Tips to reduce belly fat : ಯುವ ಪೀಳಿಗೆ ಫಾಸ್ಟ್ ಫುಡ್, ಸಂಸ್ಕರಿಸಿದ ಆಹಾರ, ಪ್ಯಾಕ್ದ್ ಜ್ಯೂಸ್, ಆಲ್ಕೋಹಾಲ್ ನತ್ತ ಹೆಚ್ಚು ಹೆಚ್ಚು ವಾಲುತ್ತಾರೆ. ಆಹಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಕೈಗೆ ಸಿಕ್ಕ ಸಿಕ್ಕ ಆಹಾರವೆಲ್ಲವನ್ನೂ ಸೇವಿಸುತ್ತಾರೆ. ಇದು ಹೃದ್ರೋಗ, ಅಧಿಕ ರಕ್ತದೊತ್ತಡ, ಹೈ ಯೂರಿಕ್ ಆಸಿಡ್ ಮತ್ತು ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೊಟ್ಟೆಯ ಭಾಗದಲ್ಲಿ ಕೊಬ್ಬು ಹೆಚ್ಚಾಗುವುದರ ಹಿಂದಿರುವ ಸಾಮಾನ್ಯ ಕಾರಣವೆಂದರೆ ಕಳಪೆ ಆಹಾರ, ಹಾರ್ಮೋನುಗಳ ಅಸಮತೋಲನ. ಆದ್ದರಿಂದ ಈ ಕೆಳಗಿನ  7 ನಿಯಮಗಳನ್ನು ಪಾಲಿಸುವ ಮೂಲಕ ತೂಕವನ್ನು ಕಳೆದುಕೊಳ್ಳುವುದು ಸಾಧ್ಯವಾಗುತ್ತದೆ.  


COMMERCIAL BREAK
SCROLL TO CONTINUE READING

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಅನುಸರಿಸಿ  ಈ 7 ನಿಯಮ : 
1. ಆರೋಗ್ಯಕರ ಆಹಾರವನ್ನು ಸೇವಿಸಿ: ನೀವು ಸೇವಿಸುವ ಆಹಾರದಲ್ಲಿ  ಸಾಕಷ್ಟು ತರಕಾರಿಗಳು, ಧಾನ್ಯಗಳು, ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಸೇರಿಸಿ .


ಇದನ್ನೂ ಓದಿ : ಕೂದಲನ್ನು ದೃಢವಾಗಿಸಲು ಇಲ್ಲಿವೆ ಉತ್ತಮ ಗಿಡಮೂಲಿಕೆಗಳು..!


2.  ಇನ್ಸ್ಟಂಟ್ ಆಹಾರ ಸೇವಿಸಬೇಡಿ : ಸಂಸ್ಕರಿಸಿದ ಆಹಾರ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು, ಪ್ಯಾಕ್ಡ್ ಜ್ಯೂಸ್ ಮತ್ತು ಟ್ರಾನ್ಸ್ ಫ್ಯಾಟ್ ನ ಉತ್ಪನ್ನಗಳನ್ನು ಸೇವಿಸುವುದನ್ನು ತಕ್ಷಣದಿಂದಲೇ ನಿಲ್ಲಿಸಿ. 


3. ನಿಯಮಿತ ವ್ಯಾಯಾಮ : ವಾರದಲ್ಲಿ ಐದು ದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ಇದು ಬ್ರಿಸ್ಕ್ ವಾಕ್, ಜಾಗಿಂಗ್, ಸೈಕ್ಲಿಂಗ್ ಅಥವಾ ಈಜು ಹೀಗೆ ಯಾವ ರೀತಿಯಲ್ಲಾದರೂ ದೇಹ ದಣಿಸಿ. 


4. ಒತ್ತಡವನ್ನು ಕಡಿಮೆ ಮಾಡಿ : ದೀರ್ಘಕಾಲದ ಒತ್ತಡವು ಹೊಟ್ಟೆಯ ಕೊಬ್ಬನ್ನು ಹೆಚ್ಚಿಸಬಹುದು. ಯೋಗ, ಧ್ಯಾನ ಅಥವಾ ಉಸಿರಾಟದ ವ್ಯಾಯಾಮಗಳನ್ನು ಮಾಡುವ ಮೂಲಕ ಒತ್ತಡ ನಿವಾರಣೆಗೆ ಒತ್ತು ಕೊಡಿ. 


5. ಸಾಕಷ್ಟು ನಿದ್ರೆ ಮಾಡಿ : ರಾತ್ರಿಯಲ್ಲಿ ಕನಿಷ್ಠ 7 ರಿಂದ -8 ಗಂಟೆಗಳ ಕಾಲ ನಿದ್ದೆ ಮಾಡಿ. ನಿದ್ರೆಯ ಕೊರತೆಯು ಹಸಿವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಅಡ್ಡಿಪಡಿಸುತ್ತದೆ. ಇದರಿಂದ ತೂಕ ಹೆಚ್ಚಾಗುವ ಅಪಾಯ ಕೂಡಾ ಹೆಚ್ಚುತ್ತದೆ. 


ಇದನ್ನೂ ಓದಿ : ಬೇಸಿಗೆಯಲ್ಲಿ ಮಾವಿನ ಕಾಯಿ ಸೇವನೆಯಿಂದ ಆರೋಗ್ಯಕ್ಕಿದೆ ಹಲವು ಅದ್ಭುತ ಪ್ರಯೋಜನ


6. ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ: ಆಲ್ಕೋಹಾಲ್ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ಹೊಟ್ಟೆಯ ಕೊಬ್ಬಿನ ಹೆಚ್ಚಳಕ್ಕೆ ಕಾರಣವಾಗಬಹುದು. 


7. ಧೂಮಪಾನ ಮಾಡಬೇಡಿ : ಧೂಮಪಾನವು ಹೊಟ್ಟೆಯ ಕೊಬ್ಬು ಮತ್ತು ವಿವಿಧ ಆರೋಗ್ಯ ಸಮಸ್ಯೆಗಳ ಮೂಲವಾಗಿರುತ್ತದೆ. ಹಾಗಾಗಿ ಧೂಮಪಾನದಿಂದ ದೂರವಿರಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.