ನವದೆಹಲಿ: ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಿನ್ನಲು ಇಷ್ಟಪಡದವರು ಯಾರಿಲ್ಲ ಹೇಳಿ? ಕೆಲವರು ಎಲ್ಲ ರೀತಿಯ ಆಹಾರ ಖಾದ್ಯಗಳನ್ನು ಟ್ರೈ ಮಾಡಲು ಇಷ್ಟಪಡುತ್ತಾರೆ, ಅದು ಸಸ್ಯಹಾರವಾಗಿರಲಿ, ಮಾಂಸಹಾರವಾಗಿರಲಿ... ಅದ್ಯಾವುದನ್ನೂ ಯೋಚನೆ ಮಾಡೋದೇ ಇಲ್ಲ. ಆದರೆ ಕೆಲವು ದೇಶಗಳಲ್ಲಿ ಪ್ರತಿನಿತ್ಯ ಬಳಸುವ ಆಹಾರ ಪದಾರ್ಥಗಳಿಗೂ ನಿಷೇಧ ಹೇರಲಾಗಿದೆ. ಅಂತಹ ದೇಶಗಳು ಯಾವುವು? ಯಾವ ದೇಶದಲ್ಲಿ ಯಾವ ಆಹಾರ ನಿಷೇಧ? ಎಂಬುದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್...


COMMERCIAL BREAK
SCROLL TO CONTINUE READING

ಫ್ರಾನ್ಸ್: ಫ್ರಾನ್ಸ್ ನ ಶಾಲೆಗಳ ಕ್ಯಾಂಟೀನಿನಲ್ಲಿ ಸಸ್ಯಾಹಾರ ತಿಂಡಿ ತಿನಿಸುಗಳನ್ನು ಬ್ಯಾನ್ ಮಾಡಲಾಗಿದೆ. ಅಷ್ಟೇ ಅಲ್ಲ, ಇಲ್ಲಿ ಟೊಮ್ಯಾಟೋ ಕೆಚಪ್ ಬಳಸುವುದೂ ಮಹಾಪರಾಧ. ಏಕೆಂದರೆ ಫ್ರಾನ್ಸ್ ಸರ್ಕಾರ 2011ರಲ್ಲಿ ಪ್ರಾಥಮಿಕ ಶಾಲೆಗಳಿಂದಲೇ ಟೊಮ್ಯಾಟೋ ಕೆಚಪ್ ಬಳಸುವುದಕ್ಕೆ ನಿಷೇಧ ಹೇರಿದೆ.


ಸಿಂಗಾಪುರ: ಸೀಫುಡ್ ಗೆ ಹೆಚ್ಚು ಹೆಸರುವಾಸಿಯಾದ ಸಿಂಗಾಪುರದಲ್ಲಿ ಚ್ಯೂಯಿಂಗ್ ಗಮ್ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಸ್ಥಳೀಯರಾಗಲೀ, ಪ್ರವಾಸಿಗರಾಗಲೀ ಅಪ್ಪಿತಪ್ಪಿಯೂ ಚ್ಯೂಯಿಂಗ್ ಗಮ್ ಜಗಿಯುವಂತಿಲ್ಲ. ಒಂದು ವೇಳೆ ಜಗಿದಿದ್ದು ಕಂಡುಬಂದಿದ್ದೇ ಆದಲ್ಲಿ, ಭಾರೀ ದಂಡ ತೆರಬೇಕಾಗುತ್ತದೆ. 


ಸೊಮಾಲಿಯಾ: ಸಂಜೆ ಹೊತ್ತಿನ ಸ್ನ್ಯಾಕ್ಸ್ ಗೆ ನಮ್ಮಲ್ಲಿ ಟೀ ಮತ್ತು ಸಮೋಸ ಹೇಳಿಮಾಡಿಸಿದ ತಿಂಡಿ. ಆದರೆ ಸೋಮಾಲಿಯಾದಲ್ಲಿ 2011 ರಿಂದ ಸಮೋಸ ತಯಾರಿಕೆ ಮತ್ತು ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಇದಕ್ಕೆ ಕಾರಣ ಅದರ ಆಕಾರ. ಇಲ್ಲಿನ ಕ್ರಿಶ್ಚಿಯನ್ನರ ಒತ್ತಾಯದ ಮೇರೆಗೆ ಸೊಮಾಲಿಯಾ ಸರ್ಕಾರ ಸಮೋಸ ನಿಷೇಧ ಹೇರಿದೆ.


ಅಮೇರಿಕಾ: ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು Ready to Eat ಆಹಾರ ಪದಾರ್ಥಗಳನ್ನು ಬಳಸುವ ರಾಷ್ಟ್ರ ಅಂದರೆ ಅದು ಅಮೇರಿಕಾ. ಹಾಗೇ ನಮ್ಮ ದೇಶದಲ್ಲಿ ಅತಿ ಹೆಚ್ಚು ತೆರೆದ ಆಹಾರ ಪದಾರ್ಥಗಳು ಹೆಚ್ಚು ಮಾರಾಟವಾಗುತ್ತವೆ. ಅದರಲ್ಲಿ ಹಾಲು ಕೂಡ ಒಂದು. ಆದರೆ, ನೀವೇನಾದರೂ ಅಮೆರಿಕಾಗೆ ಹೋಗುತ್ತಿದ್ದೀರಿ ಎಂದಾದರೆ ಅಲ್ಲಿ ಹಾಲು ದೊರೆಯುತ್ತದೆಯೇ ಎಂದು ತಿಳಿಯುವುದನ್ನು ಮರೆಯಬೇಡಿ. ಏಕೆಂದರೆ ಅಮೆರಿಕಾದಲ್ಲಿ ಬಹಳಷ್ಟು ತೆರೆದ ಆಹಾರ ಪದಾರ್ಥಗಳ ಮೇಲೆ ನಿಷೇಧ ಹೇರಲಾಗಿದೆ. ಅಮೆರಿಕಾದ 22 ರಾಜ್ಯಗಳಲ್ಲಿ ಬಾದಾಮಿಯನ್ನು ಮುಕ್ತವಾಗಿ(ಪ್ಯಾಕ್ ಮಾಡದೇ) ಮಾರಾಟ ಮಾಡುವುದಕ್ಕೆ ನಿಷೇಧ ಹೇರಲಾಗಿದೆ.