Best food to manage thyroid : ಥೈರಾಯ್ಡ್ ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನ ಜನರನ್ನು ಅತಿಯಾಗಿ ಕಾಡುವ ಸಮಸ್ಯೆಯಾಗಿದೆ.ಇದು ವೇಗವಾಗಿ ಹೆಚ್ಚುತ್ತಿರುವ ಜೀವನಶೈಲಿ ರೋಗಗಳಲ್ಲಿ ಒಂದಾಗಿದೆ.ಥೈರಾಯ್ಡ್ ಸಮಸ್ಯೆ ಮಹಿಳೆಯರಲ್ಲಿ ಸಾಮಾನ್ಯವಾಗಿದೆ.ಥೈರಾಯ್ಡ್‌ನಿಂದಾಗಿ,ಅವರ ದೇಹದಲ್ಲಿನ ಹಾರ್ಮೋನ್ ಮಟ್ಟವು ಬದಲಾಗುತ್ತದೆ.ಹಾರ್ಮೋನ್ ನಲ್ಲಿ ಆಗುವ ಬದಲಾವಣೆಯಿಂದಾಗಿ ದೇಹ ತೂಕವು ತುಂಬಾ ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ ಅಥವಾ ಇಳಿಯಲು ಶುರುವಾಗುತ್ತದೆ. 


COMMERCIAL BREAK
SCROLL TO CONTINUE READING

ಥೈರಾಯ್ಡ್ ನಿಯಂತ್ರಣಕ್ಕೆ ಆಹಾರಗಳು :
ಥೈರಾಯ್ಡ್ ಸಮಸ್ಯೆ ಹೆಚ್ಚಾಗಲು ಅಥವಾ ನಿಯಂತ್ರಣಕ್ಕೆ ಬರಲು ನಾವು ಯಾವ ಆಹಾರ ಸೇವಿಸುತ್ತೇವೆ ಎನ್ನುವುದು ಬಹಳ ಮುಖ್ಯ.ಅಯೋಡಿನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳದಿದ್ದರೆ, ಥೈರಾಯ್ಡ್ ಸಮಸ್ಯೆಯು ಗಂಭೀರವಾಗಬಹುದು.ಇನ್ನು ನಿಯಮಿತವಾಗಿ ಕೆಲವು ವಿಶೇಷ ಆಹಾರಗಳನ್ನು ಸೇವಿಸಿದರೆ, ಥೈರಾಯ್ಡ್ ಅನ್ನು ನಿಯಂತ್ರಿಸುವುದು ಸುಲಭವಾಗುತ್ತದೆ.  ಥೈರಾಯ್ಡ್ ನಿಯಂತ್ರಣಕ್ಕೆ ಭಾರೀ ಪರಿಣಾಮಕಾರಿ ಎನ್ನುವಂಥಹ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ. 


ಇದನ್ನೂ ಓದಿ : ಡಯಾಬಿಟೀಸ್ ರೋಗಿಗಳಿಗೆ ಸಂಜೀವಿನಿ ಹಲಸಿನ ಹಣ್ಣು ! ದಿನಕ್ಕೆ ಇಷ್ಟು ಗ್ರಾಂ ಹಲಸು ಸೇವಿಸಿದರೆ ಮತ್ತೆ ಹತ್ತಿರವೂ ಸುಳಿಯದು ಮಧುಮೇಹ


ಬೆರಿ ಹಣ್ಣುಗಳು : 
ವಿವಿಧ ರೀತಿಯ ಬೆರಿಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ಲಭಿಸುತ್ತವೆ.ಆಂಟಿಆಕ್ಸಿಡೆಂಟ್‌ಗಳು ಮತ್ತು ಅಯೋಡಿನ್, ಸೆಲೆನಿಯಮ್ ಮತ್ತು ವಿಟಮಿನ್ ಡಿಯಂಥಹ ಪೋಷಕಾಂಶಗಳನ್ನು ಈ ಹಣ್ಣುಗಳಿಂದ ಪಡೆಯಬಹುದು.ಸ್ಟ್ರಾಬೆರಿ,ದ್ರಾಕ್ಷಿ, ನೆಲ್ಲಿ ಕಾಯಿ, ಕ್ರ್ಯಾನ್‌ಬೆರಿಗಳನ್ನು ಸೇವಿಸುವ ಮೂಲಕ ಥೈರಾಯ್ಡ್   ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.  


ಮೊಸರು : 
ಡೈರಿ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಅಯೋಡಿನ್ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ.ಇದು ಥೈರಾಯ್ಡ್ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.ವಯಸ್ಕ ವ್ಯಕ್ತಿಗೆ ದಿನಕ್ಕೆ 150mcg ಅಯೋಡಿನ್ ನ ಅಗತ್ಯವಿರುತ್ತದೆ.ಇದಕ್ಕಾಗಿ ದಿನಕ್ಕೆ 2 ಬೌಲ್ ಮೊಸರು ತಿನ್ನಬಹುದು.  


ನಾನ್ ವೆಜ್ ಆಹಾರಗಳು : 
ಮಾಂಸಾಹಾರಿ ಆಹಾರವನ್ನು ಸೇವಿಸುವ ಜನರಿಗೆ,ಕೋಳಿ,ಮಾಂಸ,ಮೀನು ಮತ್ತು ಸಮುದ್ರಾಹಾರವು ಥೈರಾಯ್ಡ್  ನಿಯಂತ್ರಣಕ್ಕೆ ಬಹಳ ಮುಖ್ಯ.ಈ ಆಹಾರಗಳಲ್ಲಿ ಸತು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಕಂಡುಬರುತ್ತವೆ.  ಇದು ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ. 


ಇದನ್ನೂ ಓದಿ : Dengue mosquito : ಸೊಳ್ಳೆ ಕಚ್ಚಿ ಎಷ್ಟು ದಿನಗಳ ನಂತರ ಡೆಂಗ್ಯೂ ಬರುತ್ತದೆ.. ತಡೆಯುವುದು ಹೇಗೆ..?


ಹೂಕೋಸು :
ಕೆಲವು ಅಧ್ಯಯನಗಳ ಪ್ರಕಾರ, ಕೋಸು ತರಕಾರಿಗಳ ಸೇವನೆಯು ಥೈರಾಯ್ಡ್ ರೋಗಿಗಳಿಗೆ ತುಂಬಾ ಒಳ್ಳೆಯದು.ಹೂಕೋಸು,ಕೋಸುಗಡ್ಡೆ ಮತ್ತು ಎಲೆಕೋಸು ಸೇವಿಸುವ ಮೂಲಕ ಥೈರಾಯ್ಡ್  ಅನ್ನು ನಿಯಂತ್ರಿಸಬಹುದು. 


ಮೊಟ್ಟೆ :
ದಿನಕ್ಕೆ ಒಂದು ಮೊಟ್ಟೆಯನ್ನು ತಿನ್ನುವುದರ ಮೂಲಕ ದೇಹಕ್ಕೆ ಅಗತ್ಯವಿರುವ ಅಯೋಡಿನ್ ಸಿಗುತ್ತದೆ.ಒಂದು ಮೊಟ್ಟೆಯು ಸುಮಾರು 16 ಪ್ರತಿಶತ  ಅಯೋಡಿನ್ ಅನ್ನು ದೇಹಕ್ಕೆ ಒದಗಿಸುತ್ತದೆ.ಹಾಗಾಗಿ ಥೈರಾಯ್ಡ್ ರೋಗಿಗಳು  ಪ್ರತಿದಿನ ಮೊಟ್ಟೆಯನ್ನು ಸೇವಿಸಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ