ಬೆಂಗಳೂರು : ಮಹಿಳೆಯರಲ್ಲಿ ಪಿರಿಯಡ್ಸ್ ಎಂದರೆ ಸುಮಾರು 12 ವರ್ಷದಿಂದ ಆರಂಭವಾಗಿ 50 ವರ್ಷ ವಯಸ್ಸಿನವರೆಗೂ ಇರುತ್ತದೆ. ಇದು ಪ್ರತಿ ತಿಂಗಳು 3 ರಿಂದ 7 ದಿನಗಳವರೆಗೆ ನಡೆಯುತ್ತದೆ. ಪ್ರತಿ ತಿಂಗಳು ಋತುಚಕ್ರದ ಸಮಯದಲ್ಲಿ ಪ್ರತಿ ಹುಡುಗಿಯೂ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ನೋವು ಅಸಹನೀಯವಾಗಿರುತ್ತದೆ.  ಇದರಿಂದಾಗಿ ಅನೇಕ ಹುಡುಗಿಯರು ನೋವು ನಿವಾರಕ ಅಥವಾ ಪೈನ್ ಕಿಲ್ಲರ್ ಮಾತ್ರೆಗಳನ್ನು ನುಂಗುತ್ತಾರೆ. 


COMMERCIAL BREAK
SCROLL TO CONTINUE READING

ಮುಟ್ಟಿನ ನೋವನ್ನು ತೊಡೆದುಹಾಕುವುದು ಹೇಗೆ? :
ಪ್ರತಿ ಮಹಿಳೆಯು ಮುಟ್ಟಿನ ಸಮಯದಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ನೋವಿನಿಂದ ನರಳುತ್ತಾಳೆ. ಹೀಗೆ ಕಾಣಿಸಿಕೊಳ್ಳುವ ನೋವು ಕೆಲವೊಂದು ಮನೆಮದ್ದನ್ನು ಅನುಸರಿಸುವ ಮೂಲಕ ಕಡಿಮೆಯಾಗುತ್ತದೆ.  ಪಿರಿಯಡ್ಸ್ ಡಯಟ್‌ನಲ್ಲಿ ಒಣದ್ರಾಕ್ಷಿ, ಕೇಸರಿ ಮತ್ತು ತುಪ್ಪದಂತಹ ಪದಾರ್ಥಗಳನ್ನು ಸೇರಿಸಿಕೊಳ್ಳುವುದರಿಂದ    ಪಿರಿಯಡ್ಸ್ ನೋವನ್ನು ಕಡಿಮೆ ಮಾಡಬಹುದು. 


ಇದನ್ನೂ ಓದಿ : ಈ ಆರೋಗ್ಯ ಸಮಸ್ಯೆಗಳನ್ನು ನಿರ್ನಾಮ ಮಾಡುತ್ತದೆ ದ್ರಾಕ್ಷಿ ಹಣ್ಣು !ಆದರೆ ತಿನ್ನುವ ಸಮಯ ಬಹಳ ಮುಖ್ಯ !


ಒಣದ್ರಾಕ್ಷಿ ಮತ್ತು ಕೇಸರಿ ನೋವಿಗೆ ಪರಿಹಾರ : 
ಕಪ್ಪು ಒಣದ್ರಾಕ್ಷಿ (4 ಅಥವಾ 5) ಮತ್ತು ಕೇಸರಿ ದಳವನ್ನು (1-2) ರಾತ್ರಿ ನೀರಿನಲ್ಲಿ ನೆನೆ ಹಾಕಿ. ಹೀಗೆ ನೆನೆಸಿದ ಒಣ ದ್ರಾಕ್ಷಿ ಮತ್ತು ಕೇಸರಿಯನ್ನು ಬೆಳಿಗ್ಗೆ ಸೇವಿಸಿ.  ಇದು ಪೀರಿಯಡ್ ಸೆಳೆತ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದಲ್ಲಿ ಕಬ್ಬಿಣದ ಅಂಶ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.  


ಪಾನ್ ಕಿಲ್ಲರ್ ನಿಂದ ದೂರವಿರಿ :
ಋತುಚಕ್ರದ ಸಮಯದಲ್ಲಿ ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಪ್ರತಿಯೊಬ್ಬ ಮಹಿಳೆಯನ್ನು ಕಾಡುತ್ತವೆ. ಆದರೆ ಸಾಮಾನ್ಯ ಸಮಸ್ಯೆ ಎಂದರೆ ಹೊಟ್ಟೆಯ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ತೀವ್ರವಾದ ನೋವು. ಇದರಿಂದ ಪರಿಹಾರ ಪಡೆಯಲು ಮಹಿಳೆಯರು ನೋವು ನಿವಾರಕ ಔಷಧಗಳ ಮೊರೆ ಹೋಗುತ್ತಾರೆ. ಆದರೆ ಇದು ತಕ್ಷಣಕ್ಕೆ ಪರಿಹಾರ ನೀಡಬಹುದು. ಆದರೆ ಇದು ಭವಿಷ್ಯದಲ್ಲಿ  ತೊಂದರೆ ನೀಡುತ್ತದೆ. 


ಇದನ್ನೂ ಓದಿ : ಒಣದ್ರಾಕ್ಷಿಗಳಿಂದ ಆಗುವ ಪ್ರಯೋಜನೆಗಳೇನು ಗೊತ್ತಾ?


ಬಿಸಿನೀರಿನ ಬಾಟಲ್ ಅಥವಾ  ಹೀಟಿಂಗ್ ಪ್ಯಾಡ್ :
ಹಾಟ್ ವಾಟರ್ ಬ್ಯಾಗ್ ಅಥವಾ ಗಾಜಿನ ಬಾಟಲಿಗೆ ಬಿಸಿ ನೀರನ್ನು ತುಂಬಿಸಿ ಮತ್ತು ಹೊಟ್ಟೆ ಮತ್ತು ಬೆನ್ನಿನ ಮೇಲೆ ಸುಮಾರು 10 ರಿಂದ 15 ನಿಮಿಷಗಳ ಕಾಲ ಮಸಾಜ್ ಮಾಡಿ. ಬಿಸಿನೀರಿನ ಶಾಖ ಪಿರಿಯಡ್ಸ್ ಸಮಯದಲ್ಲಿ ಕಾಣಿಸಿಕೊಳ್ಳುವ ನೋವನ್ನು ನಿವಾರಿಸಲು  ಸಹಾಯ ಮಾಡುತ್ತದೆ. 


ಇಂಗು ತಿನ್ನಬೇಕು  : 
ಪಿರಿಯಡ್ಸ್ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ಮತ್ತು ಇತರ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಇಂಗು ಸೇವಿಸಬೇಕು. ಆದರೆ ಕೇವಲ ಪಿರಿಯಡ್ಸ್ ಸಮಯದಲ್ಲಿ ಮಾತ್ರ ಇಂಗು ತಿಂದರೆ ಪ್ರಯೋಜನವಿಲ್ಲ. ಇಡೀ ತಿಂಗಳು ಇದನ್ನು ಸೇವಿಸಬೇಕು.  ಇದು ಆಯುರ್ವೇದ ವಿಧಾನವಾಗಿದೆ. 


ಮೆಂತ್ಯೆ ಕಾಳು :
ಮೆಂತ್ಯೆ ಕಾಳುಗಳನ್ನು 12 ಗಂಟೆಗಳ ಮೊದಲು ನೀರಿನಲ್ಲಿ ನೆನೆಸಿ, ನಂತರ ಅದರಲ್ಲಿ ಮೆಂತ್ಯವನ್ನು ಫಿಲ್ಟರ್ ಮಾಡಿ ನೀರನ್ನು ಕುಡಿಯಬೇಕು. ಹೀಗೆ ಮಾಡಿದರೂ ಮುಟ್ಟಿನ ವೇಳೆ ಕಾಣಿಸಿಕೊಳ್ಳುವ ನೋವಿನಿಂದ ಪರಿಹಾರ ಸಿಗುತ್ತದೆ. 


ಇದನ್ನೂ ಓದಿ : ನಿಮ್ಮ ಮಗುವಿನ ಕಣ್ಣಿಗೆ ಕಾಜಲ್ ಹಚ್ಚುವ ಮುನ್ನ, ಅದರಿಂದಾಗುವ ಹಾನಿಯ ಬಗ್ಗೆ ತಿಳಿಯಿರಿ..!


ಹೆಚ್ಚು ನೀರು ಕುಡಿಯಿರಿ :
ನೀರು ಕುಡಿಯುವ ಮೂಲಕ ದೇಹವನ್ನು ಹೈಡ್ರೀಕರಿಸಬಹುದು. ಹೊಟ್ಟೆ ಉಬ್ಬರದಿಂದ ಪರಿಹಾರ ಪಡೆಯಲು ಸುಲಭವಾದ ಮಾರ್ಗವೆಂದರೆ ಹೆಚ್ಚು ಹೆಚ್ಚು ನೀರು ಕುಡಿಯುವುದು. ಇದಲ್ಲದೆ, ಚಹಾ ಅಥವಾ ಕಾಫಿ ಸೇವನೆಯು ಸಹ ಪ್ರಯೋಜನಕಾರಿಯಾಗಿದೆ.


ಹಸಿರು ತರಕಾರಿಗಳನ್ನು ತಿನ್ನಿರಿ : 
ಬಾಳೆಹಣ್ಣು, ಹಸಿರು ಸೊಪ್ಪು ಮತ್ತು ಪಾಲಕ್ ಸೊಪ್ಪನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಈ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಗಳು ಕಂಡು ಬರುತ್ತವೆ. 


ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ  :
ಪಿರಿಯಡ್ಸ್ ಸಮಯದಲ್ಲಿ, ಮಹಿಳೆಯರು ಅಸಿಡಿಟಿ, ಅಜೀರ್ಣ, ಬೆನ್ನು ನೋವು, ತೊಡೆ ನೋವು, ತಲೆನೋವು, ಎದೆ ಭಾರ, ದೌರ್ಬಲ್ಯ ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅನೇಕ ಮಹಿಳೆಯರು ತುಂಬಾ ನೋವನ್ನು ಅನುಭವಿಸುತ್ತಾರೆ. ಇದು ಅವರ ದೈನಂದಿನ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ.


ಇದನ್ನೂ ಓದಿ : Health Care Tips: ನಿತ್ಯ ಈ ಬೀಜಗಳ ಸೇವನೆಯಿಂದ ನಿಮ್ಮ ದಿನ ಆರಂಭಿಸಿ, ಬೆಣ್ಣೆಯಂತೆ ಬೊಜ್ಜು!


ರಕ್ತಹೀನತೆ  ಅಪಾಯ : 
ಪ್ರತಿ ತಿಂಗಳು ಆಗುವ ಈ ರಕ್ತಸ್ರಾವವು ನಿಮ್ಮನ್ನು ದುರ್ಬಲಗೊಳಿಸಬಹುದು.  ಮುಟ್ಟಿನ ವೇಳೆ ಹೆಚ್ಚು ರಕ್ತಸ್ತ್ರಾವ ಆಗುತ್ತಿದ್ದರೆ ನೀವು ರಕ್ತಹೀನತೆಗೆ ಬಲಿಯಾಗಬಹುದು. ರಕ್ತದಲ್ಲಿ ಸಾಕಷ್ಟು ಆರೋಗ್ಯಕರ ಕೆಂಪು ರಕ್ತ ಕಣಗಳು ಅಥವಾ ಹಿಮೋಗ್ಲೋಬಿನ್ ಇಲ್ಲದಿದ್ದಾಗ ರಕ್ತಹೀನತೆ ಉಂಟಾಗುತ್ತದೆ. ಇದರ ಬಗ್ಗೆ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬಹುದು.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.