ಒಂದೇ ವಾರದಲ್ಲಿ ಕೊಲೆಸ್ಟ್ರಾಲ್ ಅನ್ನು ಕರಗಿಸಿ ಬಿಡುತ್ತದೆ ಈ ಆಹಾರ ! ಹಾರ್ಟ್ ಅಟ್ಯಾಕ್ ಅಪಾಯ ಕೂಡಾ ತಪ್ಪುವುದು !
Tips To Reduce Cholesterol Quickly:ಕೆಲವು ಆಹಾರಗಳು ನಮ್ಮ ನಾಡಿಗಳಲ್ಲಿ ಸೇರಿಕೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಅನೇಕ ಆಹಾರಗಳು ಕರಗುವ ಫೈಬರ್ ಅನ್ನು ಹೊಂದಿರುತ್ತವೆ.ಇದು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ.
Tips To Reduce Cholesterol Quickly : ನಾವು ಏನು ಆಹಾರ ತಿನ್ನುತ್ತೇವೆ ಎನ್ನುವುದೇ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವುದು.ನಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಬೇಕಾದರೆ ಆಹಾರ ಪದ್ದತಿಯಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕು.ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಇದು ಗಂಭೀರ ಸಮಸ್ಯೆಯಾಗಿದ್ದು,ಹೃದ್ರೋಗಕ್ಕೆ ಕಾರಣವಾಗಬಹುದು.ಆದರೆ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು,ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಬಹಳ ಅಗತ್ಯ.
ಕೆಲವು ಆಹಾರಗಳು ನಮ್ಮ ನಾಡಿಗಳಲ್ಲಿ ಸೇರಿಕೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಅನೇಕ ಆಹಾರಗಳು ಕರಗುವ ಫೈಬರ್ ಅನ್ನು ಹೊಂದಿರುತ್ತವೆ.ಇದು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ.
ಇದನ್ನೂ ಓದಿ : ಏನೇ ಮಾಡಿದರೂ ತೂಕ ಕಡಿಮೆಯಾಗುತ್ತಿಲ್ಲವೇ? ಹಾಗಿದ್ದರೆ ಮಲಗುವ ಮುನ್ನ ಇದೊಂದು ಕೆಲಸ ಮಾಡಿ ಸಾಕು, ಒಂದೇ ವಾರದಲ್ಲಿ ತಿಳಿಯುವುದು ವ್ಯತ್ಯಾಸ
ಕೊಲೆಸ್ಟ್ರಾಲ್ ಕರಗಿಸಲು ಈ ಆಹಾರ ಸೇವಿಸಿ :
ಓಟ್ಸ್ :
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಓಟ್ಸ್ ಅತ್ಯಂತ ಪರಿಣಾಮಕಾರಿ.ಬೆಳಗಿನ ಉಪಾಹಾರಕ್ಕಾಗಿ ಓಟ್ಸ್ ಸೇವಿಸುವ ಮೂಲಕ 1 ರಿಂದ 2 ಗ್ರಾಂ ಕರಗುವ ಫೈಬರ್ ದೇಹ ಸೇರುತ್ತದೆ. ಕರಗುವ ಫೈಬರ್ ದೇಹದಿಂದ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಳಕು ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಬೀನ್ಸ್ :
ಬೀನ್ಸ್, ಬದನೆಕಾಯಿ ಮತ್ತು ಬೆಂಡೆಕಾಯಿ ಕೊಲೆಸ್ಟ್ರಾಲ್ ರೋಗಿಗಳಿಗೆ ರಾಮಬಾಣ ಎದ್ನು ಹೇಳಲಾಗುತ್ತದೆ.ಈ ತರಕಾರಿಗಳು ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕರಗಿಸಿ ದೇಹದಿಂದ ಹೊರ ಹಾಕುತ್ತದೆ.
ಇದನ್ನೂ ಓದಿ : ಟೆಸ್ಟ್ ಮಾಡಿಸಲೇ ಬೇಕು ಎಂದೇನಿಲ್ಲ ! ಕಾಲುಗಳಲ್ಲಿ ಈ ಬದಲಾವಣೆಗಳು ಕಂಡು ಬಂದರೆ ನಿಮಗೆ ಮಧುಮೇಹ ಇರುವುದು ಪಕ್ಕಾ !
ಬಾದಾಮಿ, ವಾಲ್‌ನಟ್ಸ್, ಕಡಲೆಕಾಯಿ ಮತ್ತು ಇತರ ಬೀಜಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಪ್ರತಿದಿನ ಈ ಪದಾರ್ಥಗಳನ್ನು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.ಕೆನೋಲ,ಸೂರ್ಯಕಾಂತಿ, ಕುಸುಬೆ ಮುಂತಾದ ದ್ರವ ಸಸ್ಯಜನ್ಯ ಎಣ್ಣೆಗಳನ್ನು ಅಡುಗೆಗೆ ಬಳಸುವುದರಿಂದ LDL ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸೇಬು, ದ್ರಾಕ್ಷಿ, ಸ್ಟ್ರಾಬೆರಿಗಳಂತಹ ಸಿಟ್ರಸ್ ಹಣ್ಣುಗಳಲ್ಲಿ ಪೆಕ್ಟಿನ್‌ನಲ್ಲಿ ಸಮೃದ್ಧವಾಗಿರುತ್ತವೆ.ಇದು ಕರಗುವ ಫೈಬರ್‌ನ ಒಂದು ವಿಧವಾಗಿದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿದೆ.
ಸೋಯಾಬೀನ್ ಮತ್ತು ಅದರಿಂದ ತಯಾರಿಸಿದ ಆಹಾರಗಳಾದ ತೋಫು ಮತ್ತು ಸೋಯಾ ಹಾಲು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಪ್ರಬಲ ಮಾರ್ಗ. ಪ್ರತಿದಿನ 25 ಗ್ರಾಂ ಸೋಯಾ ಪ್ರೋಟೀನ್ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು 5% ರಿಂದ 6% ರಷ್ಟು ಕಡಿಮೆ ಮಾಡಬಹುದು ಎನ್ನುವುದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ.
ಇದನ್ನೂ ಓದಿ : ನಟಿ ಖುಷ್ಬು ಹೇಳಿದ ಈ ಹೇರ್ ಪ್ಯಾಕ್ ಟ್ರೈ ಮಾಡಿ..! ನಿಮ್ಮ ಬಿಳಿ ಕೂದಲೂ ಕಪ್ಪಾಗುತ್ತವೆ..
ವಾರದಲ್ಲಿ ಎರಡು ಅಥವಾ ಮೂರು ಬಾರಿ ಮೀನು ತಿನ್ನುವುದರಿಂದ LDL ಕಡಿಮೆಯಾಗುತ್ತದೆ.ಮೀನಿನಲ್ಲಿ ಒಮೆಗಾ -3 ಕೊಬ್ಬಿನಂಶವಿರುತ್ತದೆ. ಇದು ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.