Diabetes control:ಮಧುಮೇಹ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಪ್ರತಿಯೊಬ್ಬರೂ ಮಧುಮೇಹದಿಂದ ಬಳಲುತ್ತಿದ್ದಾರೆ. ಆದರೆ ನೀವು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಏನೆಂದರೇ ಮಧುಮೇಹವು ಅಪಾಯಕಾರಿ ಕಾಯಿಲೆಯಾಗಿದೆ ಎನ್ನುವುದು. ಹೌದು, ಮಧುಮೇಹದಿಂದ ನೀವು ಅನೇಕ ಗಂಭೀರ ರೋಗಗಳನ್ನು ಅನುಭವಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಮಧುಮೇಹವು ಒಂದು ಆರೋಗ್ಯ ಸಮಸ್ಯೆ, ಸಂಪೂರ್ಣವಾಗಿ ಗುಣವಾಗದಿದ್ದರೂ ಮನಸ್ಸು ಮಾಡಿದರೆ ನಿಯಂತ್ರಿಸಬಹುದು. ಮಧುಮೇಹ ನಿಯಂತ್ರಣದಲ್ಲಿದ್ದರೆ ಮತ್ತೆ ಮಧುಮೇಹದ ಚಿಂತೆ ಏಕೆ? ಹೌದು, ನೀವು ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ನೀವು ಭಾವಿಸಿದರೆ ಅದು ತಪ್ಪು ಏಕೆಂದರೆ ನೀವು ಜೀವನದಲ್ಲಿ ಈ ಬದಲಾವಣೆಯನ್ನು ಮಾಡಿದರೆ ನೀವು ಖಂಡಿತವಾಗಿಯೂ ಮಧುಮೇಹವನ್ನು ನಿಯಂತ್ರಿಸಬಹುದು. 


ಪ್ರತಿದಿನ ವ್ಯಾಯಾಮ ಮಾಡಿ
ನಿಮ್ಮ ದೇಹದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಕೆಲವು ವ್ಯಾಯಾಮಗಳು ಅವಶ್ಯಕ. ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡಿ. ವಾಕಿಂಗ್, ಸೈಕ್ಲಿಂಗ್, ಜಾಗಿಂಗ್, ಯೋಗ, ಜಿಮ್ ಇತ್ಯಾದಿ ಅರ್ಧ ಗಂಟೆ ವ್ಯಾಯಾಮ ಮಾಡಿ. 


ಸಾಕಷ್ಟು ನೀರು ಕುಡಿಯಿರಿ
ಮಧುಮೇಹಿಗಳಿಗೆ ಹೆಚ್ಚು ಮೂತ್ರ ವಿಸರ್ಜನೆ ಆಗುತ್ತಿರುತ್ತದೆ. ಹೀಗಾಗಿ ಅವರ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದಾಗಿ ಮಧುಮೇಹಿಗಳು ತೀವ್ರ ಬಾಯಾರಿಕೆಯಿಂದ ಬಳಲುತ್ತಾರೆ. ಇದನ್ನು ತಪ್ಪಿಸಲು ಸಾಕಷ್ಟು ನೀರು ಕುಡಿಯಿರಿ. ಆದರೆ ತಂಪು ಪಾನೀಯಗಳು ಮತ್ತು ಸಕ್ಕರೆ ಪಾನೀಯಗಳಿಂದ ದೂರವಿರಿ.


ಇದನ್ನೂ ಓದಿ-ಹೆಚ್ಚುವರಿ ಕೊಬ್ಬನ್ನು ಇಳಿಸುವ ಯೋಚನೆಯಲ್ಲಿದ್ದಿರಾ ? ಇಲ್ಲಿದೆ ಅದಕ್ಕೆ ಪರಿಹಾರ


ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಿ
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ವ್ಯಾಯಾಮ ಮತ್ತು ಆಹಾರ ಕ್ರಮದ ಮೂಲಕ ತೂಕವನ್ನು ನಿಯಂತ್ರಿಸಬಹುದು.


ಧ್ಯಾನ ಮಾಡುವುದನ್ನು ನಿಲ್ಲಿಸಬೇಡಿ
ಮಾನಸಿಕ ಒತ್ತಡವು ದೇಹದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ದಿನಕ್ಕೆ 15 ನಿಮಿಷಗಳ ಕಾಲ ಧ್ಯಾನ ಮಾಡಿ. ನರಗಳನ್ನು ಶುದ್ಧಿ ಮಾಡಿ, ಪ್ರಾಣಾಯಾಮ ಮಾಡಿ. ಧ್ಯಾನವು ಮಾನಸಿಕ ಒತ್ತಡವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ.


ಆಲ್ಕೋಹಾಲ್ ಮತ್ತು ಕೆಫೀನ್ ಸೇವನೆಯನ್ನು ತಪ್ಪಿಸಿ
ಆಲ್ಕೋಹಾಲ್ ಕುಡಿಯಬೇಡಿ ಮತ್ತು ಕೆಫೀನ್ ಹೊಂದಿರುವ ಆಹಾರವನ್ನು ಸೇವಿಸಬೇಡಿ. ವಿಶೇಷವಾಗಿ ಮಲಗುವ ಮುನ್ನ ಇವುಗಳನ್ನು ಮುಟ್ಟಬೇಡಿ ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ. ನೀವು ಅಪರೂಪಕ್ಕೆ ಕುಡಿಯುತ್ತಿದ್ದರೆ ತೊಂದರೆ ಇಲ್ಲ.


ಇದನ್ನೂ ಓದಿ-ಯಕೃತ್ತು ಹಾನಿಗೊಳಗಾಗಿದೆ ಎಂದು ಸೂಚಿಸುತ್ತವೆ ಈ 5 ಸಂಕೇತಗಳು, ನಿರ್ಲಕ್ಷಿಸಬೇಡಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ