದೆ. ಮಧುಮೇಹಿಗಳು ಅಗಸೆ ಬೀಜಗಳಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು. ಈ ಬೀಜಗಳು ಸಕ್ಕರೆಯ ಮಟ್ಟವನ್ನು ಹೆಚ್ಚಿಸಲು ಬಿಡದೇ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ-ʼನನ್ನಿಂದ ಒಂಟಿಯಾಗಿರಲು ಸಾಧ್ಯವಿಲ್ಲ..ʼ ಕೊನೆಗೂ ಎಡರನೇ ಮದುವೆ ಬಗ್ಗೆ ಬಾಯ್ತೆರೆದ ನಟಿ ಸಮಂತಾ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ